ಈ ಮತ್ರ್ಯಧೂಳಿಯಲಿ
ಈ ಮತ್ರ್ಯಧೂಳಿಯಲಿ ಹುಟ್ಟಿಬೆಳೆದೆವು ನಾವು ಈ ಧೂಳಿಯಲಿ ದೃಷ್ಟಿ ಕುರುಡಾಯಿತು | ಈ ಮಣ್ಣಿನಲಿ ನಾವು ಮಕ್ಕಳಂತಾಡಿದೆವು ಅಭಯವನು ನೀಡಯ್ಯ ದಿವ್ಯಗುರುವೆ || ನಮ್ಮ ಏನೋ ಒಂದು ಅಲ್ಪ ತಪ್ಪಿಗೆ ನೀನು ನಿನ್ನ ಮಡಿಲಿಂದಾಚೆ ನೂಕಲಿಹೆಯಾ | ನೀನೆ ನಮ್ಮನು ತಳ್ಳಿ ಅನಾಥರಂದದಲಿ ತೊಳಲಿಸುವೆಯಾ ನಮ್ಮ ಬಳಲಿಸುವೆಯಾ || ಹೇ ಪ್ರಭುವೆ ಹಾಗೆಂದಿಗೂ ಗೈಯಬೇಡ ನಮ್ಮನೆಂದಿಗು ಆಚೆ ನೂಕಬೇಡ | ನಾವು ಅಲ್ಪರು ಗುರುವೆ, ಸಿಟ್ಟಾಗದಿರು ಪ್ರಭುವೆ ಮೃದುನುಡಿಯೊಳೆಮ್ಮೊಡನೆ ಮಾತನಾಡು || ನಿನ್ನೆದುರು ನಾವೆಲ್ಲ ಬರಿಯ ಹಸುಳೆಗಳಯ್ಯ […]