ಅಯ್ಯಾ, ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ

ಅಯ್ಯಾ, ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ. ಅಯ್ಯಾ, ನಿಮ್ಮ ಶರಣರಿದ್ದ ಪುರವೆ ಕೈಲಾಸಪುರವಯ್ಯಾ. ಅಯ್ಯಾ, ನಿಮ್ಮ ಶರಣರು ನಿಂದುದೆ ನಿಜನಿವಾಸವಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿ, ಆನು ಸಂಗನಬಸವಣ್ಣನ ಶ್ರೀಪಾದಕ್ಕೆನಮೋ ನಮೋ ಎನುತಿರ್ದೆನು.

ಅಯ್ಯಾ, ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ Read More »

ಅಯ್ಯಾ, ನಿಮ್ಮ ಶರಣರ ಬರವಿಂಗೆ

ಅಯ್ಯಾ, ನಿಮ್ಮ ಶರಣರ ಬರವಿಂಗೆ ಗುಡಿ ತೋರಣವ ಕಟ್ಟುವೆ. ಅಯ್ಯಾ, ನಿಮ್ಮ ಶರಣರ ಬರವಿಂಗೆ ಮುಡುಹಿನಲ್ಲಿ ಪಟ್ಟವ ಕಟ್ಟುವೆ. ಅಯ್ಯಾ, ನಿಮ್ಮ ಶರಣರೆನ್ನ ಮನೆಗೆ ಬಂದಡೆ, ಅವರ ಶ್ರೀಪಾದವನೆನ್ನ ಹೃದಯದಲ್ಲಿ ಬಗೆದಿಟ್ಟುಕೊಂಬೆ,ಕಾಣಾ ಚೆನ್ನಮಲ್ಲಿಕಾರ್ಜುನಾ.

ಅಯ್ಯಾ, ನಿಮ್ಮ ಶರಣರ ಬರವಿಂಗೆ Read More »

ಅಯ್ಯಾ, ನಿಮ್ಮ ಶರಣರ ಕೂಡಿದ

ಅಯ್ಯಾ, ನಿಮ್ಮ ಶರಣರ ಕೂಡಿದ ಸುಖವನುಪಮೆಗೆ ತರಬಾರದಯ್ಯಾ. ಅಯ್ಯಾ, ನಿಮ್ಮ ಮಹಂತರ ಕೂಡಿ ಅಗಲುವ ಧಾವತಿಗಿಂತ ಸಾವುದೇ ಕರಲೇಸಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮನರುಹಿದ ಮಹಿಮರನಗಲಿಆನು ನಿಲ್ಲಲಾರೆನಯ್ಯಾ.

ಅಯ್ಯಾ, ನಿಮ್ಮ ಶರಣರ ಕೂಡಿದ Read More »

ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ

ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ತನು ಶುದ್ಧವಾಯಿತ್ತು. ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ಮನ ಶುದ್ಧವಾಯಿತ್ತು. ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ಪ್ರಾಣ ಶುದ್ಧವಾಯಿತ್ತು. ಅಯ್ಯಾ, ನಿಮ್ಮ ಅನುಭಾವಿಗಳು ಎನ್ನ ಒರೆದೊರೆದು ಆಗುಮಾಡಿದ ಕಾರಣ ಚೆನ್ನಮಲ್ಲಿಕಾರ್ಜುನಯ್ಯಾ, ನಿಮಗಾನು ತೊಡಿಗೆಯಾದೆನು.

ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ Read More »

ಅಯ್ಯಾ, ಚಿದಂಗ ಚಿದ್ಘನಲಿಂಗ

ಅಯ್ಯಾ, ಚಿದಂಗ ಚಿದ್ಘನಲಿಂಗ ಶಕ್ತಿ ಭಕ್ತಿ ಹಸ್ತ ಮುಖ ಪದಾರ್ಥ ಪ್ರಸಾದ ಎಂಬಿವಾದಿಯಾದ ಸಮಸ್ತ ಸಕೀಲಂಗಳ ನೆಲೆ ಕಲೆಯರಿಯದೆ, ಜಿಹ್ವಾಲಂಪಟಕ್ಕೆ ಆಹ್ವಾನಿಸಿ, ಗುಹ್ಯಾಲಂಪಟಕ್ಕೆ ವಿಸರ್ಜಿಸಿ, ಸಕಲೇಂದ್ರಿಯಮುಖದಲ್ಲಿ ಮೋಹಿಯಾಗಿ, ಸದ್ಗುರುಕರುಣಾಮೃತರಸ ತಾನೆಂದರಿಯದೆ ಬರಿದೆ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಗುರುಚರಪರವೆಂದು ಬೊಗಳುವ ಕುನ್ನಿಗಳ ನೋಡಿ ಎನ್ನ ಮನ ಬೆರಗು ನಿಬ್ಬೆರಗು ಆಯಿತ್ತಯ್ಯಾ,ಚೆನ್ನಮಲ್ಲಿಕಾರ್ಜುನಾ.

ಅಯ್ಯಾ, ಚಿದಂಗ ಚಿದ್ಘನಲಿಂಗ Read More »

ಅಯ್ಯಾ, ಕತ್ತಲೆಯ ಕಳೆದುಳಿದ ಸತ್ಯಶರಣರ

ಅಯ್ಯಾ, ಕತ್ತಲೆಯ ಕಳೆದುಳಿದ ಸತ್ಯಶರಣರ ಪರಿಯನೇನೆಂಬೆನಯ್ಯಾ ಘನವನೊಳಕೊಂಡ ಮನದ ಮಹಾನುಭಾವಿಗಳ ಬಳಿವಿಡಿದು ಬದುಕುವೆನಯ್ಯಾ. ಅಯ್ಯಾ, ನಿನ್ನಲ್ಲಿ ನಿಂದು ಬೇರೊಂದರಿಯದ ಲಿಂಗಸುಖಿಗಳ ಸಂಗದಲ್ಲಿ ದಿನವ ಕಳೆಯಿಸಯ್ಯಾಚೆನ್ನಮಲ್ಲಿಕಾರ್ಜುನಾ.

ಅಯ್ಯಾ, ಕತ್ತಲೆಯ ಕಳೆದುಳಿದ ಸತ್ಯಶರಣರ Read More »

ಅಂಗೈಯೊಳಗಣ ಲಿಂಗವ ಪೂಜಿಸುತ್ತ,

ಅಂಗೈಯೊಳಗಣ ಲಿಂಗವ ಪೂಜಿಸುತ್ತ, ಮಂಗಳಾರತಿಗಳನು ತೊಳಗಿ ಬೆಳಗುತ್ತಲಿರ್ದೆ ನೋಡಯ್ಯಾ. ಕಂಗಳ ನೋಟ, ಕರುವಿಟ್ಟ ಭಾವ, ಹಿಂಗದ ಮೋಹ ತೆರಹಿಲ್ಲದಿರ್ದೆ ನೋಡಯ್ಯಾ, ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ.

ಅಂಗೈಯೊಳಗಣ ಲಿಂಗವ ಪೂಜಿಸುತ್ತ, Read More »

ಅಂಗಸಂಗದಲ್ಲಿ ಲಿಂಗಸಂಗಿಯಾದೆನು.

ಅಂಗಸಂಗದಲ್ಲಿ ಲಿಂಗಸಂಗಿಯಾದೆನು. ಲಿಂಗಸಂಗದಲ್ಲಿ ಅಂಗಸಂಗಿಯಾದೆನು. ಉಭಯಸಂಗವನೂ ಅರಿಯದೆ ಪರಿಣಾಮಿಯಾದೆನು. ನುಡಿಯ ಗಡಣವ ಮರೆದು ತೆರಹಿಲ್ಲದಿದ್ದೆನು. ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಬೆರಸಿದ ಬಳಿಕ ಎನ್ನ ನಾನು ಏನೆಂದೂ ಅರಿಯೆನಯ್ಯಾ.

ಅಂಗಸಂಗದಲ್ಲಿ ಲಿಂಗಸಂಗಿಯಾದೆನು. Read More »

ಅಂಗವಿಕಾರಸಂಗವ ಮರೆದು,

ಅಂಗವಿಕಾರಸಂಗವ ಮರೆದು, ಲಿಂಗವನೊಡಗೂಡುತಿಪ್ಪವರ ತೋರಾ ಎನಗೆ. ಕಾಮವಿಕಾರಕತ್ತಲೆಯಳಿದು, ಭಕ್ತಿಪ್ರಾಣವಾಗಿಪ್ಪವರ ತೋರಾ ಎನಗೆ. ತ್ರಿಕರಣ ಶುದ್ಧವಾಗಿ ನಿಮ್ಮ ನೆರೆ ನಂಬಿದಸದ್ಭಕ್ತರ ತೋರಾ ಎನಗೆ ಚೆನ್ನಮಲ್ಲಿಕಾರ್ಜುನಾ.

ಅಂಗವಿಕಾರಸಂಗವ ಮರೆದು, Read More »

ಅಂಗವ ಲಿಂಗಮುಖದಲ್ಲಿ ಅರ್ಪಿಸಿ,

ಅಂಗವ ಲಿಂಗಮುಖದಲ್ಲಿ ಅರ್ಪಿಸಿ, ಅಂಗ ಅನಂಗವಾಯಿತ್ತು. ಮನವ ಅರಿವಿಂಗರ್ಪಿಸಿ, ಮನ ಲಯವಾಯಿತ್ತು. ಭಾವವ ತೃಪ್ತಿಗರ್ಪಿಸಿ, ಭಾವ ಬಯಲಾಯಿತ್ತು. ಅಂಗ ಮನ ಭಾವವಳಿದ ಕಾರಣ ಕಾಯ ಅಕಾಯವಾಯಿತ್ತು. ಎನ್ನ ಕಾಯದ ಸುಖಭೋಗವ ಲಿಂಗವೆ ಭೋಗಿಸುವನಾಗಿ, ಶರಣಸತಿ ಲಿಂಗಪತಿಯಾದೆನು. ಇದು ಕಾರಣ, ಚೆನ್ನಮಲ್ಲಿಕಾರ್ಜುನನೆಂಬ ಗಂಡನಒಳಹೊಕ್ಕು ಬೆರಸಿದೆನು.

ಅಂಗವ ಲಿಂಗಮುಖದಲ್ಲಿ ಅರ್ಪಿಸಿ, Read More »

ಅಯ್ಯಾ, ನೀನೆನ್ನ ಮೊರೆಯನಾಲಿಸಿದಡಾಲಿಸು,

ಅಯ್ಯಾ, ನೀನೆನ್ನ ಮೊರೆಯನಾಲಿಸಿದಡಾಲಿಸು, ಆಲಿಸದಿರ್ದಡೆ ಮಾಣು. ಅಯ್ಯಾ, ನೀನೆನ್ನ ದುಃಖವ ನೋಡಿದಡೆ ನೋಡು, ನೋಡದಿರ್ದಡೆ ಮಾಣು. ನಿನಗಿದು ವಿಧಿಯೆ ? ನೀನೊಲ್ಲದಡೆ ಆನೊಲಿಸುವ ಪರಿಯೆಂತಯ್ಯಾ ? ಮನವೆಳಸಿ ಮಾರುವೋಗಿ ಮರೆವೊಕ್ಕಡ ಕೊಂಬ ಪರಿಯೆಂತಯ್ಯಾ ಚೆನ್ನಮಲ್ಲಿಕಾರ್ಜುನಾ ?ಆಲಿಸದಿರ್ದಡೆ ಮಾಣು. ಅಯ್ಯಾ, ನೀನೆನ್ನ ದುಃಖವ ನೋಡಿದಡೆ ನೋಡು, ನೋಡದಿರ್ದಡೆ ಮಾಣು. ನಿನಗಿದು ವಿಧಿಯೆ ? ನೀನೊಲ್ಲದಡೆ ಆನೊಲಿಸುವ ಪರಿಯೆಂತಯ್ಯಾ ? ಮನವೆಳಸಿ ಮಾರುವೋಗಿ ಮರೆವೊಕ್ಕಡೆಕೊಂಬ ಪರಿಯೆಂತಯ್ಯಾ ಚೆನ್ನಮಲ್ಲಿಕಾರ್ಜುನಾ ?

ಅಯ್ಯಾ, ನೀನೆನ್ನ ಮೊರೆಯನಾಲಿಸಿದಡಾಲಿಸು, Read More »

ಅಂಗದೊಳಗೆ ಅಂಗವಾಗಿ, ಅಂಗವ ಲಿಂಗೈಕ್ಯವ ಮಾಡಿದೆ.

ಅಂಗದೊಳಗೆ ಅಂಗವಾಗಿ, ಅಂಗವ ಲಿಂಗೈಕ್ಯವ ಮಾಡಿದೆ. ಮನದೊಳಗೆ ಮನವಾಗಿ, ಮನವ ಲಿಂಗೈಕ್ಯವ ಮಾಡಿದೆ. ಭಾವದೊಳಗೆ ಭಾವವಾಗಿ, ಭಾವವ ಲಿಂಗೈಕ್ಯವ ಮಾಡಿದೆ. ಅರಿವಿನೊಳಗೆ ಅರಿವಾಗಿ, ಅರಿವ ಲಿಂಗೈಕ್ಯವ ಮಾಡಿದೆ. ಜ್ಞಾನದೊಳಗೆ ಜ್ಞಾನವಾಗಿ, ಜ್ಞಾನವ ಲಿಂಗೈಕ್ಯವ ಮಾಡಿದೆ. ಕ್ರೀಗಳೆಲ್ಲವ ನಿಲಿಸಿ ಕ್ರಿಯಾತೀತವಾಗಿ, ನಿಃಪತಿ ಲಿಂಗೈಕ್ಯವ ಮಾಡಿದೆ. ನಾನೆಂಬುದ ನಿಲಿಸಿ, ನೀನೆಂಬುದ ಕೆಡಿಸಿ, ಉಭಯವ ಲಿಂಗೈಕ್ಯವ ಮಾಡದೆ. ಚೆನ್ನಮಲ್ಲಿಕಾರ್ಜುನಯ್ಯನೊಳಗೆ ನಾನಳಿದೆನಾಗಿ, ಲಿಂಗವೆಂಬ ಘನವು ಎನ್ನಲ್ಲಿಅಳಿಯಿತ್ತು ಕಾಣಾ ಸಂಗನಬಸವಣ್ಣಾ.

ಅಂಗದೊಳಗೆ ಅಂಗವಾಗಿ, ಅಂಗವ ಲಿಂಗೈಕ್ಯವ ಮಾಡಿದೆ. Read More »

ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ

ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ.||1|| ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ.||2|| ಜೀವದ ಭಂಗವ ಶಿವಾನುಭಾವದಿಂದ ಗೆಲಿದೆ.||3|| ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ.||4|| ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಂಗೆ ತೋರುವ ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯಾ ?||5|| ಚೆನ್ನಮಲ್ಲಿಕಾರ್ಜುನ, ಕಾಮನಕೊಂದು ಮನಸಿಜನಾಗುಳುಹಿದಡೆ||6|| ಮನಸಿಜನ ತಲೆಯ ಬರಹವ ತೊಡೆದೆನು.||7||

ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ Read More »

ಅಂಗ, ಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು

ಅಂಗ, ಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು.||1|| ಮನ, ಲಿಂಗವ ವೇಧಿಸಿ, ಮನ ಲಿಂಗದೊಳಗಾಯಿತ್ತು.||2|| ಭಾವ, ಲಿಂಗವ ವೇಧಿಸಿ, ಭಾವ ಲಿಂಗದೊಳಗಾಯಿತ್ತು.|||3|| ಚೆನ್ನಮಲ್ಲಿಕಾರ್ಜುನಾ,ನಿಮ್ಮ ಒಲುಮೆಯ ಸಂಗದಲ್ಲಿರ್ದು ಸ್ವಯಲಿಂಗವಾಯಿತ್ತು||4||

ಅಂಗ, ಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು Read More »

ಅಂಗ ಕ್ರಿಯಾಲಿಂಗವ ವೇಧಿಸಿ,

ಅಂಗ ಕ್ರಿಯಾಲಿಂಗವ ವೇಧಿಸಿ, ಅಂಗ ಲಿಂಗದೊಳಗಾಯಿತ್ತು.||1|| ಮನ ಅರಿವ ಬೆರಸಿ, ಜಂಗಮ ಸೇವೆಯ ಮಾಡಿ, ಮನ ಜಂಗಮಲಿಂಗದೊಳಗಾಯಿತ್ತು.||2|| ಭಾವ ಗುರುಲಿಂಗದೊಳಗೆ ಬೆರಸಿ, ಮಹಾಪ್ರಸಾದವ ಭೋಗಿಸಿ, ಭಾವ ಗುರುಲಿಂಗದೊಳಗಾಯಿತ್ತು.||3|| ಚೆನ್ನಮಲ್ಲಿಕಾರ್ಜುನಾ, ನಿಮ್ಮ ಒಲುಮೆಯಿಂದ ಸಂದಳಿದು ಸ್ವಯಲಿಂಗಿಯಾದೆನಯ್ಯಾ ಪ್ರಭುವೆ||4||

ಅಂಗ ಕ್ರಿಯಾಲಿಂಗವ ವೇಧಿಸಿ, Read More »

ಆಂಜನೇಯಾ ಕುಂತಿತನಯಾ

ಆಂಜನೇಯಾ ಕುಂತಿತನಯಾ | ಕಂಜಲೋಚನ ಪ್ರಿಯಾ | ಮಧ್ವಾಖ್ಯರಾಯಾ | ಸಂಜೀವಧರಣ ಧನಂಜಯ ಪೂರ್ವಜ | ಅಂಜದ ದುರ್ವಾದಿ ಭಂಜ ಪೂಭಂಜನ ಯಾಗಾಭಿಮಾನಿಗಳನು | ಯೋಗದಿಂದಲಿ ಪಡೆದಾ | ಆಗಮತತಿ ವಂದ್ಯ ಅನಿಂದ್ಯಾ | ಭಾಗತ್ರಯದಲ್ಲಿ ವಿ | ಭಾU Àಮಾಡಲು ಅಂದು | ನಾಗಭೂಷಣನ ಪೆತ್ತಾಸೆ ಚಿತ್ತ | ಭಾಗವೆ ನಿನ್ನ ವೈ | ಭೋಗದ ಚರಣಕೆ | ಸಾಗರ ಹಾರಿದ ಹೇ ಗುಣಪೂರ್ಣನೆ | ರಾಗ ಭಕುತಿಯಿಂದ ಭೋಗದೊಳಗೆ ಮೇಲು | ಬಾಗಿಲ ಸಾರುವ

ಆಂಜನೇಯಾ ಕುಂತಿತನಯಾ Read More »

ಅರ್ಚನೆ ಬಗೆ ಕೇಳಿ ಲೋಕ

ಅರ್ಚನೆ ಬಗೆ ಕೇಳಿ ಲೋಕ ಕಣ್ಣು ಮುಚ್ಚಿ ಕುಳಿತರೆ ಕೊಡ ಹರಿ ಮುಕ್ತಿಲೋಕಾ ಜಡವ ಪೂಜಿಸಿದರಲ್ಲೇನೊ ತಾನು | ಜಡ ತುಲ್ಯ | ನಾಗಿದ್ದಕೆ ಸಮವೇನು || ಕೆಡದಿರು ಇದರೊಳಗೆ ನೀನು ತಿಳಿ | ಒಡನೆ ಕರ್ಮಗಳೆಲ್ಲೇನುಂಟು ಕಾಣೋ ||1|| ಏಕಾಂತದಲಿ ನಿನ್ನ ಮನಸು ಅ | ನೇಕವಾಗುವುದು ನಿರಂತರ ಗುಣಿಸು || ನೀ ಕೇಳು ಯೋಚಿಸಿ ಗಣಿಸು | ಸರ್ವ ಆಕಾರದಲ್ಲಿ ಶ್ರೀ ಹರಿಯನ್ನೆ ನೆನಸು ||2|| ತ್ರಿವಿಧ ಜೀವರು ಮಾಡುವಂಥ ನಡತಿ | ಹವಣವ

ಅರ್ಚನೆ ಬಗೆ ಕೇಳಿ ಲೋಕ Read More »

ಅರಿವರಿಗಿಲ್ಲೆ ಹರಿಪುರವೊ | ಹರದಾರಿ

ಅರಿವರಿಗಿಲ್ಲೆ ಹರಿಪುರವೊ | ಹರದಾರಿ ಕೂಗಳತಿ ಎಂಬೊ ಸಂಶಯಸಲ್ಲಾಪ ಸಮಚಿತ್ತದಲ್ಲಿ ಇದ್ದು | ಸಮ ವಿಷಮ ತಿಳಿದೆದ್ದು | ಕುಮತ ಮತವನು ವದ್ದು | ಬಲು ಉಬ್ಬೆದ್ದು | ಕಮಲ ಪೀಠನ ಹೊದ್ದು | ಕ್ರಮಣಿ ಯೋಪಾದಿಯಲಿದ್ದು | ತಮಕ್ಕೆ ಹರಿನಾಮ ಮದ್ದು | ಶ್ರಮ ಕಳುಕದವಗೆ||1|| ಭಾಗವತರ ನೋಡಿ | ವೇಗ ಮನಸನು ಮಾಡಿ | ಬಾಗಿ ಸಿರವನೆ ನೀಡಿ | ನಲಿದು ಪಾಡಿ | ಯೋಗವಾಗದೆ ಕೂಡಿ | ಭೋಗವನು ಈಡಾಡಿ | ತೂಗಿ

ಅರಿವರಿಗಿಲ್ಲೆ ಹರಿಪುರವೊ | ಹರದಾರಿ Read More »

ಅಭಯ ಗಿರಿಯವಾಸ ಶ್ರೀನಿವಾಸನು

ಅಭಯ ಗಿರಿಯವಾಸ ಶ್ರೀನಿವಾಸನು ನಮಗೆ | ಶುಭವೀವ ನಿರುತ ಮಂದಹಾಸನೊ ಧೇನಿಪರ ಮನಕೆ ಚಿಂತಾಮಣಿಯೋ ಸ್ವಾಮಿ | ನೀನೆ ಗತಿಯೆಂಬರಿಗೆ ಹೊಣೆಯೋ e್ಞÁನಮಯ ಸಂದಣಿಯೊ ಪುಣ್ಯ ಕಾನನ ನಿವಾಸ ಸುರಖಣಿಯೊ ||1|| ಶರಣರಿಗೆ ವಜ್ರ ಪಂಜರನೋ ದುಷ್ಟ ದುರುಳ ದೈತ್ಯರಿಗೆ ಝರ್ಝರನೊ ದುರಿತ ಕದಳಿಗೆ ಕುಂಜರನೊ ಸ್ವಾಮಿ ಉರಗತಲ್ಪನಾದ ಸಿರಿವರನೊ ||2|| ಪರಮೇಷ್ಟಿ ಶಿವರೊಳಗಿಪ್ಪನೋ ಇಂದು ಮರುತನ ಪೆಗಲೇರಿ ಬಪ್ಪನೊ ಶರಣರಿಗೊರವೀಯೆ ತಪ್ಪನೋ ನಮ್ಮ ಸಿರಿ ವಿಜಯವಿಠ್ಠಲ ತಿಮ್ಮಪ್ಪನೊ ||3||

ಅಭಯ ಗಿರಿಯವಾಸ ಶ್ರೀನಿವಾಸನು Read More »

ಅಪ್ಪನ ನೋಡಿರೊ ವರಗಳ

ಅಪ್ಪನ ನೋಡಿರೊ ವರಗಳ ತಪ್ಪದೆ ಬೇಡಿರೋ ಸರ್ಪನಮೇಲೆ ಉಪ್ಪವಡಿಸಿ ಮುಪ್ಪು ಇಲ್ಲದೆ ಭಕ್ತರನ ಪೊರೆವಾ ಇಂದ್ರ ನೀಲಿದ ರತನೋ ಕಾಂತಿ ಚಂದ್ರಬಿಂಬ ವದನೋ ಚಂದ್ರಿಕೆಯ ಪೋಲಿಪ ಮುಖವೊ ಬಲುವಾ ನಂದಗಡಲ ಸುಖವೊ ಮುಂದಿನ ಬೆಳಸುವ ಮಿಂಚೋ ತೂಗುವ ಸುಳಿಗುರುಳ ಚುಂಚೊ ಒಂದೊಂದೊ ದಕ್ಕನಂತಾದ ಸುಂದರದವತಾರ ಮಂದರಧರನೋ ||1|| ಅರಳಿದ ಸಂಪಿಗೆ ತೆನೆಯು ನಾಸಾ ಕೊನೆಯಲ್ಲಿ ಮಣಿಯು ತರುಳ ಹಾರವೋ ಮುಂದಲೆಯಲ್ಲಿ ಅರಳೆಲೆ ವೈಯಾರವೋ ಎರಳಿಯ ಗಂಗಳೋ ನೊಸುಲಲಿ ತಿಲಕಾಂಬರದ ಬಿದಿಗೆ ತಿಂಗಳೊ ಪರಿಪರಿ ನಗೆ ಸಾವಿರ ಮಿಹಿರನಂತೆ

ಅಪ್ಪನ ನೋಡಿರೊ ವರಗಳ Read More »

ಅನ್ಯಾಯದಲಿ ಬಾಳಿ ಬದಕೋರೆ

ಅನ್ಯಾಯದಲಿ ಬಾಳಿ ಬದಕೋರೆ | ನಾಳೆ | ಕಿನ್ನೇಶದೂತರು ಎಳಿಯಾರೆ ಹಿಂದಿನ ದುಃಖವ ನೆನಸಿಕೊ | ನೀನು | ಬಂದದೆ ಒಂದೊಂದು ಗುಣಿಸಿಕೊ | ಮುಂದೀಗ ಎಚ್ಚತ್ತು ನೋಡಿಕೊ | ಇದು ಸಂದೇಹವೆನದೆ ನಿಜವಾಗಿ ತಿಳಿದಕೊ ||1|| ಗರ್ಭಯಾತನೆ ಬಲು ಹೇಸಿಕೆ | ವಳಗೆ | ನಿರ್ಬಂಧವಾಗಿ ಬೆಳೆದು ಮೇಲಕೆ | ದೊಬ್ಬುವರು ನಿನ್ನ ಕೆಳಿಯಿಕೆ | ಬಿದ್ದು ಅಬ್ಬಬ್ಬ ಐಯ್ಯಯ್ಯವೆಂದು ಅಳಲೇಕೆ||2|| ಬಾಯಿಗೆ ಬಜೆ ಬೆಣ್ಣೆ ಕೊಡುವರು | ತಾಯಿ | ಬಳಗವೆಲ್ಲ ಸಂತೋಷಬಡುವರು |

ಅನ್ಯಾಯದಲಿ ಬಾಳಿ ಬದಕೋರೆ Read More »

ಅನಂತಗಿರಿ ಯಾತ್ರೆ ಮಾಡಿ

ಅನಂತಗಿರಿ ಯಾತ್ರೆ ಮಾಡಿ ಜನರು ಅನಂತ ಜನುಮದ ಪಾಪ ಸಂಹರವು ಇಲ್ಲಿ ಕುರುರಾಯ ಜನ್ಮಾಂತರದು ಪಾಪ ನಿಲ್ಲದೆ ಮಾಡಿದಾ ನಡತಿಯಿಂದಾ ಎಲ್ಲ ಕಾಲದಲಿ ದರಿದ್ರನಾಗಿದ್ದು ಶ್ರೀ ವಲ್ಲಭನ ಒಲಿಸಿ ಮುದಂಬರೀಷ ನೃಪನಾದಾ ||1|| ಚಂಡಶಾಸನನೆಂಬ ನೃಪತಿ ದುರ್ಮತಿಯಲಿ ಮಂಡಲದೊಳಗಿರಲು ಸರ್ಪ ಕಚ್ಚಿ ಕಂಡು ಗೃಧ್ರವು ಅವನ ಉಂಗುಷ್ಟ ಭವನಾಶಿ ಕುಂಡದಲಿ ಬಿಸುಡೆ ದಶರಥ ಭೂಪತಿಯಾದಾ||2|| ಹೇಳಲಳವೆ ಇನ್ನು ಈ ಕ್ಷೇತ್ರದÀ ಮಹಿಮೆ ಕೇಳಿದಾಕ್ಷಣ ಮುಕ್ತಿ ಸಿದ್ಧವಕ್ಕೂ ಶ್ರೀಲೋಲ ನರಸಿಂಹ ವಿಜಯವಿಠ್ಠಲರೇಯೇನ ವಾಲಗವ ಕೈಕೊಂಡ ಮನುಜಂಗೆ ಬಲು ಸಾಧ್ಯ

ಅನಂತಗಿರಿ ಯಾತ್ರೆ ಮಾಡಿ Read More »

ಅಧಮನಲ್ಲವೆ ಅವನು ಅಧಮನಲ್ಲವೆ

ಅಧಮನಲ್ಲವೆ ಅವನು ಅಧಮನಲ್ಲವೆ | ಯದುಪತಿಯ ಭಜಿಸಿ ಸದಾ | ಬದುಕದಿದ್ದ ನರಜನ್ಮ ಪ ಹೊರಳಿ ಎದ್ದು ಕುಳಿತು ಎರಡು ಕರವ ಮುಗಿದು ಜಿಹ್ವೆಯಲ್ಲಿ | ಹರಿ ಹರಿ ಎಂದು ಸ್ಮರಣೆ ಮಾಡಿ | ಹರುಷವಾಗದಿದ್ದ ನರನು ||1|| ಮಡುವಿನೊಳಗೆ ಮಿಂದು ಬಂದು | ಕುಡತಿ ಜಲವ ಕೊಂಡು ರವಿಗೆ | ಕಡಿಯದಘ್ರ್ಯವೆರೆದು ಪುಣ್ಯ | ಪಡೆಯದಿದ್ದ ಹೀನ ನರನು ||2|| ಹಾದಿ ಹಿಡಿತು ಬರುತ ಸುಮ್ಮನಾದರನ್ನ | ಇರದೆ ವೇಣು | ನಾದ ಕೃಷ್ಣ ಕೃಷ್ಣಯೆಂದೂ

ಅಧಮನಲ್ಲವೆ ಅವನು ಅಧಮನಲ್ಲವೆ Read More »

ಅಣ್ಣನ ತೋರಿಸೆ ಎನಗೆ

ಅಣ್ಣನ ತೋರಿಸೆ ಎನಗೆ | ತನ್ನ ಮನೆಯಲ್ಲಿ ಬಣ್ಣದ ಭೊಗರಿ ಚಂಡು ಯಿಲ್ಲಾ | ಸುಣ್ಣದ ಗಡಿಗೆ ಯಾಕೆ ವಡಿಯಿತು ಪ ಹಾಸಿಕೆ ಹಾಸಿಕೆ ಎತ್ತ | ಕಾಸೆ ಬಿಸಿ ನೀರು | ದಾಸನ ಕರಿಯೆ | ಮೋರಿ ತೊಳಿಯೆ | ಈಸು ಸೊಲ್ಲು ಕೇಳೆ ಗೋಪಿ ||1|| ಕುಪ್ಪಸÀ ಕೊಡಬೇಡ ನೀ | ಅಪ್ಪನ ನೋಡ ಬೇಡ | ಚಪ್ಪರದೊಳಗೆ ಕುಳಿತು ಕಾಳು | ಕುಪ್ಪೆ ನಾಡುವ ಈಗ ಪೋಗಿ ||2|| ಹೊತ್ತು ಹೋಯಿತು ಮಸರುಕಟಿಯಲಿಲ್ಲ್ಯಾಕೆ

ಅಣ್ಣನ ತೋರಿಸೆ ಎನಗೆ Read More »

ಅಡಿಗಳಿಗೊಂದಿಪೆ ಪುರಂದರ

ಅಡಿಗಳಿಗೊಂದಿಪೆ ಪುರಂದರ ಗುರುವೆ ಕಡು e್ಞÁನ-ಭಕ್ತಿ-ವೈರಾಗ್ಯದ ನಿಧಿಯೆ ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ | ಗುರು ವ್ಯಾಸರಾಯರಿಂದುಪದೇಶಗೊಂಡೆ || ಎರಡೆರಡು ಲಕ್ಷದಿಪ್ಪತೈದು ಸಾವಿರ | ವರ ನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ ||1|| ಗಂಗಾದಿ ಸಕಲ ತೀರ್ಥಂಗಳ ಚರಿಸಿತು | ರಂಗವದನ ವೇದವಾಸ್ಯನ || ಹಿಂಗದೆ ಮನದಲ್ಲಿ ನೆನೆದು ನೆನೆದು ಮರೆವ | ಮಂಗಳ ಮಹಿಮೆಯ ನುತಿಸಿ ನುತಿಸಿ ನಾ ||2|| ನಿನ್ನತಿಶಯಗುಣ ವರ್ಣಿಸಲಳವಲ್ಲ | ನಿನ್ನ ಸೇವಕನ ಸೇವಕನೆಂತೆಂದು || ಪನ್ನಗಶಯನ ಮುಕುಂದ ಕರುಣ ಪ್ರ

ಅಡಿಗಳಿಗೊಂದಿಪೆ ಪುರಂದರ Read More »