admin

ನೀನೊಲಿದರೆ ಕೊರಡು

ನೀನೊಲಿದರೆ ಕೊರಡು ಕೊನರುವುದು|| ನೀನೊಲಿದರೆ ಬರಡು ಹಯನವಹುದು ನೀನೊಲಿದರೆ ವಿಷ ಅಮೃತವಪ್ಪುದು ನೀನೊಲಿದರೆ ಸಕಲ ಪಡು ಪದಾರ್ಥ ಇದಿರಲಿಪ್ಪವು ಕೂಡಲಸಂಗಮದೇವಾ||                               —ಬಸವಣ್ಣ

ನೀನೊಲಿದರೆ ಕೊರಡು Read More »

ನೀನೊಬ್ಬನೊಡನಿರಲು

ನೀನೊಬ್ಬನೊಡನಿರಲು ಜಗವೆಲ್ಲ ಎದುರಾಗೆ ಭಯವೇನು ಭಯವೇನು ಭಯವೇನು ಗುರುವೆ| ನೀನೊಬ್ಬನಿಲ್ಲದಿರೆ ಜಗವೆಲ್ಲ ಜೊತೆಯಾಗೆ ಸುಖವೇನು ಸುಖವೇನು ಸುಖವೇನು ಪ್ರಭುವೆ||

ನೀನೊಬ್ಬನೊಡನಿರಲು Read More »

ನೀನೇ ದಯಾಮಯ

ನೀನೇ ದಯಾಮಯ ಇನ್ನಾರಿರುವರು ನಿನ್ನಂದದ ಹಿತಕಾರಿ| ನೋವು ನಲಿವಿನಲಿ ಸಮೀಪ ಬಂಧುವು ಶೋಕ-ತಾಪ-ಭಯಹಾರಿ|| ಸಂಕಟಪೂರಿತ ಮೋಹಭವಾರ್ಣವ- ದುತ್ತರಣಕೆ ನೀ ಸಹಕಾರಿ| ಪ್ರಸನ್ನವಾಗಿಸು ಈ ಬಿರುಗಾಳಿಯ ರಿಪುದಲ ವಿಪ್ಲವಕಾರಿ|| ಪಾಪದಹನ ಪರಿತಾಪವನಾರಿಸು ವರ್ಷಿಸು ಶೀತಲವಾರಿ| ಎಲ್ಲರು ತ್ಯಜಿಸುವ ಅಂತಿಮಕಾಲದಿ ನೀನೇ ಆಶ್ರಯಕಾರಿ||                         —ವಚನವೇದ

ನೀನೇ ದಯಾಮಯ Read More »

ನೀನೆಲ್ಲಿಗೆ ಹೋಗಬೇಡಯ್ಯ

ನೀನೆಲ್ಲಿಗೆ ಹೋಗಬೇಡಯ್ಯ ಓ ಅಂಜನೇಯ || ನೀನೆಲ್ಲಿಗೆ ಹೋಗಬೇಡ ನನ್ನನ್ನು ಬಿಡಬೇಡ| ನೀನಿದ್ದ ಗೃಹದಲ್ಲಿ ನನ್ನನು ಇರಿಸಯ್ಯ|| ಅಷ್ಟಾಂಗಯೋಗವ ಮಾಡಿ ಆರು ಬೀದಿ ತಿರುಗಿ ನೋಡಿ| ಕಷ್ಟಪಡುವುದು ಯಾಕೊ ಸೃಷ್ಟಿಶೀಲ ರೂಪದೇವ|| ಸಾಮಾನ್ಯವಾದದ್ದಲ್ಲ ಸಾಮುದ್ರ ಸಂಸಾರವು | ಸಾಧಿಸಿ ಸಾಧಿಸಿ ಪ್ರಜರು ಸಾಂಖ್ಯಯೋಗ ತಿಳಿಯಲಿಲ್ಲ|| ಧರೆಯೊಳು ಘಟ್ಟಿಹಳ್ಳಿಪುರವು ಭಕ್ತ ಆಂಜನೇಯ ಸ್ವಾಮಿ| ನೀನು ನಾನು ಒಂದಾಗಿ ಹೋಗೋಣ ತಿರುಪತಿಗೆ||                         —-ಆಂಜನಪ್ಪ ಸ್ವಾಮಿ

ನೀನೆಲ್ಲಿಗೆ ಹೋಗಬೇಡಯ್ಯ Read More »

ನೀನಲ್ಲದಿನ್ನಾರು

ನೀನಲ್ಲದಿನ್ನಾರು ಚಿರಬಂಧು ಎನಗೆ ನಿನ್ನನ್ನೆ ಕರೆಯುತಿಹೆ ಹೃದಯದೇಗುಲಕೆ|| ಕಾತರದ ಅಳಲಿನಲಿ ಪರಿಪೂತ ಹೃದಯವದು ಕ್ಷೇತ್ರವೆನೆ ಆಗಿಹುದು ದಕ್ಷಿಣೇಶ್ವರವು| ಜನ್ಮಜನ್ಮಾಂತರದ ಸಂಸ್ಕಾರತರುರಾಜಿ ಪಂಚವಟಿಯಂದದಲಿ ಮಿಗೆ ಒಪ್ಪುತಿಹುದು|| ಹಗಲಿರುಳು ಎನ್ನೆದೆಯ ಹಂಬಲಿನ ಹೊನಲದುವೆ ಜಗವ ಪಾವನಗೈವ ಗಂಗೆಯಾಗಿಹುದು| ಜೀವಿಗಳ ಎದೆಯಲ್ಲಿ ಅನವರತ ನೆಲೆಸಿರುವ ದೇವತೆಯೆ ಇಲ್ಲೀಗ ಮಾತೆ ಭವತಾರಿಣೀ|| ಹೇ ದಿವ್ಯ ಅರ್ಚಕನೆ ಪಂಚವಟಿಪ್ರಿಯನೆ ಭವತಾರಿಣೀತನಯ ಸುರನದಿಯ ಭಕ್ತ| ಬಂದಿಲ್ಲಿ ಎಚ್ಚರಿಸು ಪ್ರೇಮಮಯಿ ಜನನಿಯನು ಬಂಧನವು ಹರಿಯುವುದು ಮಾತೆಯೊಲುಮೆಯಲಿ||                                                      —–ಸ್ವಾಮಿ ತದ್ರೂಪಾನಂದ

ನೀನಲ್ಲದಿನ್ನಾರು Read More »

ನಿರಂಜನ ಹರಿಚಿದ್ಘನ

ನಿರಂಜನ ಹರಿಚಿದ್ಘನ ಮೂರುತಿಯನು ನೆನೆಯೊ ನಿರಂತರ–ಮೋಹನಮೂರುತಿಯನು ನೆನೆಯೊ|| ಅನುಪಮತೇಜನ ಸುಂದರರೂಪನ ಭಕ್ತರ ಎದೆಯಲಿ ರಂಜಿಪನ| ಕೋಟಿಚಂದ್ರಸಮ ಕಾಂತಿಯ ನಾಚಿಸಿ ಮಿಂಚಿನಂತೆ ನಮ್ಮ ಎದೆಯೊಳು ರಂಜಿಸಿ ಮೋಹಿಪನ|| ಹೃದಯಪದ್ಮದಲಿ ಪೂಜಿಸು ಆತನ ಶಾಂತಮಾನಸದಿ ಜ್ಞಾನನಯನದಲಿ ಅಪೂರ್ವದರ್ಶನ ಮೋಹನನ| ಭಕ್ತಿಯೋಗದ ಆವೇಶದಿ ಮುಳುಗಿಪ ಚಿದಾನಂದರಸ ಸಾಗರನ||                                 —-ವಚನವೇದ

ನಿರಂಜನ ಹರಿಚಿದ್ಘನ Read More »

ನಿನ್ನ ಬಾಳಿನ ಹೊಲವು

ನಿನ್ನ ಬಾಳಿನ ಹೊಲವು ಪಾಳು ಬಿದ್ದಿಹುದಲ್ಲೊ ಕೃಷಿಗೈಯಲೂ ಕೂಡ ತಿಳಿಯದಿರುವೆ| ಎಂಥ ಹೊನ್ನನು ಬೆಳೆದು ತೆಗೆಯಬಹುದಾಗಿತ್ತೊ ಕೆಲವು ದಿನ ಮೈಮುರಿದು ದುಡಿದಿದ್ದರೆ|| ಈಗಲಾದರು ತಾಯ ಶ್ರೀನಾಮವೆಂತೆಂಬ ಬೇಲಿಯನು ಕಟ್ಟಿ ನೀ ಕಾಯ್ದುಕೊಳ್ಳೊ| ಅದಕಿಂತ ಬಲವಾದ ಕಾವಲಿನ್ನಾವುದಿದೆ ಮೃತ್ಯುವೂ ನಿನ್ನ ಬಳಿ ಬರಲಾರನೊ|| ಇಂದೊ ನಾಳೆಯೊ ಹೊಲವ ಹೊಲದೊಡೆಯಗೊಪ್ಪಿಸುವ ಮುನ್ನವೇ ಎಚ್ಚೆತ್ತು ಬೆಳೆಯ ತೆಗೆಯೊ| ಗುರುವಿತ್ತ ಮಂತ್ರವನು ಬೀಜವಾಗಿಸಿ ಬಿತ್ತಿ ಪ್ರೇಮವಾರಿಯ ಹೊಯ್ದು ಹಸನುಗೊಳಿಸೊ| ನಿನಗೆ ಈ ಕೆಲಸವೂ ಕಷ್ಟವಾದರೆ ಹೇಳು ರಾಮಪ್ರಸಾದನಿದೊ ನೆರವಿಗಿಹನೊ||                                               —-ವಚನವೇದ

ನಿನ್ನ ಬಾಳಿನ ಹೊಲವು Read More »

ನಿನ್ನನೆ ಪಾಡುವೆ

ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ ನಿನ್ನನೆ ಬೇಡಿ ಬೇಸರಿಸುವೆ|| ನಿನ್ನ ಕಾಲ ಪಿಡಿವೆ ನಿನ್ನ ಹಾರೈಸುವೆ ನಿನ್ನ ತೊಂಡರಿಗೆ ಕೈಯ ಕೊಡುವೆ|| ನಿನ್ನಂತೆ ಸಾಕಬಲ್ಲ ದೇವರಿನ್ನುಂಟೆ ಘನ್ನ ಪುರಂದರವಿಟ್ಠಲ ದೇವರದೇವ||

ನಿನ್ನನೆ ಪಾಡುವೆ Read More »

ನಾನಿನ್ನೊಳನ್ಯ ಬೇಡುವುದಿಲ್ಲ

ನಾನಿನ್ನೊಳನ್ಯ ಬೇಡುವುದಿಲ್ಲ| ಹೃದಯಕಮಲದೊಳು ನಿಂದಿರು ಹರಿಯೆ|| ಶಿರ ನಿನ್ನ ಚರಣಕೆ ಎರಗಲಿ| ಎನ್ನ ಚಕ್ಷು ಸದಾ ನಿನ್ನ ನೋಡಲಿ ಹರಿಯೆ| ಕರ್ಣ ಗೀತಂಗಳ ಕೇಳಲಿ| ನಿನ್ನ ನಿರ್ಮಾಲ್ಯವ ನಾಸಘ್ರಾಣಿಸಲಿ|| ನಾಲಿಗೆ ನಿನ್ನನು ಕೊಂಡಾಡಲಿ| ಕರಗಳೆರಡು ನಿನ್ನನರ್ಚಿಸಲಿ| ಚರಣ ತೀರ್ಥಯಾತ್ರೆ ಮಾಡಲಿ| ಎನ್ನ ಮನ ಅನುದಿನ ನಿನ್ನ ಸ್ಮರಿಸಲಿ ಹರಿಯೆ|| ಬುದ್ಧಿಯು ನಿನ್ನೊಳು ಬೆರೆಯಲಿ ಹರಿಯೆ| ಚಿತ್ತ ನಿನ್ನೊಳು ಸ್ಥಿರವಾಗಲಿ| ಭಕ್ತಜನರಸಂಗವಾಗಲಿ|ಪುರಂದರ- ವಿಟ್ಠಲನೆ ಇಷ್ಟೇ ದಯಮಾಡೊ                                  —ಪುರಂದರದಾಸ

ನಾನಿನ್ನೊಳನ್ಯ ಬೇಡುವುದಿಲ್ಲ Read More »

ನಾ ನಿನ್ನ ಧ್ಯಾನದೊಳಿರಲು

ನಾ ನಿನ್ನ ಧ್ಯಾನದೊಳಿರಲು| ಮಿಕ್ಕ ಹೀನ ಮಾನವರೇನು ಮಾಡಬಲ್ಲರೋ ರಂಗ|| ಮತ್ಸರಿಸುವರೆಲ್ಲ ಕೂಡಿ ಮಾಡುವುದೇನು ಅಚ್ಯುತ ನಿನದೊಂದು ದಯೆಯಿರಲು| ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ ಕಿಚ್ಚಿಗೆ ಇರುವೆ ಮುತ್ತುವುದೆ ಪೇಳೆಲೊ ರಂಗ|| ಕನ್ನಡಿಯೊಳಗಿನ ಗಂಟು ಕಂಡು ಕಳ್ಳ ಕನ್ನವಿಕ್ಕಲವನ ವಶವಹುದೆ| ನಿನ್ನ ನಂಬಲು ಮುದ್ದು ಪುರಂದರವಿಟ್ಠಲ ಚಿನ್ನಕ್ಕೇ ಪುಟವನಿಟ್ಟಂತೆ ಅಹುದು ರಂಗ||                                                  —-ಪುರಂದರದಾಸ

ನಾ ನಿನ್ನ ಧ್ಯಾನದೊಳಿರಲು Read More »

ನಾನಾರ ದೂಷಿಸಲಿ

ನಾನಾರ ದೂಷಿಸಲಿ, ನಾನೆ ತೋಡಿದ ಕೂಪ- ದಾಳದಲಿ ನಾನಾಗಿ ಮುಳುಗುತಿಹೆನು| ಅರಿವರ್ಗಗಳ ಹಿಡಿದು ನಿನ್ನ ಸುಕ್ಷೇತ್ರದಲಿ ನಾನೆ ಈ ಬಾವಿಯನು ತೋಡಿರುವೆನು| ಕಾಲರೂಪದ ಕರಿಯ ನೀರೆದ್ದು ನುಗ್ಗುತಿದೆ ಓ ತಾಯಿ ನಾ ನಿನಗೆ ಶರಣೆನುವೆನು| ನಾನೆಯೇ ನನಗೆ ಹಗೆ, ಹೇಗೆ ತಡೆಯಲಿ ಹೇಳು ಮೇಲೆದ್ದು ನುಗ್ಗುವೀ ಕಾಳಜಲವ ? ಎನ್ನ ಎದೆಯುದ್ದಕೂ ತುಂಬಿಕೊಂಡಿತು ನೀರು, ನೀನೊಬ್ಬಳೇ ರಕ್ಷೆ, ನಿನ್ನೊಳಗೆ ಈ ಭಿಕ್ಷೆ, ದಾಟಿಸಾಚೆಯ ದಡಕೆ ಈ ಶಿಶುವನು|                                            —ವಚನವೇದ

ನಾನಾರ ದೂಷಿಸಲಿ Read More »

ನಂಬರು ನೆಚ್ಚರು

ನಂಬರು ನೆಚ್ಚರು ಬರಿದೇ ಕರೆವರು ನಂಬಲರಿಯದೆ ಲೋಕದ ಮನುಜರು ನಂಬಿ ಕರೆದೊಡೆ ಓ ಎನ್ನನೇ ಶಿವ|| ನಂಬದೆ ನೆಚ್ಚದೆ ಬರಿದೇ ಕರೆವರ ಕಂಬೆ ಮೆಚ್ಚಕೂಡದೆಂದ ಕೂಡಲಸಂಗಮದೇವ||                                                                        —ಬಸವಣ್ಣ

ನಂಬರು ನೆಚ್ಚರು Read More »

ನನ್ನ ಹೃದಯದ ದಿವ್ಯ

ನನ್ನ ಹೃದಯದ ದಿವ್ಯಸೂತ್ರಧಾರಿಣಿ ನೀನು ಮಡಿಲ ತೊಟ್ಟಿಲೊಳಿಟ್ಟು ಪಾಲಿಸಿರುವೆ| ನಾನಪಾತ್ರನು ತಾಯಿ, ನಿನ್ನ ಒಲವಿನ ಕೃಪೆಗೆ ಆದರೂ ಎನಿತೊಂದು ಕರುಣೆ ನಿನಗೆ|| ನನ್ನ ಮೇಲೆನಿತೊಂದು ವಾತ್ಸಲ್ಯವಿದೆ ನಿನಗೆ ನೇವರಿಸಿ ಕೈಹಿಡಿದು ನಡೆಸುತಿರುವೆ| ಮೃದುನುಡಿಗಳಮೃತವನು ಕಿವಿಗಳಿಗೆ ಕರೆಯುತ್ತ ದಿವ್ಯಮಧುವನು ನನಗೆ ಕುಡಿಸುತಿರುವೆ|| ದೋಷವರಸದ ಹಿರಿಯ ತಾಯ್ತನದ ಮೂರ್ತಿ ನೀ ಕಷ್ಟಸಂಕಟದಿಂದ ರಕ್ಷಿಸಿರುವೆ| ನಾನು ನಿನ್ನವನೆಂಬ, ನೀನು ನನ್ನವಳೆಂಬ ಹಿರಿಯ ತತ್ತ್ವವನೀಗ ಅರಿಯುತಿರುವೆ|| ಓ ತಾಯಿ ನಾ ನಿನ್ನ ಹಾಲುಂಡು ಪುಷ್ಟಿಯಲಿ ನಿನ್ನ ಆಣತಿಯಂತೆ ಋಜುಪಥದಲಿ| ನಡೆನಡೆದು ಭಕ್ತಿಯಲಿ ‘ಜೈ

ನನ್ನ ಹೃದಯದ ದಿವ್ಯ Read More »

ನನ್ನಪರಾಧವು ಏನೆಲೆ ದೇವ

ನನ್ನಪರಾಧವು ಏನೆಲೆ ದೇವ ಎನ್ನನ್ನು ಕಾಯದೆ ಈಯುವೆ ನೋವ ಭಾರವೆ ನಾನು ಗೋವರ್ಧನಗಿರಿ- ಧಾರಿಯು ಅಲ್ಲವೆ ನೀ ಹೇ ಶ್ರೀಹರಿ|| ಕೀರುತಿ ನಿನ್ನದು ಗಜೇಂದ್ರಮೋಕ್ಷದ ಮಾರುತಿಯಾಶ್ರಯ ನಿನ್ನಯ ಪಾದ ಪರಮಪುರುಷ ನೀ ಕೊಡು ತವ ಮೋದ ಪರುಸಮಣಿಯೊಲು ಸರ್ವಾಭೇದ|| ದೀನಬಂಧು ನೀ ದೇವದೇವ ನೀ ಮಾನಘನನು ನೀ ಧರ್ಮಾತ್ಮನು ನೀ ಜ್ಞಾನಧನರು ಗುಣಗಾನವ ಗೈಯಲು ಎನ್ನನ್ನು ರಕ್ಷಿಸಲೇಕೀ ದಿಗಿಲು||                               —ಸ್ವಾಮಿ ಹರ್ಷಾನಂದ

ನನ್ನಪರಾಧವು ಏನೆಲೆ ದೇವ Read More »

ನಗೆಯು ಬರುತಿದೆ

ನಗೆಯು ಬರುತಿದೆ ಎನಗೆ ನಗೆಯು ಬರುತಿದೆ || ಜಗದೊಳಿರುವ ಜಾಣರೆಲ್ಲ ಹಗರಣವ ಮಾಡುವುದು ಕಂಡು|| ಹೀನಗುಣವ ಮನದೊಳಿಟ್ಟು ತಾನು ವಿಷಯಪುಂಜನಾಗಿ ಮೌನಿ ಪುರಂದರವಿಟ್ಠಲನ್ನ ಧ್ಯಾನ ಮಾಡುವವನ ಕಂಡು||                                        —-ಪುರಂದರದಾಸ

ನಗೆಯು ಬರುತಿದೆ Read More »

ದೊರೆಯಿತು ಎನಗೆ

ದೊರೆಯಿತು ಎನಗೆ ಗುರುಚರಣಾಶ್ರಯ|| ಪ್ರಿಯವೊಂದಿಲ್ಲವು ಚರಣವನುಳಿದು| ಮಾಯೆಯೆ ಅಲ್ಲವೆ ಕನಸಿನ ಜಗವದು|| ಭವಸಾಗರವದು ಬರಿದಾಗಿಹುದು| ಅವನೊಡನಿರಲು ಭಯನೀಗಿಹುದು|| ನಟವರ ನಾಗರ ಮೀರೆಯ ಗಿರಿಧರ| ನೋಟವ ತಿರುಗಿಸಿ ಮಾಡಿದ ಅಂತರ||                                      —ಸ್ವಾಮಿ ಹರ್ಷಾನಂದ

ದೊರೆಯಿತು ಎನಗೆ Read More »

ದೊರಕಿತು ಧರಣಿಗೆ

ದೊರಕಿತು ಧರಣಿಗೆ ಸಿರಿವರ ಇಂದು ಕರುಣೆಯ ಮೂರುತಿ ಶಾರದೆ ಬಂದು| ಪರಮ ಗುರುವಿನ ಶಕ್ತಿಯ ಸಿಂಧು ಪೊರೆವಳು ಸರ್ವರ ಹೃದಯದಿ ನಿಂದು|| ಕಲಿಯುಗದಾರ್ತರ ನೋಡುತ ನೊಂದು ಒಲುಮೆಯ ಸುರನದಿ ತನ್ನಲಿ ಮಿಂದು| ಕಲುಷವ ಕಳೆಯುತ ಬೆಳಗಲಿ ಎಂದು ಸುಲಭದ ಸಾಧನೆ ಸಾರವ ತಂದು|| ನಿರ್ಮಲ ಮೂರುತಿ ನಿಷ್ಕಲ ಇಂದು ಕರುಣಿಸು ಒಂದೇ ಪ್ರೇಮದ ಬಿಂದು| ಪರಹಿತ ಜೀವಿತೆ ಸರ್ವರ ಬಂಧು ಮೊರೆಯುವೆ ನಿನ್ನಲಿ ಕೃಪೆ ತೋರೆಂದು||                                                —-ಸ್ವಾಮಿ ಶಾಸ್ತ್ರಾನಂದ

ದೊರಕಿತು ಧರಣಿಗೆ Read More »

ದೇವಿ ಮೀನಾಕ್ಷಿ ಮುದಂ

(ಅಂಬ) ದೇವಿ ಮೀನಾಕ್ಷಿ ಮುದಂ ದೇಹಿ ಮೇ ಸತತಂ|| ಪಾವನಮಧುರಾನಿಲಯೇ ಪಾಂಡ್ಯರಾಜತನಯೇ ಭಾವರಾಗತಾಳಾಧಿಕ- ಪರಿತೋಷಿತ ಹೃದಯೇ|| (ಅಂಬ)ಭಾವುಕಫಲಪ್ರದಾಯಿನಿ ಭಕ್ತಮೋದಸಂದಾಯಿನಿ ಸೇವಕಪಾಪವಿಮೋಚನಿ ಶ್ರೀಕದಂಬವನವಾಸಿನಿ|| ಹಿಮಕರನಿಭವದನೇ ವಿಮಲಕುಂದರದನೇ ಕಮನೀಯಮಣಿಸದನೇ ರಕ್ಷಿತಮದನೇ|| ಸುಮಶರಜನಕಸಹೋದರಿ ಸುಂದರೇಶಹೃದಯೇಶ್ವರಿ ಸಮರವಿಜಿತನಿಖಿಲಾಸುರಿ ಸಾಧುವಶಂಕರಿ ಶಂಕರಿ|| ಕಮಲಜಾದಿಸುರಪಾಲಿನಿ ಘನತರಶುಭಗುಣಶಾಲಿನಿ ಸಮದಾನೇಕಪಗಾಮಿನಿ ಸಂಗೇತರಸಾಹ್ಲಾದಿನಿ||                     —-ತಚ್ಚೂರು ಶಿಂಗರಾಚಾರ್ಯ

ದೇವಿ ಮೀನಾಕ್ಷಿ ಮುದಂ Read More »

ದೇವ ಬಂದಾ ನಮ್ಮ

ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವರ ದೇವ ಶಿರೋಮಣಿ ಬಂದನೋ|| ಉರಗಶಯನ ಬಂದ ಗರುಡಗಮನ ಬಂದ ನರಗೊಲಿದವ ಬಂದ ನಾರಾಯಣ ಬಂದ|| ಮಂದರೊದ್ಧರ ಬಂದ ಮಾಮನೋಹರ ಬಂದ ಬೃಂದಾವನಪತಿ ಗೋವಿಂದ ಬಂದನೋ| ನಕ್ರಹರನು ಬಂದ ಚಕ್ರಧರನು ಬಂದ ಅಕ್ರೂರಗೊಲಿದ ತ್ರಿವಿಕ್ರಮ ಬಂದನೋ|| ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ ಅಕ್ಷಯಫಲದ ಶ್ರೀಲಕ್ಷ್ಮೀರಮಣ ಬಂದ| ನಿಗಮಗೋಚರ ಬಂದ ನಿತ್ಯತೃಪ್ತನು ಬಂದ ನಗೆಮುಖ ಪುರಂದರವಿಟ್ಠಲ ಬಂದನೋ||                                            —-ಪುರಂದರದಾಸ

ದೇವ ಬಂದಾ ನಮ್ಮ Read More »

ದೇವನೆ ಎನ್ನನು ಮರೆಯುವುದುಚಿತವೆ

ದೇವನೆ ಎನ್ನನು ಮರೆಯುವುದುಚಿತವೆ ಸೇವೆಯ ಮಾಡುವ ಬಾಳನು ಸವೆಸಿಹೆ|| ಪೂರ್ವದ ಜನ್ಮದ ಸುಕೃತ್ಯದಿಂದಲೆ ಗುರುವಿನನುಗ್ರಹ ಪಡೆದೆನು ಆಗಲೆ|| ಕೊರಗುತ ಹೃದಯದಿ ಪರಿಪರಿಯಂದಲಿ ಶಿರವನು ಬಾಗಿಸಿ ಬೇಡುತಲಿರುವೆ|| ಮನದಲಿ ಮುಸುಕಿದ ತಮವನು ದೂಡೋ ಮನುಕುಲಪಾವನ ದರುಶನ ನೀಡೋ||                                        —ಸ್ವಾಮಿ ಹರ್ಷಾನಂದ

ದೇವನೆ ಎನ್ನನು ಮರೆಯುವುದುಚಿತವೆ Read More »

ದೇವದೇವನ ನಿಜವನರಿಯಲು

ದೇವದೇವನ ನಿಜವನರಿಯಲು ಮನವು ತೊಳಲುತ ಬಳಲಿದೆ| ಬೀಗಮುದ್ರೆಯನಿಟ್ಟ ಕೋಣೆಯೊ- ಳಲೆವ ಮರುಳನ ತೆರನಿದೆ|| ದಿವ್ಯ ಪ್ರೇಮಕೆ ದೊರೆವನವನು ಶ್ರದ್ಧೆಗಲ್ಲದೆ ಒಲಿಯನು| ವೇದಶಾಸ್ತ್ರ ಪುರಾಣದರ್ಶನ- ದಾಚೆಗೇ ನಿಂತಿರುವನು|| ಭಕ್ತಿಗೊಲಿಯುವ ಹೃದಯದಮೃತಾ- ನಂದರೂಪನು ಎಂಬರು| ಇದನರಿತೆ ಆ ಯೋಗಿವರ್ಯರು ಯುಗಯುಗವು ತಪಗೈದರು|| ಭಕ್ತಿಯೆಚ್ಚರಗೊಳಲು ಎದೆಯಲಿ ಅವನೆ ನಿನ್ನನು ಸೆಳೆವನು| ಈ ರಹಸ್ಯವ ಜಗದ ಸಂತೆಯ ಜನ ಸಮೂಹಕೆ ತಿಳಿಸೆನು|| ಶ್ರೀ ಪ್ರಸಾದನು ನುಡಿವನೀತೆರ “ಮಾತೃಭಾವದಿ ನೆನೆವೆನು| ನನ್ನ ಸೂಚನೆಯರಿತು ನೀವೇ ತಿಳಿಯಿರಾತನ ನಿಜವನು”||                               —-ವಚನವೇದ

ದೇವದೇವನ ನಿಜವನರಿಯಲು Read More »

ದೇವಕಿನಂದನ ಹರಿ

ದೇವಕಿನಂದನ ಹರಿ ವಾಸುದೇವ|| ಕಂಸಮರ್ದನ ಹರಿ ಕೌಸ್ತುಭಾಭರಣ ಹಂಸವಾಹನಮುಖವಂದಿತಚರಣ|| ಶಂಖಚಕ್ರಧರ ಶ್ರೀಗೋವಿಂದ ಪಂಕಜಲೋಚನ ಪೂರ್ಣಾನಂದ| ಮಕರಕುಂಡಲಧರ ಶತರವಿಭಾಸ ರುಕ್ಮಿಣಿವಲ್ಲಭ ಸಕಲಲೋಕೇಶ| ನಿಗಮೋದ್ಧಾರ ನವನೀತಚೋರ ಖಗಪತಿವಾಹನ ಜಗದಾಧಾರ| ವರವೇಲಾಪುರ ಚನ್ನಪ್ರಸನ್ನ ಪುರಂದರವಿಟ್ಠಲ ಸದ್ಗುಣಪೂರ್ಣ||                                  —ಪುರಂದರದಾಸ

ದೇವಕಿನಂದನ ಹರಿ Read More »

ದುರ್ಗಾಪದಕಮಲವನ್ನು

ದುರ್ಗಾಪದಕಮಲವನ್ನು ಸ್ಮರಿಸಿ ಹಗಲು ಇರುಳು ನೀವು|| ಮನದಿ ಧರಿಸಿ ನಾಮಾಮೃತ ಜನನ ಮರಣ ದಾಟಿರಿ|| ಚರಣಕಮಲಧ್ಯಾನದಿಂದ ಪರಮಶಾಂತಿ ಪಡೆಯಿರೆಲ್ಲ ಜ್ಞಾನ ಭಕ್ತಿ ಯೋಗ ಭೋಗ ತನಗೆ ತಾನೆ ಬಪ್ಪುದು||                    —-ಸ್ವಾಮಿ ಹರ್ಷಾನಂದ

ದುರ್ಗಾಪದಕಮಲವನ್ನು Read More »