admin

ನೋಡಿ ಮರುಳಾಗದಿರು ಪರಸತಿಯರ

ನೋಡಿ ಮರುಳಾಗದಿರು ಪರಸತಿಯರ ನಾಡೊಳಗೆ ಕೆಟ್ಟವರ ಪರಿಯ ನೀನರಿತು ಶತಮಖವ ಮಾಡಿ ಸುರಸಭೆಗೈದ ನಹುಷ ತಾನಾತುರದಿ ಶಚಿಗೆ ಮನಸೋತು ಭ್ರಮಿಸಿಅತಿ ಬೇಗ ಚಲಿಸೆಂದು ಬೆಸಸಲಾ ಮುನಿಯಿಂದಗತಿಗೆಟ್ಟು ಉರಗನಾಗಿದ್ದ ಪರಿಯರಿತು ||1|| ಸುರಪತಿಯು ಗೌತಮನ ಸತಿಗಾಗಿ ಕಪಟದಿಂಧರೆಗೆ ಮಾಯಾವೇಷ ಧರಿಸಿ ಬಂದುಪರಮ ಮುನಿಯ ಶಾಪದಿಂದಂಗದೊಳು ಸಾ-ಸಿರ ಕಣ್ಗಳಾಗಿರ್ದ ಪರಿಯ ನೀನರಿತು ||2|| ಸ್ಮರನ ಶರತಾಪವನು ಪರಿಹರಿಸಲರಿಯದೆದುರುಳ ಕೀಚಕನು ದ್ರೌಪದಿಯ ತುಡುಕಿಮರುತ ಸುತ ಭೀಮನಿಂದಿರುಳೊಳಗೆ ಹತನಾಗೆನರಗುರಿಯೆ ನಿನ್ನ ಪಾಡೇನು ಧರೆಯೊಳಗೆ||3|| ಹರನ ವರವನು ಪಡೆದು ಶರಧಿ ಮಧ್ಯದೊಳಿದ್ದುದುರುಳ ದಶಶಿರನು ಜಾನಕಿಯನೊಯ್ಯೆಧುರದೊಳಗೆ […]

ನೋಡಿ ಮರುಳಾಗದಿರು ಪರಸತಿಯರ Read More »

ನೋಡಯ್ಯ ನಿನ್ನ ದಾಸರ ಮೇಲೆ

ನೋಡಯ್ಯ ನಿನ್ನ ದಾಸರ ಮೇಲೆ ಕೃಪೆಗಳನುಮಾಡಯ್ಯ ಮನ್ಮನಕೆ ಸಂತಸವನುತೀಡಯ್ಯ ಭವಭಯದ ಪಾತಕಂಗಳ ದಾನವಾಡ ಗುಡ್ಡದ ತಿರುಮಲೇಶ ಸರ್ವೇಶ ಆದಿಯಲಿ ವೇದಗಳ ಕದ್ದುಕೊಂಡೊಯ್ದವನಸಾಧನಂಗೆಯ್ವೆನೆಂದಾಕ್ಷಣದೊಳುಪೋದನೆಲ್ಲೆನುತ ಶರನಿಧಿಯೊಳಗೆ ಪೊಕ್ಕ ಮ-ತ್ತಾ ದಿತ್ಯನಂ ಕೊಂದು ತಿಕ್ಕಿಮುಕ್ಕೆನೀ ದಯಾ ಪಾತ್ರನೆಂಬುದ ಕೇಳಿ ನಾನರಿತೆಭೂ ಧರೆಯ ಸುರರ ನೀ ಸಲುಹಲಾಗಪೋದ ನಿಗಮಂಗಳನು ತಂದು ಸಲೆ ರಕ್ಷಿಸಿದೆಆದಿ ಮತ್ಸ್ಯವತಾರ ಶರಣೆಂಬೆನು ||1|| ಅಮರ ದೈತ್ಯರು ಕೂಡಿ ಅಂಬುಧಿಯ ಕಡೆಯಲಿಕೆಕ್ರಮದಿ ಮಂದರಕೆ ಕಟ್ಟಿದ ಶೇಷನತಮತಮಗೆ ಪಿಡಿದೆಳೆಯೆ ತಲ್ಲಣಿಸಿ ಫಣಿರಾಜಸಮ ವಿಷದ ಕರ್ಬೊಗೆಯನುಗುಳುತಿರಲುಮಮಕಾರ ತತ್ತ್ವದಲಿ ಮತ್ತೊಂದು ರೂಪಾಗಿಅಮಿತಗುಣ ಮೂರ್ತಿ ನೀನಂದು

ನೋಡಯ್ಯ ನಿನ್ನ ದಾಸರ ಮೇಲೆ Read More »

ನೊಂದೆ ನಾ ಹರಿಯೆನ್ನದೆ

ನೊಂದೆ ನಾ ಹರಿಯೆನ್ನದೆ ನೊಂದೆ ನಾ ಸತ್ತು ಹುಟ್ಟುವ ಕೋಟಲೆಗಳಿಂದನೊಂದೆ ನಾ ಪಂಚೇಂದ್ರಿಯಗಳ ಬಾಧೆಗಳಿಂದನೊಂದೆ ನಾ ವೈರಿ ಷಡ್ವರ್ಗದಾಟಗಳಿಂದ ನೊಂದೆ ನಾ ಹರಿಯೆನ್ನದೆ ಒಂದು ಕ್ಷಣ ದುರ್ಗಂಧ ವಾಯು ಬರೆ ಹೇಸುವರುತಂದೆಯುದರದಿ ಮೂರು ಮಾಸ ತಾಯುದರದಲಿಸಂದೇಹವಿಲ್ಲ ನವಮಾಸ ಮಲ ಮೂತ್ರದೊಳುಒಂದಾಗಿ ನಿಂದು ಕುದಿಕುದಿದು ಹುಟ್ಟಿಬಂದೆ ಎಂಬತ್ತು ನಾಲುಕು ಲಕ್ಷ ಯೋನಿಯೊಳುನೊಂದೆ ಮುನ್ನೂರ ಅರವತ್ತು ಬೇನೆಗಳಿಂದಒಂದು ಕ್ಷಣವೂ ಯಮನ ಬಾಧೆ ತಾಳಲಾರೆನುಹಿಂದೆಗೆಯದಿರು ಇಂಬಿತ್ತು ಕಾಯೊ ಮುರಾರಿ ||1|| ಎಲುವುಗಳ ಗಳ ಮಾಡಿ ಬಲು ನರಂಗಳ ಬಿಗಿದುಚೆಲುವ ತೊಗಲಂ ಪೊದಿಸಿ

ನೊಂದೆ ನಾ ಹರಿಯೆನ್ನದೆ Read More »

ನೇಮವಿಲ್ಲದ ಹೋಮ

ನೇಮವಿಲ್ಲದ ಹೋಮವೇತಕೆರಾಮನಾಮವಿರದ ಮಂತ್ರವೇತಕೆ ನೀರ ಮುಣುಗಲು ಏಕೆ ನಾರಿಯಳ ಬಿಡಲೇಕೆವಾರಕೊಂದುಪವಾಸ ಮಾಡಲೇಕೆನಾರಸಿಂಹನ ದಿವ್ಯನಾಮವನು ನೆನೆದರೆಘೋರ ಪಾತಕವೆಲ್ಲ ತೊಲಗಿ ಹೋಗುವುದು ||1|| ಅಂಬರವ ತೊರೆಯಲೇಕೆ ತಾಂಬೂಲ ಬಿಡಲೇಕೆಡಂಭಕದ ವೃತ್ತಿಯಲಿ ಇರಲೇತಕೆಅಂಬುಜನಾಭನನು ಭಾವದಲಿ ನೆನೆದರೆಇಂಬುಂಟು ವೈಕುಂಠವೆಂಬ ಪುರದೊಳಗೆ ||2|| ಬಂಧದೊಳಗೆ ಬಿದ್ದು ಹರಿಯನೆ ನೆನೆಯುತಿರೆಬೆಂದು ಹೋಗುವುವು ದುರಿತಂಗಳೆಲ್ಲಬಂದ ದುಃಖಗಳೆಲ್ಲ ನಿಲ್ಲದಲೆ ಕಳೆಯುವವುಚೆಂದಾಗಿ ನೆಲೆಯಾದಿಕೇಶವನ ನೆನೆಯೆ||3||

ನೇಮವಿಲ್ಲದ ಹೋಮ Read More »

ನೆರೆದು ಗೋಪಿಯರೆಲ್ಲರು – ಕೃಷ್ಣಯ್ಯನ

ನೆರೆದು ಗೋಪಿಯರೆಲ್ಲರು – ಕೃಷ್ಣಯ್ಯನಕರವ ಪಿಡಿದುಕೊಂಡುಭರದಿಂದ ಬಂದು ಯಶೋದೆಗೆ ಚಾಡಿಯಅರುಹಿದರತಿ ವೇಗದಿ ಬಲು ಕಳ್ಳ ನಿನ್ನ ಮಗ – ಯಶೋದೆ ಕೇಳೆಹಾಲು ಕರೆಯುತಿರಲುತೊಲೆಗೆ ನಿಚ್ಚಣಿಕೆಯನೆ ಹಾಕದೆ ಸುರಿದನುನೆಲುವಿನ ಪಾಲ್ಮೊಸರ ||1|| ಅಮ್ಮಯ್ಯ ಇಲ್ಲ ಕಾಣೆ – ಇವಳು ಎನ್ನಸುಮ್ಮನೆ ದೂರುವಳೆಹಮ್ಮಿಂದ ನಾನವಳ ಅಟ್ಟಕ್ಕೆ ನೆಗೆಯಲುಬೊಮ್ಮ ಜಟ್ಟಿಗನೇನಮ್ಮ||2|| ಮತ್ತೆ ಮುತ್ತಿನಂಥ – ನಿನ್ನೀ ಮಗಹತ್ತಿ ಗವಾಕ್ಷದಿಂದಎತ್ತಿಟ್ಟ ಬೆಣ್ಣೆಯನೆಲ್ಲದ ಮೆದ್ದನುಹೆತ್ತ ಮಕ್ಕಳಿಗಿಲ್ಲದಂತೆ ||3|| ಗಡಿಗೆ ಬೆಣ್ಣೆ ಮೆಲ್ಲಲು – ಎನ್ನ ಹೊಟ್ಟೆಮಡುವು ಭಾವಿಯೇನೆಹುಡುಗರಿಗರಿಯದೆ ಎತ್ತಿಟ್ಟ ಬೆಣ್ಣೆಯಹೊಡೆದರವರ ಮಕ್ಕಳು ||4|| ಮರೆತು

ನೆರೆದು ಗೋಪಿಯರೆಲ್ಲರು – ಕೃಷ್ಣಯ್ಯನ Read More »

ನೆನೆಯೋ, ಎಲೆ ಮನವೆ, ನವನೀತ ಕೃಷ್ಣನ

ನೆನೆಯೋ, ಎಲೆ ಮನವೆ, ನವನೀತ ಕೃಷ್ಣನ ನೆನೆಯೋ ಗೋಪೀತನಯ ಕಂಸನ ಮನೆಯ ಕೊಂಡಾತನ ತರಳ – ಚೆಲುವ ಮುಂಗುರುಳಹುಲಿಯುಗುರ ಕೊರಳಉಂಗುರಗಳ ಬೆರಳಕಾಲಿಗೆ ಕಟ್ಟಣಳನಿಲುವುತಿಹ ದುರುಳತನದಲಿ ತುರುಗಳ ಕಾಯ್ದವನ ||1|| ವಿಷವನುಣಿಸಿ ತಲ್ಲಣಿಸುವಹುರಿತ ಸಹೊಸವ (ದುರಿತ ಸಹವಾಸವ ?)ಆದರಾವಿ ದಾಸವ (ಅದರ ವಿಲಾಸವ ?)ನೋಡಿದರೆ ಸಿಸುವಾಗಿಬಲು ಅಸುರರ ಗೆಲಿದವನ ||2|| ಸಲಯ ಕಾಳಿಂಗನತಲೆಪಿಡಿದ ಕಂಗೊಲೆಯಮೊರೆ ಕೇಳಿ ಬಲಿಯಅವನ ಕೋಮಲೆಯಕಿವಿಗೆ ಪೂಮಾಲೆಯಾದ ನೀಟುಗಾಯನೆಲೆಯಾದಿಕೇಶವನ ||3||

ನೆನೆಯೋ, ಎಲೆ ಮನವೆ, ನವನೀತ ಕೃಷ್ಣನ Read More »

ನೆನೆಯ ಬಾರದೆ ಮನವೆ ಪರಮಪಾವನನ

ನೆನೆಯ ಬಾರದೆ ಮನವೆ ಪರಮಪಾವನನ ಸಾಕಾರದಿಂದ ಸರ್ವವನು ರಕ್ಷಿಪನಜೋಕೆಯಲಿ ತನ್ನ ನೆನೆವವರ ಪಾಲಿಪನ – ಅ-ನೇಕ ಮೂರುತಿ ಸೂರ್ಯನಾರಾಯಣನ ||1|| ಬ್ರಹ್ಮಾಂಡ ಕೋಟಿ ತಿಮಿರವ ಗೆಲುವವನಒಮ್ಮೆ ನೆನೆಯಲು ಪ್ರಸನ್ನನಾದವನಧರ್ಮಕ್ಕೆ ಸಾಕ್ಷಾತ್ ರೂಪಾಗಿ ತೋರುವನನಿರ್ಮಲಾತ್ಮಕವಾಗಿ ಥಳಥಳಿಸುವವನ ||2|| ಹರಗೆ ನಯನವಾಗಿ ಮಕುಟವ ಬೆಳಗುವನತರುಣಿಯೈವರ ಲಜ್ಜೆ ಕಾಯ್ದವನದುರಿತಕೋಟಿಗಳನುದ್ಧರಿಸುವವನಪರಬ್ರಹ್ಮ ಕಾಗಿನೆಲೆಯಾದಿಕೇಶವನಮರೆಯದೆ ಭಜಿಪರ ಕಾಯುವವನ ||3||

ನೆನೆಯ ಬಾರದೆ ಮನವೆ ಪರಮಪಾವನನ Read More »

ನೆಚ್ಚದಿರು ಸಂಸಾರ ನೆಲೆಯಲ್ಲ

ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯಅಚ್ಯುತನ ನಾಮವನು ನೆನೆದು ಸುಖಿಯಾಗೊ ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನುಗಳಿಸದಿರು ನೀ ದುರಿತರಾಶಿಗಳನುನಳಿನನಾಭನ ದಿವ್ಯ ನಾಮವನು ನೆನೆನೆನೆದುನೆಲೆಯಾದ ಪರಮ ಪದವಿಯ ಪಡೆಯೊ ಮನವೆ ||1|| ನೋಡದಿರು ಪರಸತಿಯ ಕೂಡದಿರು ದುರ್ಜನರಆಡದಿರು ಮಾತುಗಳ ಗರ್ವದಿಂದಬೇಡದಿರು ಕೈಯ ಹಿಂದೆಗೆವ ಲೋಭಿಯನು, ಕೊಂ-ಡಾಡದಿರು ಬೀದಿಗೂಳುಂಬ ದೈವಗಳ ||2|| ನಾನಾ ಜನ್ಮದಿ ಬಂದ ನಾಟಕದ ಬೊಂಬೆಯಿದುಮಾನಕ್ಕೆ ಮೆಚ್ಚಿ ನೀ ಮರುಳಾಗದೆಜಾಣತನದಿಂ ಕಾಗಿನೆಲೆಯಾದಿಕೇಶವನಮಾನಸದಲಿ ನೆನೆದು ಸುಖಿಯಾಗು ಮನುಜ ||3||

ನೆಚ್ಚದಿರು ಸಂಸಾರ ನೆಲೆಯಲ್ಲ Read More »

ನೀನೇನು ಮಾಡಲಾಪೆ

ನೀನೇನು ಮಾಡಲಾಪೆನಾನು ಮುನ್ನ ಜನ್ಮ ಪಡೆದಲ್ಲದೆ ರಂಗ ನಾನಾ ಜನುಮದಿ ಬಹು ಯೋನಿ ಮುಖದಲಿ ಬಾಹಹೀನತ್ವವನು ನೀನು ಕಳೆಯಲಾಪೆಯನಾನು ನನ್ನದು ಎಂಬ ಅಹಂಕಾರವಿರೆ ನಿನ್ನಧ್ಯಾನಿಸಲು ಬುದ್ಧಿಯ ಕೊಡಲಾಪೆಯ ||1|| ಸಂಚಿತವಾಗಿರುವ ಪ್ರಾರಬ್ಧದೊಳಗೊಂದುಕಿಂಚಿತಾದರೂ ನೀನು ಕಳೆಯಲಾಪೆಯಪಂಚೇಂದ್ರಿಯಂಗಳು ದೆಸೆದೆಸೆಗೆ ಎಳೆದಾಗವಂಚನೆ ಇಲ್ಲದೆ ನೀನಡ್ಡ ಬರಲಾಪೆಯ||2|| ಸರಸಿಜೋದ್ಭವಗೆ ಬುದ್ಧಿಯ ಪೇಳಿ ಪಣೆಯೊಳುಬರೆದ ಬರೆಹವನು ನೀನು ತೊಡೆಯಲಾಪೆಯಪರಬ್ರಹ್ಮ ಕಾಗಿನೆಲೆಯಾದಿಕೇಶವ ನಿನ್ನಸ್ಮರಣೆಗೈಯಲು ಕಾಯದಿರಲಾಪೆಯ ||3||

ನೀನೇನು ಮಾಡಲಾಪೆ Read More »

ನೀನುಪೇಕ್ಷೆಯ ಮಾಡೆ

ನೀನುಪೇಕ್ಷೆಯ ಮಾಡೆ ಬೇರೆ ಗತಿಯಾರೆನಗೆನಿಗಮಗೋಚರ ಮುಕುಂದ ಗಾನರಸಲೋಲ ಆಗಮಶೀಲ ಭಕ್ತಪರಿಪಾಲಸನ್ನುತ ಗೋಪಾಲ ಬಾಲ ಜಪತಪಾನುಷ್ಠಾನ ಜಪಿತನೆಂದೆನಿಸುವೆನೆಅಪ್ಪ ಜಾಣತನವೆನ್ನೊಳಿಲ್ಲಗುಪಿತದಿಂ ದಾನ ಧರ್ಮವನು ನಾ ಮಾಡುವೆನೆಅಪರಿಮಿತ ಧನವು ಇಲ್ಲಅಪಾರ ಕರ್ಮಗಳ ಅನುಸರಿಸಿ ನಡೆವುದಕೆನಿಪುಣತ್ವ ಮೊದಲೆ ಇಲ್ಲರಪಣ ನಿಪುಣತ್ವ ಜಾಣತ್ವ ಇಲ್ಲದಿಹ ಕೃಪಣಗೆಸುಪವಿತ್ರ ನೀನಲ್ಲದೆ ಇಲ್ಲ – ಸಿರಿನಲ್ಲ ||1|| ಆನೆ ನೆಗಳಿಗೆ ಸಿಲುಕಿ ಅರೆಬಾಯಿ ಬಿಡುತಿರಲುಮೌನದಿಂ ಬಂದು ಕಾಯ್ದೆಹೇ ನಾರಗಾ ಎಂದಜಮಿಳಗೆ ಮುಕ್ತಿಯನುನೀನೊಲಿದು ಕೃಪೆ ಮಾಡಿದೆಹಾನಿಯಿಲ್ಲದ ಪದವಿ ನೀನಿತ್ತು ಧ್ರುವಗೆ ಕಡುದೀನತ್ವವನು ಬಿಡಿಸಿದೆದಾನವಾಂತಕ ಸಕಲ ದಿವಿಜ ಮುನಿವಂದ್ಯ ಅಭಿಮಾನಿ ಎನ್ನನೂ

ನೀನುಪೇಕ್ಷೆಯ ಮಾಡೆ Read More »

ನೀನಾರ ಬಾಂಧವನೊ ನಿಖಿಳ ಯಾದವರೊಳಗೆ

ನೀನಾರ ಬಾಂಧವನೊ ನಿಖಿಳ ಯಾದವರೊಳಗೆಮಾನಾಭಿಮಾನವೆಳ್ಳನಿತಿಲ್ಲ ಕೃಷ್ಣ ದೇವಕೀದೇವಿಯುದರದಿ ಜನಿಸಿ ಬಾಲ್ಯದಲಿಓವಿ ಮೊಲೆ ಕುಡಿಸಿದಳ ಅಸುವ ಸೆಳೆದುಮಾವ ಕಂಸನ ಕೊಂದು ಮನುಜ ವೇಷದಲಿ ಗಾಂ-ಡೀವಿಯ ಮನೆಯ ಬಂಡಿ ಬೋವನಾದೆ||1|| ಸುರನದಿಯ ಸುತನು ಪಾಂಡವರಿಗಾಪ್ತನು ನಿನಗೆಪರಮಭಕ್ತನು ಸ್ವಯಿಚ್ಛಾ ಮರಣಿಯುಧುರದೊಳಗೆ ಪೂರ್ವ ವೈರದ ಶಿಖಂಡಿಯ ತೋರಿಶರಮಂಚದೊಳುಪಾಯದಲಿ ಮಲಗಿಸಿದೆ ||2|| ಸೋದರತ್ತೆಯ ಸೊಸೆಯ ಮಗ ನಿನಗೆ ಭಾವಿಸಲುಸೋದರಳಿಯನು ಮೂರು ಲೋಕವರಿಯೆಸಾಧಿಸಿಯೆ ಅಸಮ ಚಕ್ರವ್ಯೂಹವನು ರಚಿಸಿಸೋದರನ ಷಡುರಥರ ಕೈಲಿ ಕೊಲ್ಲಿಸಿದೆ ||3|| ಕುರುಪತಿಯ ಮೈದುನನ ಕೊಲ್ಲ ಬಗೆದವನ ಸಂ-ಗರದೊಳೇರಿಸಿ ನುಡಿದ ನುಡಿಯ ಕೇಳಿ ಮೈ-ಗರೆಯೆ,

ನೀನಾರ ಬಾಂಧವನೊ ನಿಖಿಳ ಯಾದವರೊಳಗೆ Read More »

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ನೀ ದೇಹದೊಳಗೊ ನಿನ್ನೊಳು ದೇಹವೊ ಹರಿಯೆ ಬಯಲೊಳಗೆ ಆಲಯವೊ ಆಲಯದೊಳಗೆ ಬಯಲೊಬಯಲು ಆಲಯವೆರಡು ನಯನದೊಳಗೊನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೊನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ||1|| ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊಸವಿಯು ಸಕ್ಕರೆ ಎರಡು ಜಿಹ್ವೆಯೊಳಗೊಜಿಹ್ವೆ ಮನಸಿನ ಒಳಗೊ ಮನಸು ಜಿಹ್ವೆಯ ಒಳಗೊಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ ||2|| ಕುಸುಮದಲಿ ಗಂಧವೋ ಗಂಧದಲಿ ಕುಸುಮವೋಕುಸುಮ ಗಂಧಗಳೆರಡು ಆಘ್ರಾಣದೊಳಗೊಅಸಮಭವ ಕಾಗಿನೆಲೆಯಾದಿಕೇಶವರಾಯಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೆ 3

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ Read More »

ನಿನ್ನ ಮಹಿಮೆಗಿಂಥವರು ಹೊಣೆಯೆ

ನಿನ್ನ ಮಹಿಮೆಗಿಂಥವರು ಹೊಣೆಯೆ ? ಚಿನ್ಮಯನೆ ಸಕಲಭುವನಾಧಾರವೆಂಬುದನುಬಣ್ಣಿಸಲು ಎನ್ನಳವೆ ಪನ್ನಗೇಂದ್ರನು ಹೊಣೆಯೆ ? ಹರಿ ನಿನ್ನ ಪಾದವು ಪವಿತ್ರತರವೆಂಬುದಕೆಧರಣಿ ಬಲಿ ವಿಧಿ ಭವಾಹ್ಲಾದ ಹೊಣೆಯೊಹರಿಯು ನೀನೆಂಬುದಕೆ ಸರಿಯು ಕೌಸ್ತುಭ ರತ್ನವರ ಪೀತ ವಸನ ಕ್ಷೀರಾಬ್ಧಿ ಹೊಣೆಯೊಶರಣರಿಚ್ಛೆಯಲಿ ನೀನಿದ್ದುದಕೆ ದ್ರೌಪದಿಯುಕರಿರಾಜ ಶಂಭು ಅಂಬರೀಷ ಹೊಣೆಯೊಕರುಣಿಯು ಉದಾರಿ ನೀನೆಂಬುದಕೆ ಧ್ರುವರಾಯಮರುತಸುತ ಸಾಂಧೀಪ ಹೊಣೆಯೊ ಕೃಷ್ಣ ||1|| ಸುಲಭ ಭಕುತರ ಕಾಯ್ವನೆಂಬುದಕ್ಕೆಲೊ ದೇವಫಲುಗುಣನು ವಿದುರ ಅಕ್ರೂರ ಹೊಣೆಯೊಛಲದಂಕನೆಂಬುದಕೆ ಬಾಣನು ಹಿರಣ್ಯಕನುಜಲಧಿ ದಶಮುಖ ಕಾರ್ತವೀರ್ಯ ಹೊಣೆಯೊಒಲಿಸಿ ನಿನ್ನನು ತುತಿಸಿ ಮುಕುತಿಯನು ಪಡೆದುದಕೆಸಲೆ ಶ್ರುತಿಯು

ನಿನ್ನ ಮಹಿಮೆಗಿಂಥವರು ಹೊಣೆಯೆ Read More »

ನಿನ್ನ ನೋಡಿ ಧನ್ಯನಾದೆನೊ ಹರಿ

ನಿನ್ನ ನೋಡಿ ಧನ್ಯನಾದೆನೊ ಹರಿ ಶ್ರೀನಿವಾಸ ನಿನ್ನ ನೋಡಿ ಧನ್ಯನಾದೆಎನ್ನ ಮನಸು ನಯನ ಸುಪ್ರಸನ್ನವಾಯಿತು ದಯವ ಮಾಡಿಮುನ್ನ ಸಲಹಬೇಕು ಸ್ವಾಮಿ ಪಕ್ಷಿವಾಹನ ಲಕ್ಷ್ಮೀರಮಣರಾಕ್ಷಸಾಂತಕ ಯದುಕುಲಾನ್ವಯಕುಕ್ಷಿಯೊಳು ಬ್ರಹ್ಮಾಂಡ ತಂಡವರಕ್ಷಿಸುತಲಿಹ ಸುಜನ ಪಕ್ಷಾ ||1|| ದೇಶದೇಶ ತಿರುಗಿ ನಾನುಆಶೆಭರಿತನಾದೆ ಸ್ವಾಮಿವಾಸಿ ನಿಮಗೆ ಸಲಹುವುದು ಜಗದೀಶ ಕಾಯೋ ವಾಸುದೇವ ||2|| ಕಂತು ಜನಕ ಎನ್ನ ಮೊರೆಯನಾಂತು ವಿಹಿತದಿಂದ ಸೇವೆಅಂತರವಿಲ್ಲದೆ ದಯಪಾಲಿಸೊಶಾಂತ ಮೂರ್ತಿಯಾದಿ ಕೇಶವ ಮುದ್ದು ವಿಠಲ ||3||

ನಿನ್ನ ನೋಡಿ ಧನ್ಯನಾದೆನೊ ಹರಿ Read More »

ನಿನ್ನ ನಾಮ ವಾಲ್ಮೀಕಿಯನುದ್ಧರಿಸಿದೆ ದೇವ

ನಿನ್ನ ನಾಮ ವಾಲ್ಮೀಕಿಯನುದ್ಧರಿಸಿದೆ ದೇವನಿನ್ನ ನಾಮ ಘಂಟಾಕರ್ಣನ ಸಲಹಿದೆ ದೇವನನ್ನನೀಗ ಉದ್ಧರಿಸು ರಂಗಧಾಮ ತಂದೆಯ ಮುಂದೆ ಮಗನನು ಬೈದು ಭಂಜಿಸಲುತಂದೆಯ ಮುಂದೆ ಪತ್ನಿಯ ಪಿಡಿದೆಳೆದು ಅಂಜಿಸಲುಕುಂದು ಗಂಡಗಲ್ಲದೆ ಹೆಂಡತಿಗುಂಟೆನಿಂದನೆ ಎಲೆ ದೇವ||1|| ದೊರೆ ನೋಡುತಿದ್ದಂತೆ ಬಂಟನನುಪರರು ಕೊಂಡೊಯ್ಯಲು ಕುಂದುಅರಸಗಲ್ಲದೆ ಆಳಿಗೇನುಅರಿಯಂತೆ ಬಂದೆನ್ನ ನಡವಳಿಯಲಿ ಸ್ವಾನದುರಿತಂಗಳೆಲ್ಲ ಕಾಡುತಿವೆ ಪರಿಹರಿಸು ಎಲೆ ದೇವ ||2|| ಊದುವ ಕಾಳೆಯದನರ್ಥಕವಾದಲ್ಲಿ ನುಡಿಸುವ ಬಿರುದು ಒಡೆಯಂಗಲ್ಲದೆಮಾಧವನೆ ಎನ್ನ ನಡವಳಿಯಲ್ಲಿ ಹುರುಳಿಲ್ಲಓದುವುದು ನಿನ್ನ ನಾಮಸ್ಮರಣೆಯೆ ಎಲೆ ದೇವಆದರಿಸು ನಿನ್ನ ಲೆಂಕನ ಪ್ರತಿ ಲೆಂಕನಭೇದವೇತಕೆ ನಿನ್ನ ದಾಸ

ನಿನ್ನ ನಾಮ ವಾಲ್ಮೀಕಿಯನುದ್ಧರಿಸಿದೆ ದೇವ Read More »

ನಿನ್ನ ನಾನೇನೆಂದೆನೊ – ರಂಗಯ್ಯ

ನಿನ್ನ ನಾನೇನೆಂದೆನೊ – ರಂಗಯ್ಯ ರಂಗನಿನ್ನ ನಾನೇಂದೆನೊ ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿಪನ್ನಗಶಯನ ಪಾಲ್ಗಡಲೊಡೆಯನೆ ರಂಗ ಧೀರ ಸೋಮಕ ವೇದಚೋರ ಖಳನನು ಸೀಳಿವಾರಿಧಿಗಿಳಿದು ಪರ್ವತವನೆತ್ತಿಧಾರಿಣಿಯನು ಕದ್ದ ದನುಜದಲ್ಲಣನಾದನಾರಸಿಂಹ ನಿನಗೆ ನಮೊ ಎಂದೆನಲ್ಲದೆನೀರ ಪೊಕ್ಕವನೆಂದೆನೆ – ಬೆನ್ನಲಿ ಘನ್ನಭಾರ ಪೊತ್ತವನೆಂದೆನೆ – ಮಣ್ಣನಗೆದುಬೇರ ಮೆದ್ದವನೆಂದೆನೆ – ರಕ್ಕಸನೊಳುಹೋರಿ ಹೊಯ್ದನೆಂದು ಹೊಗಳಿದೆನಲ್ಲದೆ ||1|| ಧರೆಯ ದಾನವ ಬೇಡಿ ನೆಲನ ಈರಡಿ ಮಾಡಿಪರಶು ಪಿಡಿದು ಕ್ಷತ್ರಿಯರ ಸವರಿಚರಣದಿ ಪಾಷಾಣ ಪೆಣ್ಣು ಮಾಡಿದ ಪುಣ್ಯಚರಿತ ಯಾದವ ಪತಿ ಶರಣೆಂದೆನಲ್ಲದೆತಿರುಕ ಹಾರುವನೆಂದೆನೆ – ಹೆತ್ತ

ನಿನ್ನ ನಾನೇನೆಂದೆನೊ – ರಂಗಯ್ಯ Read More »

ನಿನ್ನ ನಾ ಮರೆತರೂ ಎನ್ನ ಕೈ ಬಿಡದಿರು

ನಿನ್ನ ನಾ ಮರೆತರೂ ಎನ್ನ ಕೈ ಬಿಡದಿರು ಕರುಣಿಚನ್ನಕೇಶವ ಶ್ರೀ ವೆಂಕಟಾದ್ರಿನಿಲಯ ಎನ್ನ ತಪ್ಪುಗಳ ನಾನು ಮರೆಯಲೆಂತು ಎನ್ನಬೆನ್ನ ನೋಡಿಕೊಳ್ಳಲಹುದೆ ಎನ್ನಿಂದ ಮಂಜು ಮರೆಯಾಗುವುದು ಮಾರ್ತಾಂಡ ಮೂಡೆಕಂಜಲೋಚನ ನಿನ್ನ ಪದಕಮಲ ಸ್ಮರಣೆರಂಜಿಸಿ ಮನವನು ಪಾರಾಗಿಪುದು ಪಾಪಗಳಅಂಜಿಕೆಯ ಬಿಡಿಸುತ ಅನುಗ್ರಹಿಪ ಕರುಣಿ ||1|| ದಯೆ ನಿನ್ನದಿರೆ ಭಯ ಎನಗಿಲ್ಲ ಹರಿಮಾಯೆ ಮೋಹಗಳಿಗೆ ಮರುಳಾಗಿಹ ಬೊಂಬೆಜಯವಾಗಿಸಿ ಈ ಜನ್ಮ ಕೃತಾರ್ಥವ ಮಾಡುತೋಯಜಾಕ್ಷ ಶ್ರೀ ನೆಲೆಯಾದಿಕೇಶವರಾಯ||2||

ನಿನ್ನ ನಾ ಮರೆತರೂ ಎನ್ನ ಕೈ ಬಿಡದಿರು Read More »

ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮೀ

ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮೀ ನಿನಗಿಂತ ಕುಂದೇನೋ ಸನಕಾದಿಗಳ ಸ್ವಾಮಿಮನಸಿಜನೊಡೆಯನೆ ಕನಕಗರ್ಭನ ಜನಕ ಮಚ್ಚ್ಯಾವತಾರ ನೀನಾದರೆ – ಆಕೆಮಚ್ಚ್ಯಗಂಗಳೆ ತಾನಾದಳೊಹೆಚ್ಚಿನ ಶಂಖವ ಪಿಡಿದರೆ – ಆಕೆನಿಚ್ಚ ಶಂಖಕಂಠಳಾದಳಯ್ಯ ||1|| ನೀಲವರ್ಣ ನೀನಾದರೆ – ಆಕೆನೀಲಕುಂತಳೆ ತಾನಾದಳೊಲೋಲ ಕಮಲನಾಭನಾದರೆ – ಆಕೆಬಾಲ ಕಮಲಮುಖಿಯಾದಳಯ್ಯ||2|| ಬೆಟ್ಟವ ನೀನೊಂದು ಪೊತ್ತರೆ – ಆಕೆಬೆಟ್ಟದಂಥ ಕುಚವೆರಡು ಪೊತ್ತಳೊಮೆಟ್ಟಿ ಶೇಷನ ನೀ ತುಳಿದರೆ – ಆಕೆಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ||3|| ಗಜರಾಜವರದ ನೀನಾದರೆ – ಆಕೆಗಜಗಮನೆಯು ತಾನಾದಳಯ್ಯನಿಜ ನರಸಿಂಹ ನೀನಾದರೆ – ಆಕೆಭಜಿಸಿ ಸಿಂಹಮಧ್ಯೆಯಾದಳಯ್ಯ

ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮೀ Read More »

ನಿತ್ಯಂ ಪುರುಷೋತ್ತಮಂ ನ್ಯಾಯಂ

ನಿತ್ಯಂ ಪುರುಷೋತ್ತಮಂ ನ್ಯಾಯಂ – ಅಪಮೃತ್ಯುಂ ಸಂಕಟ ಹರಣಂ ಪರಲೋಕ ಸಾಧನ ಕರುಣಾಕರಂಶರಣಾಗತ ಜನಾಧಾರಂಸರಸಿಜಭವ ಭವರೋಗ ಸಂಹಾರಂಪುರುಷೋತ್ತಮ ಘೋರವಿಹಾರಂ||1|| ಜ್ಞಾನಭಕ್ತಿ ವೈರಾಗ್ಯ ಸುಜಾತಂಜನನ ಮರಣ ರಹಿತ ಜಲನಿಧಿ ಪೋತಂಘನ ದಾರಿದ್ರ್ಯ ರವಿ ತಾರಾನಾಥಂಅನುಶ್ರುತ ವೈಭವ ಮಂಗಲಗೀತಂ||2|| ಭೂರಿಭುವನ ಜೀವನಗುಣಂ – ಗಂಭೀರಸಾರ ಪಲ್ಲವ ನಿಕರಾಭರಣಂನಾರದ ವಾಲ್ಮೀಕ್ಯಂತಃಕರಣಂವರದಾದಿಕೇಶವ ನಾದ ನಿತ್ಯಸ್ಮರಣಂ||3||

ನಿತ್ಯಂ ಪುರುಷೋತ್ತಮಂ ನ್ಯಾಯಂ Read More »

ನಾರಾಯಣೆನು ಮನವೆ ನರಹರಿಯ ನೆನೆ ಮನವೆ

ನಾರಾಯಣೆನು ಮನವೆ ನರಹರಿಯ ನೆನೆ ಮನವೆಘೋರ ದುರಿತಗಳ ಬೆದರಿಸಿ ಓಡಿಸುವುದು ಗುರುವಿನುಪದೇಶದಲ್ಲಿ ಪರಮ ರಹಸ್ಯವನರಿತುಮರೆಯದಲೆ ಅಲ್ಲಿ ಅಧಿಕಾರಿಯಾಗೊತಿರುಮಂತ್ರವನು ಜಪಿಸು ತಿರುಲಾಂಛನವ ಧರಿಸುಪರಮ ವೈಷ್ಣವರ ಪಂಕ್ತಿಯ ಸೇರು ಮನವೆ ||1|| ಕುಲಛಲಂಗಳ ಬಿಟ್ಟು ಬಲು ಪಾಶಗಳ ತರಿದುಹಲವು ಕೊಂಬೆಗೆ ನೀನು ಹರಿದಾಡದೆಸುಲಭದಲಿ ಶ್ರೀಪಾದತೀರ್ಥ ಪ್ರಸಾದವನುನೆಲೆಗೊಳಿಸಿ ಆತ್ಮನಿಗೆ ನಿತ್ಯ ಸುಖಿಯಾಗೋ ||2|| ಶೇಷವಿಶೇಷವೆಂದೆನಿಪ ಪರಮಾರ್ಥದೊಳುಮೀಸಲಳಿಯದ ಪಾಪರಹಿತನಾಗುವಾಸಾಧಿಪತಿ ಕಾಗಿನೆಲೆಯಾದಿಕೇಶವನದಾಸಾನುದಾಸರಿಗೆ ದಾಸ ನೀನಾಗೊ ||3||

ನಾರಾಯಣೆನು ಮನವೆ ನರಹರಿಯ ನೆನೆ ಮನವೆ Read More »

ನಾರಾಯಣಾ ನಮೋ ನಾರಾಯಣಾ

ನಾರಾಯಣಾ ನಮೋ ನಾರಾಯಣಾ ಘೋರ ಸಂಸಾರ ಭವದೂರ ಋಷಿಜನ ಮನೋ-ಹಾರ ಸಾಕಾರ ಸಿರಿಧರ ರೂಪನೆ ನಮೋ ಉತ್ತಾನಪಾದನ ಅಣುಗಗೆ ಧ್ರುವ ಪದವಿಜತ್ತಯಿಸಿ ಕೊಟ್ಟೆ ಶ್ರೀನಾರಾಯಣಾಉತ್ಕಚದ ಬಾಲೆಯ ಕಡುಲಜ್ಜೆ ಸಭೆಯೊಳಗೆವಿಸ್ತರಿಸಿ ಕಾಯ್ದೆ ಶ್ರೀನಾರಾಯಣಾಕತ್ತರಿಸಿ ನೆಗಳು ನುಂಗಿದ ಕುಮಾರಕನ ತಂ-ದಿತ್ತೆ ಮುನಿವರನಿಗೆ ನಾರಾಯಣಾಚಿತ್ತಜಾರಿ ಕೊಲ್ಲಲಂಬರೀಷ ಭೂಪೋತ್ತಮನ ಕಾಯ್ದೆ ಶ್ರೀನಾರಾಯಣಾ ||1|| ನಕ್ರಂಗೆ ಸಿಲ್ಕಿ ನಡುನೀರೊಳೊದರುವ ಗಜವಚಕ್ರದಿಂ ಕಾಯ್ದೆ ಶ್ರೀನಾರಾಯಣಾಶುಕ್ರನುಪದೇಶವನು ತವೆ ಜರಿದ ವೈಷ್ಣವರಅಕ್ಕರದಿ ಪಾಲಿಸಿದೆ ನಾರಾಯಣಾಶಕ್ರಜಿತುಪಿತ ಸಹೋದರಗೆ ಸ್ಥಿರರಾಜ್ಯವನುಉತ್ಕøಷ್ಟದಿಂ ಕೊಟ್ಟೆ ನಾರಾಯಣಾದುಷ್ಕøತದಿ ಸುತನ ಪೆಸರ್ಗೊಂಡವನ ಕಾಯ್ದೆಯೊ ತ್ರಿ-ವಿಕ್ರಮಾಂಕಿತ ವೀರ ನಾರಾಯಣಾ||2||

ನಾರಾಯಣಾ ನಮೋ ನಾರಾಯಣಾ Read More »

ನಾರಾಯಣನೆ ಈತ

ನಾರಾಯಣನೆ ಈತ – ನಾರಿ ಒಳ್ಳೆಯವರಿಗೆ ಮಾಡ್ದ ವಿಘಾತ ಪರಿಪರಿಯಲಿ ಪೊಗಳುವ ಗೀತ – ನಾನೆಂದವರ ಮುರಿದ ಪ್ರಖ್ಯಾತ ಕೈಕಾಲಿಲ್ಲದೆ ಆಡ್ದಾಮೈಮೇಲ್ಭಾರವ ಪೊತ್ತು ನೋಡ್ದಾಕೋರೆಯಲಿ ತಿವಿದು ಹತ ಮಾಡ್ದಾತಾಕೊ ಎಂದು ಒದರಿ ಬಗೆದು ಬೀರ್ದಾಅರ್ತಿಯಿಂದ ಪಾತಾಳಕೆ ದೂಡ್ದಾಮುನಿಯ ಮಗನಾಗಿ ಕ್ಷತ್ರಿಯರ ಕಾಡ್ದಾರಾವಣಗಾಗಿ ಅಂಬುತೆಗೆದು ಹೂಡ್ದಾಆ ಜಮುನೆ ಪೊಕ್ಕು ಮೋಜು ಮಾಡ್ದಾದಿಗಂಬರ ವೇಷವ ತಾಳ್ದಾದಿಗಿದಿಗಿ ಎಂದು ಅಶ್ವವೇರ್ದಾ ||1|| ಕಳ್ಳಗಿಂತ ಮಹಾಕಳ್ಳಕಲ್ಲನು ಮರೆ ಮಾಡಿಕೊಂಡಿಹನಲ್ಲಭೂಮಿ ನೆಗಹುದ ಬಲ್ಲಪುಟ್ಟ ಮಗು ಪ್ರಹ್ಲಾದಗೊಲಿದನಲ್ಲಎರಡು ಪಾದ ಭೂಮಿ ತಾನೊಲ್ಲಇವನ ಕೊಡಲಿಬಾಯಿಗಿದಿರಿಲ್ಲಕೋ ಎಂದ ಲಂಕೆಗೆ

ನಾರಾಯಣನೆ ಈತ Read More »

ನಾರಾಯಣ ನಿನ್ನ ನಾಮವೊಂದಿರುತಿರೆ

ನಾರಾಯಣ ನಿನ್ನ ನಾಮವೊಂದಿರುತಿರೆಬೇರೊಂದು ನಾಮವಿನ್ನ್ಯಾಕಯ್ಯ ನೆಟ್ಟನೆ ದಾರಿಯು ಬಟ್ಟೆಯೊಳಿರುತಿರೆಬೆಟ್ಟವ ಬಳಸಲಿನ್ನ್ಯಾಕಯ್ಯಅಷ್ಟೈಶ್ವರ್ಯದ ಮೃಷ್ಟಾನ್ನವಿರುತಿರೆಬಿಟ್ಟಿ ಕೂಳನು ತಿನ್ನಲ್ಯಾಕಯ್ಯ ||1|| ಪರುಶದ ಪಾಳಗಳಿರುತಿರೆ ಬೀದಿಜರಿಗಲ್ಲ ತೊಳೆಯಲಿನ್ಯಾಕಯ್ಯಹರಿವಾಣದೊಳಗಮೃತಾನ್ನವಿರುತಿರೆತಿರಿಪೆ ಕೂಳನು ತಿನ್ನಲ್ಯಾಕಯ್ಯ ||2|| ಬೆಲ್ಲವು ಕರದೊಳಗಿರುತಿರೆ ಕಾಡಕಲ್ಲನು ಕಡಿಯಲಿನ್ಯಾಕಯ್ಯಬಲ್ಲಿದ ನೆಲೆಯಾದಿಕೇಶವನಿರುತಿರೆಚಿಲ್ಲರೆ ದೈವದ ಹಂಬಲ್ಯಾಕಯ್ಯ ||3||

ನಾರಾಯಣ ನಿನ್ನ ನಾಮವೊಂದಿರುತಿರೆ Read More »

ನಾರಾಯಣ ಎಂಬ ನಾಮದ ಬೀಜವನು

ನಾರಾಯಣ ಎಂಬ ನಾಮದ ಬೀಜವನು ನಾಲಗೆಯಕೂರಿಗೆಯ ಮಾಡಿ ಬಿತ್ತಿರಯ್ಯ ತನುವ ನೇಗಿಲು ಮಾಡಿ ಹೃದಯ ಹೊಲವನು ಮಾಡಿತನ್ವಿರಾ ಎಂಬ ಎರಡೆತ್ತ ಹೂಡಿಜ್ಞಾನವೆಂಬೊ ಮಿಣಿಯ ಕಣ್ಣಿ ಹಗ್ಗವ ಮಾಡಿಧ್ಯಾನವೆಂಬ ಧಾನ್ಯವ ನೋಡಿ ಬಿತ್ತಿರಯ್ಯ ||1|| ಕಾಮಕ್ರೋಧಗಳೆಂಬ ಗಿಡಗಳನು ತರಿಯಿರಯ್ಯಮದಮತ್ಸರವೆಂಬ ಪೊದೆಯ ಇರಿಯಿರಯ್ಯಪಂಚೇಂದ್ರಿಯಗಳೆಂಬ ಮಂಚಿಕೆಯ ಹಾಕಿರಯ್ಯಚಂಚಲವೆಂಬ ಹಕ್ಕಿಯ ಓಡಿಸಿರಯ್ಯ ||2|| ಉದಯಾಸ್ತಮಾನವೆಂಬ ಎರಡು ಕೊಳಗವ ಮಾಡಿ ಆಯುಶ್ಯದ ರಾಶಿಯನು ಅಳೆಯಿರಯ್ಯಇದು ಕಾರಣ ಕಾಗಿನೆಲೆಯಾದಿಕೇಶವನಮುದದಿಂದ ನೆನೆನೆನೆದು ಸುಖಿಯಾಗಿರಿಯ್ಯ||3||

ನಾರಾಯಣ ಎಂಬ ನಾಮದ ಬೀಜವನು Read More »

ನಾಮ ಮುಂದೊ ಸ್ವಾಮಿ ವಿಭೂತಿ ಮುಂದೊ

ನಾಮ ಮುಂದೊ ಸ್ವಾಮಿ ವಿಭೂತಿ ಮುಂದೊ ಭೂಮಿ ಆಕಾಶ ಪೊತ್ತೊ ಆಕಾಶ ಭೂಮಿಯ ಪೊತ್ತೊಭೂಮಿಯು ಮುಂದೊ ಆಕಾಶ ಮುಂದೊ ಸ್ವಾಮಿ ||1|| ತತ್ತಿ ಹಕ್ಕಿಯ ಪೊತ್ತೊ ಹಕ್ಕಿ ತತ್ತಿಯ ಪೊತ್ತೊತತ್ತಿಯು ಮುಂದೊ ಹಕ್ಕಿಯು ಮುಂದೊ ಸ್ವಾಮಿ ||2|| ಬೀಜ ವೃಕ್ಷವ ಪೊತ್ತೊ ವೃಕ್ಷ ಬೀಜವ ಪೊತ್ತೊಬೀಜವು ಮುಂದೊ ವೃಕ್ಷವು ಮುಂದೊ ಸ್ವಾಮಿ ||3|| ಗಂಡ ಹೆಂಡಿರ ಪೊತ್ತೊ ಹೆಂಡಿರು ಗಂಡನ ಪೊತ್ತೊಗಂಡನು ಮುಂದೊ ಹೆಂಡಿರು ಮುಂದೊ ಸ್ವಾಮಿ||4|| ಕನಕನು ಹೇಳಿದ ಬೆಡಗಿದು ಕಂಡವರೆಲ್ಲರುಮನದಲಿ ಚಿಂತಿಸಿ ಮಥಿಸಿ ನವನೀತ

ನಾಮ ಮುಂದೊ ಸ್ವಾಮಿ ವಿಭೂತಿ ಮುಂದೊ Read More »