admin

ಶ್ರೀಪತಿಯ ನೈವೇದ್ಯ ಕೊಡುವದು

ಶ್ರೀಪತಿಯ ನೈವೇದ್ಯ ಕೊಡುವದು ಧೂಪದಾಂತರ ಭೂಮಿಶೋಧನ ಆಪದಿಂ ಮಂಡಲವ ಮಾಡುತ ರಂಗವಲಿ ಹಾಕಿ ಸೂಪ ಅನ್ನವು ಅಗ್ನಿಕೋಣದಿ ಆ ಪರಮ ಅನ್ನವನು ಈಶಾ ನ್ಯಾಪೆಯಾಲೇಹಗಳ ನೈರುತದಲಿ ಇಟ್ಟು ತಥಾ ||1|| ವಾಯುದಿಶದಲಿ ಉಪಸುಭೋಜ್ಯವು ವಾಯಸಾನ್ನದ ಮಧ್ಯ ಘೃತಸಂ ಸ್ತೂಯಮಾನ ನಿವೇದನವು ಈ ಕ್ರಮದಿ ಹೀಂಗಿಟ್ಟು ಬಾಯಿಯಿಂದಲಿ ದ್ವಾದಶ ಸ್ತುತಿ ಗಾಯನದಿ ನುಡಿಯುತಲಿ ಈ ಕಡೆ ಆಯಾ ಅಭಿಮಾನಿಗಳು ದೇವತೆಗಳನು ಚಿಂತಿಸುತ ||2|| ಓದನಕ ಅಭಿಮಾನಿ ಶಶಿಪರ ಮೋದನಕ ಅಭಿಮಾನಿ ಭಾರತಿ ಆದಿವಾಕರ ಭಕ್ಷ ಕ್ಷೀರಾಬ್ಧೀಜೆ ಸರ್ಪಿಯಲಿ ಸ್ವಾದುಕ್ಷೀರಕ […]

ಶ್ರೀಪತಿಯ ನೈವೇದ್ಯ ಕೊಡುವದು Read More »

ಶ್ರೀನಿವಾಸನ ಕ್ಷೇತ್ರ ಎಂಥಾದೊ

ಶ್ರೀನಿವಾಸನ ಕ್ಷೇತ್ರ ಎಂಥಾದೊ ಮಾನಿಸರಿಗೊಶವಲ್ಲ ಪೊಗಳಿ ಪೇಳುವುದು ಮೇಧಾದಿ ಮುನಿ ತನ್ನ ತಪೋಸಿದ್ಧಿಗೆ ಸರ್ವ | ಮೇದಿನಿ ತಿರುಗಿ ಬರುತಲಿ ಇತ್ತಲು | ಸಾಧನಕೆ ಸೌಮ್ಯವಾದ ಭೂಮಿಯನು ನೋಡಿ ಇವ | ಮಾಧವನ ಒಲಿಸಿದನು ಮಣಿ ಮುಕ್ತಿ ತೀರದಲಿ||1|| ನೆಸಗಿದ ತಪಕೆ ಮೆಚ್ಚಿ ಹರಿ ಒಲಿದ ತೀವ್ರದಲಿ | ಬಿಸಿಜದಳ ಲೋಚನೆ ಲಕುಮಿಯಿಲ್ಲೀ || ಎಸೆವ ಮಂಜರಿ ವೃಕ್ಷದಲಿ ವಾಸವಾಗಿ | ವಸುಧಿಯೊಳು ವಾಸವಾಗಿ ಅಗ್ರದಲಿ ಮೆರೆದನು ||2|| ಪರಮೇಷ್ಠಿ ಬಂದು ಈ ಕ್ಷೇತ್ರದಲಿ ನಿಂದು ಚ

ಶ್ರೀನಿವಾಸನ ಕ್ಷೇತ್ರ ಎಂಥಾದೊ Read More »

ಶ್ರೀನಾಥ ಶ್ರೀನಾಥ ಶ್ರೀನಾಥ

ಶ್ರೀನಾಥ ಶ್ರೀನಾಥ ಶ್ರೀನಾಥ ಮೋಹಿನೀ ರೂಪ ತಾ ತಾಳಿದಾನೆ ಸುಕಲಾಪ ತಾನೋಡಿಸುವುದು ಹೃತ್ತಾಪ ವನಂಬೆನೆ ಹರಿಯ ಪ್ರತಾಪ ಬಂಗಾರದ ಲತೆಯಂತೆ ಬಳುಕುವಳು ಬಾಜು ಬಂದಿಗೆ ಗೊಂಡೆಗಳ ಕಟ್ಟಿಹಳು ಮುಂಗಾಲಿಲೆ ನಿರಿಗಿಗಳ ಚಿಮ್ಮುವಳು ಮೋಹನ ಮಾಲೆಗಳ ಕಟ್ಟಿಹಳು ಕುಂಭ ಕುಚದ ಭಾರಕ್ಕೆ ತಡಿಯಳೂ ತುದಿಬೆರಳಲಿ ಗಲ್ಲವನೊತ್ತಿಹಳು ರಂಗು ಕೇಸರಿ ಗಂಧ ಹಚ್ಚಿಹಳು ರಾಜೀವದ ಮಂಜರಿಯ ಪೋಲುವಳು ಹೊಂಗ್ಯಾದಿಗೆ ಪೋಲುವ ಮೈಬಣ್ಣ ಹೊಮ್ಮಸದಲಿ ಹೋಲುವ ಈ ಹೆಣ್ಣು ಹಿಂಗಡೆಯಲಿ ವರ ಹೆರಳು ಭಂಗಾರ ಹಿಮ್ಮಡಿ ಬಡಿಯೋದು ಸರ್ಪಾಕಾರ ಭಂಗಿಸುವಳು ಬಹು

ಶ್ರೀನಾಥ ಶ್ರೀನಾಥ ಶ್ರೀನಾಥ Read More »

ಶ್ರೀ ವನಿತೆ ವೈನತೇಯ ವಾರುತೆ

ಶ್ರೀ ವನಿತೆ ವೈನತೇಯ ವಾರುತೆ ದೇವಾದಿ ವರವಿನುತೆ ಕಾವದು ಯೆನ್ನ ನೀ ವದಿಗಿ ಮುನ್ನೆ ಈವದು ವರ ಆವದುವಲ್ಲೆ ದೇವಿ ನಿನ್ನಯ ರಾಜೀವ ಚರಣದ ಸೇವೆಯ ಪಾಲಿಸು ಕೋವಿದರೊಡನೆ ಸಮಸ್ತಲೋಕ ವಂದಿತೆ ಸಂತತ ಮತ್ತೆ ತಾಮಸ e್ಞÁನ ಹರತೆ ಸಾಮಗಾಯನ ಪ್ರೀತೆ ಸಕಲವಿದ್ಯಾತೀತೆ ರೋಮ ರೋಮ ಗುಣ ಭರಿತೆ ರಾಮನ್ನ ಪದ ನಾಮವನ್ನು ನಾ ಮರೆಯದಂತೆ ನೀ ಮನಸು ಕೊಡು ಹೇಮಾಂಬರೆ ಕಾಂಚಿದಾಮೆ ಅಮಮ ನಿ- ಸ್ಸೀಮ ಮಹಿಮೆ ಭಕ್ತಸ್ತೋಮ ವನಧಿ ಸೋಮೆ ಕಾಮ ಜನನಿ ತ್ರಿಧಾಮೆ

ಶ್ರೀ ವನಿತೆ ವೈನತೇಯ ವಾರುತೆ Read More »

ಶ್ರೀ ವನಜಲೋಚನ ಭವ ಮೋಚನಾ

ಶ್ರೀ ವನಜಲೋಚನ ಭವ ಮೋಚನಾ | ಭಾವಿಸುವೊದು ಸೂಚನಾ | ಪಾವನರಂಗಾ | ಜೀವಾಂತರಂಗ | ಜೀವ ತುರಂಗಾ | ಗ್ರೀವ ರಿಪು ಭಂಗಾ | ದೇವ ಎನ್ನಯ | ಹೃದ್ದಾವರೆಯಲಿ ನಿಲ್ಲು | ಆವಾವ ಬಗೆ ಸು | ರೂಹ | ಆವಾಗ ತೋರುತ ನಂದನಂದನಾ ಆನಂದಾ | ನಾಗನಾ | ಬಂಧಾ | ಹಿಂದುಗೈಸಿದ ಮುಕುಂದಾ | ಅಂದು ಬೀಡಾದೆಕ್ಕೆಂದಾ | ದಾ ಖಳನ ಕೊಂದೆ | ನಂದವ್ರಜದ ಗೋವಿಂದಾ | ಯಶೋದೆ ಕಂದಾ

ಶ್ರೀ ವನಜಲೋಚನ ಭವ ಮೋಚನಾ Read More »

ಶ್ರೀ ಲತಾಂಗಿರ ರಮಾಕೃಷ್ಣನು

ಶ್ರೀ ಲತಾಂಗಿರ ರಮಾಕೃಷ್ಣನು ಬಾಲ ಲೀಲೆಯ ಜಗಕೆ ತೋರುತ ||1|| ಆಡಿಪಾಡುತ ಕೂಡಿ ರಮಿಸುತ ಗಾಡಿಗಾರನು ಅವಳ ಹೆಗಲನೇರಿಸಿ ||2|| ತಾನೆ ಸುಂದರೀ ಎಂದು ಗರ್ವಿಸೆ ದೀನನಾಥನು ಅದೃಶ್ಯನಾದನು ||3|| ಅಗರು ಕಸ್ತೂರೀ ಪೂಸಿ ಹೃದಯಕೇ ಮೊಗರು ಕುಚಗಳ ಮುಖದ ಕಮಲವು ||4|| ಎತ್ತ ಪೋದನೋ ರಂಗ ಎನುತಲಿ ಚಿತ್ತ ಭ್ರಮೆಯಲಿ ಹುಡುಕುತ್ತಿದ್ದರು ||5|| ಎಲ್ಲಿ ಪೋದನೋ ಕೃಷ್ಣ ಎನುತಲಿ ಮತ್ತೆ ಸಖಿಯರು ಹುಡುಕುತ್ತಿದ್ದರು ||6|| ಸುತ್ತ ಗೋಕುಲಾದೊಳಗೆ ಸ್ತ್ರೀಯರೂ ಮತ್ತೆ ಕೃಷ್ಣನ ಪಾದ ಕಾಣದೇ ||7||

ಶ್ರೀ ಲತಾಂಗಿರ ರಮಾಕೃಷ್ಣನು Read More »

ಶ್ರೀ ಮಾರುತನ ಮಾನಿನಿ ಭಾರತೀದೇವಿ

ಶ್ರೀ ಮಾರುತನ ಮಾನಿನಿ ಭಾರತೀದೇವಿ ಆ ಮಹಾಭಕುತಿಗಭಿಮಾನಿ ಕಾಮಾಂತಕ ಸುತ್ರಾಮ ಕಾಮ ರವಿ ಸೋಮವಿನುತೆ ಮದಸಾಮಜ ಗಮನೆ ನೀಲಕುಂತಳೆ ಮೋಹನ್ನೇ-ಸುವಾಣಿ ಚನ್ನೆ ಬಾಲಾರ್ಕ ತಿಲಕರನ್ನೆ ಫಾಲೆ ವಿಶಾಲೆ ಗುಣರನ್ನೆ -ಕುಂದರದನ್ನೆ ಮೂರ್ಲೋಕದೊಳು ಪಾವನ್ನೆ ಕಾಳವ್ಯಾಳ ವೇಣಿ ಮ್ಯಾಲೆ ರ್ಯಾಗಟೆ ಪೊ ನ್ನೊಲೆ ಚವುರಿಗೊಂಡ್ಯ ಹೆರಳು ಭಂಗಾರ ಕು- ಟ್ಟಿಲ ಚಂಪಕ ನಾಸಿಕ ನೀಲೋ ತ್ಪಲೆ ನೇತ್ರಳೆ ಪಾಂಚಾಲಿ ಕಾಳಿ ನಮೋ ||1|| ಪೊಳಿವೊ ಕೆಂದುಟಿ ನಸುನಗೆ ಪತ್ತು ದಿಕ್ಕಿಗೆ ಬೆಳಕು ತುಂಬಿರಲು ಮಿಗೆ ಥಳಕು ವೈಯಾರದ ಬಗೆ

ಶ್ರೀ ಮಾರುತನ ಮಾನಿನಿ ಭಾರತೀದೇವಿ Read More »

ಶ್ರೀ ಮಹಾಲಕುಮಿ ದೇವಿಯೆ,

ಶ್ರೀ ಮಹಾಲಕುಮಿ ದೇವಿಯೆ, ಕೋಮಲಾಂಗಿಯೆ ಸಾಮಗಾಯನ ಪ್ರಿಯೆ ಹೇಮಗರ್ಭ ಕಾಮಾರಿ ಶಕ್ರಸುರ ಸ್ತೋಮ ವಂದಿತಳೆ ಸೋಮ ಸೋದರಿಯೆ ಬಟ್ಟುಕುಂಕುಮ ನೊಸಲೋಳೆ ಮುತ್ತಿನ ಹೊಸ ಕಟ್ಟಾಣಿ ತ್ರಿವಳಿ ಕೊರಳೋಳೆ ಇಟ್ಟ ಪೊನ್ನೋಲೆ ಕಿವಿಯೋಳೆ ಪವಳದ ಕೈಯ ಕಟ್ಟ ಕಂಕಣ ಕೈಬಳೆ ತೊಟ್ಟ ಕುಪ್ಪಸ ಬಿಗಿದುಟ್ಟ ಪೀತಾಂಬರ ಘಟ್ಟಿ ವಡ್ಯಾಣ ಕಾಲಂದಿಗೆ ರುಳಿಗೆಜ್ಜೆ ಬೆಟ್ಟಿಲಿ ಪೊಳೆವುದು ವೆಂಟಿಕೆ ಕಿರುಪಿಲ್ಲಿ ಇಟ್ಟು ಶೋಭಿಸುವ ಅಷ್ಟಸಂಪನ್ನೆ ||1|| ಸಕಲ ಶುಭಗುಣಭರಿತಳೆ ಏಕೋದೇವಿಯೆ ವಾಕುಲಾಲಿಸಿ ನೀ ಕೇಳೆ ನೋತನೀಯನ್ನ ಮಹಲೀಲೆ ಕೊಂಡಾಡುವಂಥ ಏಕಮನವ ಕೊಡು

ಶ್ರೀ ಮಹಾಲಕುಮಿ ದೇವಿಯೆ, Read More »

ಶ್ರೀ ಮಧ್ವಮತ ಸಾಗರದೊಳಗೆ ಲೋಲಾಡಿ

ಶ್ರೀ ಮಧ್ವಮತ ಸಾಗರದೊಳಗೆ ಲೋಲಾಡಿ ಆ ಮಹಾತತ್ವ ತಾರತಮ್ಯಗಳ ತಿಳಿದು ಕಾಮ ಕ್ರೋಧಗಳೆಲ್ಲ ಹಳಿದು ಗುರು ಹನುಮಂತ ಭೀಮ ಮಧ್ವಮುನಿಯ ಸಾರಿರಯ್ಯ | ಅಯ್ಯಯ್ಯಾ ಅಂಜನೇಯ ಗರ್ಭದಲಿ ಜನಿಸಿ ಆಕಾಶದಲ್ಲಿ ಕಂಜನಾಪ್ತನ ತುಡುಕಿ ಕಿಷ್ಕಿಂಧದಲಿ ಕಪಿ ರಂಜನನ ಕೂಡಿ ಪಂಪಾ ತೀರದಲಿ ದೇವಂಜನ ಪಾದವ ಕಂಜನಮಿತನಾಗಿ ಬಂದು ಮುದ್ರೆಯ ಧರಿಸಿ ಜನಕಾತ್ಮಜಗೆಯಿತ್ತು ಅಕ್ಷರಿ ಎನೊ ಭಂಜನವ ಮಾಡಿ ಲಂಕೆಯನುರಿಪಿ ಬಂದ ಪ್ರ ಭಂಜನಿಯ ಭಜಿಸಿರಯ್ಯಾ | ಅಯ್ಯಯ್ಯಾ ||1|| ಧರ್ಮನಂದನೊಡನೆ ಜನಿಸಿ ಹಾಲಹಲ ಉಂಡು ಸೀರ್ಮುಟ್ಟಿ ಪೋಗಿ

ಶ್ರೀ ಮಧ್ವಮತ ಸಾಗರದೊಳಗೆ ಲೋಲಾಡಿ Read More »

ಶ್ರೀ ಕಮಲನೇತುರ ಪುಣ್ಯಗಾತುರ |

ಶ್ರೀ ಕಮಲನೇತುರ | ಪುಣ್ಯಗಾತುರ | ಸಾಕಾರ ಕ್ಷಣ ಮಾತುರ | ನೀ ಕರುಣದಿಂದ | ವಾಕು ಲಾಲಿಸು | ಬೇಕು ವೇಗದಲಿ | ಗೋಕುಲಾಂಬುಧಿ ರಾಕಾಂಬುಜ ಲಾ | ವಕರ ತೊಲಗಿಸಿ | ಸಾಕುವುದೆನ್ನ ನಿ | ಜಕರ ವಿಡಿದೂ ದೇವಕಿ ಗರ್ಭ ಸಂಭೂತ | ನಿತ್ಯ ಅಜಾತಾ | ಪಾವನ ಬಲು ಚರಿತಾ | ಕೋವಿದರರಸ ಶತ | ಕುಂಭ ಮಕುಟನೀತಾ | ಮಾವ ಮರ್ದನ ನಿರ್ಭೀತಾ || ದೇವಮರರ ಕಾ | ವ

ಶ್ರೀ ಕಮಲನೇತುರ ಪುಣ್ಯಗಾತುರ | Read More »

ಶೋಭಾನ ಶೋಭಾನವೆನ್ನಿರೆ ಸುರರಂಗನಿಯರೆಲ್ಲ

ಶೋಭಾನ | ಶೋಭಾನವೆನ್ನಿರೆ ಸುರರಂಗನಿಯರೆಲ್ಲ ಶೋಭಾನವೆನ್ನಿ ಶುಭವೆನ್ನಿ ಪ ಮಂಗಳದೇವಿಯ ರಮಣ ಬಾ | ಶೃಂಗಾರದ ಗುಣನಿಧಿಯೆ ಬಾ | ಅಂಗಜಜನಕ ಅರವಿಂದದಾಳಾಕ್ಷನೆ ರಂಗಾ ಬಾ || ಭವಭವ ಭಂಗಾ ಬಾ | ದೇವೋತ್ತುಂಗಾ ಬಾ | ಜಗದಂತರಂಗಾ ಬಾ ಹಸೆಯ ಜಗುಲಿಗೆ||1|| ಸಂಕುರುಷಣ ಅನಿರುದ್ಧಾ ಬಾ | ಪಂಕಜ ಸಂಭವನಯ್ಯ ಬಾ | ಕುಂಕುಮಾಂಕಿತನೆ ಭಕುತ ಕುಮುದ ಮೃಗಾಂಕ ಬಾ || ನಿಷ್ಕಳಂಕಾ ಬಾ ಶಂಖಚಕ್ರಾಂಕ ಬಾ | ಅಹಿಪರಿಯಂಕÀ ಬಾ ಹಸೆಯ ಜಗುಲಿಗೆ ||2||

ಶೋಭಾನ ಶೋಭಾನವೆನ್ನಿರೆ ಸುರರಂಗನಿಯರೆಲ್ಲ Read More »

ಶೋಕವ್ಯಾತಕೆ ಮನವೆ ನಿನಗೆ ಇನ್ನು

ಶೋಕವ್ಯಾತಕೆ ಮನವೆ ನಿನಗೆ ಇನ್ನು ಈ ಕುಮಾರಕ ನಿನಗೆ ಗತಿಯ ವಿಧಿಸುವನೇನೊ ಕೃಷ್ಣ ಸೋದರಮಾವ ಮತ್ತೆ ಭೀಮಸೇನ ಜೇಷ್ಠ ಪಿತೃ ಪಾರ್ಥಾದಿ ಮಹಧೀರರು ಇಷ್ಟು ಮಂದಿರಲಾಗಿ ಅಭಿಮನ್ಯು ಪ್ರಾಣವನು ಬಿಟ್ಟು ಹೋಗಲು ಒಬ್ಬರಾದರುಳುಹಿದರೇನೊ ||1|| ವಸಿಷ್ಠ ಮುನಿಪರಿಗೆ ನೂರುಮಂದಿ ಸುತರು ಅಸಮ ಸಾಸಿಗರು ಮಹ ಶೀಲಜ್ಞರು ಕುಶಲದಿಂದಿರುತಿರ್ದು ಅ-ಕಾಲ ಮೃತ್ಯುವಿನ ವಶರಾಗಿ ಪೋದರು ನೋಡಿ ಅಚ್ಚರಿಯ||2|| ಇಂಥವರಿಗೀ ರೀತಿ ನಿನಗಾವ ಸ್ವಾತಂತ್ರ್ಯ ಸಂತೋಷವನು ತೊಡೋ ಮನಸಿನಲ್ಲಿ ಕಂತು ಜನಕ ನಮ್ಮ ವಿಜಯವಿಠ್ಠಲನಂಘ್ರಿ ಸ್ವಾಂತದಲ್ಲಿ ನೆನೆನೆನೆದು ಸುಖಿಯಾಗು ಮನವೆ||3||

ಶೋಕವ್ಯಾತಕೆ ಮನವೆ ನಿನಗೆ ಇನ್ನು Read More »

ಶೋಕವಾಗುವುದು ಯಾತಕೆ ಎಲಾ

ಶೋಕವಾಗುವುದು ಯಾತಕೆ ಎಲಾ | ಕಾಕುಲಾತೀ ಸಲ್ಲ ಕರಣಶುದ್ಧನಾಗು ಜೀವಕ್ಕೆ ಎಂಬೆನೆ ಆನಂತಕಲ್ಪಕ್ಕೆ ಜೀವನಿತ್ಯ ಸುಖೀ ಎಲ್ಲಿದ್ದರೂ ಸಾವೆ ಹುಟ್ಟೀಯಲ್ಲಿ ಸತತದಲಿ ಚರಿಸಿದರು ಜೀವ ಉಂಬುವದೆತ್ತ ಪ್ರಾಪ್ತವಾದ ಕ್ಲೇಶ ||1|| ಶರೀರಕೆಂಬೆನೆ ಚೇತನ ತಪ್ಪಿದರೆ ಇರುವುದು ಜಡವಾಗಿ ಬಿದ್ದುಕೊಂಡು ಹಿರಿದಾಗಿ ತಿಳಿವುದು ಜಡಕೆ ಲೇಪನವುಂಟೆ ಚರಾಚರದಲಿ ಇದೆ ಸಿದ್ಧವಾಗಿಪ್ಪಯಾ ||2|| ಪಾರ ನೋಡುವದು ಈ ಪರಿ ಜ್ಞಾನದಲಿದು ಸಾರ ಕಾಣಿಸದು ಸಂಸಾರದೊಳಗೆ ಮಾರಜನಕ ನಮ್ಮ ವಿಜಯವಿಠ್ಠಲ ಹರಿಯ ಸಾರದಲೆ ಅಭಿಮಾನ ಬಿಡದವಗೆ ಇದೆ ಉಂಟು ||3||

ಶೋಕವಾಗುವುದು ಯಾತಕೆ ಎಲಾ Read More »

ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ

ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ | ಅಭಿವಂದಿಸುವೆನೊ ಜೀಯ್ಯಾ ನಿರುತ ಅಂತರದೊಳು ಹರಿಗೆ ಸಮ್ಮೊಗನಾಗಿ ಕರವ ಜೋಡಿಸಿ ಬಿನ್ನೈಪಾ || ಗುರುವೆ ಎನ್ನಯ ಮಾತು ಕೇಳೊ ದುರಿತ ರಾಶಿ | ಪರಿಹಾರ ಮಾಡಿಸಯ್ಯಾ ||1|| ಮಾರುತಿ ಸದಾಗತಿ ಭಾರತೀಪತಿ ಯತಿ | ಮಾರಾರಾತಿಗೆ ನೀ ಗತಿ || ಮಾರುತ್ತರ ಕಾಣೆ ಮಾರುತಿ ಮಾರಿಗಳಿಗೆ ನಿರುತ ಮಾರಕ ನೀನಹುದೋ||2|| ವಾಯು ಎನಗೆ ಸಂಪೂರ್ಣಾಯು ಪಾಲಿಸೊ ಸರ್ವ | ಸಾಯುಜ್ಯ ಸಾರೂಪ್ಯನೆ || ಕುಯುಕ್ತಿ ಜನರ ಗದಾಯುದ್ಧದಿಂದಟ್ಟಿ | ಈ

ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ Read More »

ಶುಭವೀವ ನಿರುತದಲಿ ಮಂದಹಾಸಾ

ಶುಭವೀವ ನಿರುತದಲಿ ಮಂದಹಾಸಾ ಅಭಯಗಿರಿಯ ವಾಸಾ ಶ್ರೀ ಶ್ರೀನಿವಾಸ ಧೇನಿಪರ ಮನ ಚಿಂತಾಮಣಿಯೋ | ದೇವ | ನೀನೆ ಗತಿಯೆಂಬುವರ ಧಣಿಯೋ || e್ಞÁನಮಯ ಸುಖದ ಸಂದಣಿಯೋ | ಪುಣ್ಯ | ಕಾನÀನವಾಸ ಸುರರ ಖಣಿಯೋ ||1|| ಶರಣರಿಗೆ ವಜ್ರ ಪಂಜರನೋ | ದೇವ | ದುರುಳರಿಗೆ ವೀರ ಜರ್ಝರನೋ || ದುರಿತಕದಳಿಗೆ ಕುಂಜರನೋ | ವರಕಲ್ಪ ಕಲ್ಪ ವಿಚಲನೋ ||2|| ಪರಮೇಷ್ಠಿ ಶಿವರೊಳಗೆ ಯಿಪ್ಪ | ದೇವ | ಮರುತನ್ನ ಹೆಗಲೇರಿ ಬಪ್ಪಾ || ಶರಣರಿಗೆ

ಶುಭವೀವ ನಿರುತದಲಿ ಮಂದಹಾಸಾ Read More »

ಶುಕಪಿತನ ಪದಕಂಜ ಪದುಪಾ

ಶುಕಪಿತನ ಪದಕಂಜ ಪದುಪಾ | ಅಖಿಳ ಲೋಕದ ಗುರುವೆ ಸುಖ ತೀರ್ಥ ಮುನಿಪಾ ಮತಿ ತಿರಸ್ಕಾರವಾಗಿ ನಿತ್ಯ ನೈಮಿತ್ಯಗಳು | ಗತಿ ತಪ್ಪಿ ಪೋಗಿರಲು ಸರ್ವ ದೇವತೆಗಳು || ಪಥವ ಕಾಣದೆ ನೆರೆದು ಯೋಚಿಸಿ ತಮ್ಮೊಳು | ಅತಿಶಯದಿ ವೊದರಿ ಕೇಳು ಭವನದಾ | ಪತಿಯಾದ ಬೊಮ್ಮಗುಸರಿದರಂದು ಮೇಲು||1|| ತುತಿಸಲಾಕ್ಷಣ ಕೇಳಿ ಅಜನು ಶಿರದೂಗಿದನು | ಕೃತಭುಜರ ಸಹವಾಗಿ ಹರಿಪುರಕೆ ಸಾಗಿದನು | ನತನಾಗಿ ಶಿರಿಪತಿಯ ಪದಯುಗಕೆ ಬಾಗಿದನು | ಗತಿ ನೀನೆ ಎಂದು ಕೂಗಿದನು ಹರಿ

ಶುಕಪಿತನ ಪದಕಂಜ ಪದುಪಾ Read More »

ಶಿವನ ನೋಡಿರೊ ಇಂದು ಸ್ತವನ ಮಾಡಿರೊ

ಶಿವನ ನೋಡಿರೊ ಇಂದು ಸ್ತವನ ಮಾಡಿರೊ | ತವಕದಿಂದ ತಿಳಿದು ಅವಗುಣಂಗಳ ತೊರೆದು ನಿತ್ಯ ಅಂತಕಾಪುರ ವೈರಿ | ದಿನಾಂತ ವೃಷಭನೇರಿ | ಶಾಂತಿ ಸಹಿತ ಜನರಂಗಣದಿ | ನಿಂತು ಮಾತು | ಲಾಲಿಪ ಮಹಿಮ ||1|| ಸುರಜನತೆ ಪ್ರೀತ ಸರ್ವದ | ಅಸುರ ವೈರಿಯು ನೇಮದಿಂದ | ವಸುಧೆಯಾಳಗೆ ಬಲಿದಾನೇಕಾ | ದಶರುದ್ರರೊಳು ಬಲು ಗುಣವಂತ ||2|| ದಕ್ಷ ಪ್ರಜೇಶ್ವರನಧ್ವರ | ರಕ್ಷಣೆ ಮಾಡಿದ ದಕ್ಷಮೂರ್ತಿ | ಮೋಕ್ಷಕೆ ಮನಸು ಕೊಡುವ | ನಿಟಲೇಕ್ಷವಂತ ಶಾಂತ

ಶಿವನ ನೋಡಿರೊ ಇಂದು ಸ್ತವನ ಮಾಡಿರೊ Read More »

ಶಾರದಾಂಬಿಕೆ ನಿತ್ಯ ಶಾರದಾ ಕೊಡು ಎನಗೆ

ಶಾರದಾಂಬಿಕೆ ನಿತ್ಯ ಶಾರದಾ ಕೊಡು ಎನಗೆ | ಸಾರುವೆ ನಾ ನಿನ್ನ ಪುಂಡರೀಕ ನಯನೆ ಪುಂಡರೀಕನ ರಾಣಿ ಪುಂಡರೀಕಗಮನೆ | ಪುಂಡರೀಕ ಚರ್ಮಾಂಬರ | ಪುಂಡರೀಕನಾಥನುತೆ ಪುಂಡರೀಕವೆ ನಮಗೆ ||1|| ಶುಚಿ ಶರೀರಳೆ ಎನ್ನ ಶುಚಿಯ ಮಾಡುವ ಈ | ಶುಚಿಯೊಳಗೆ ನಿನ್ನ ಕೀರ್ತಿ ಶುಚಿಯಾಗಿ ಮನದಲ್ಲಿ | ಶುಚಿ ಜನ ಪೇಳುತಿದೆ | ಶುಚಿ ಮಾರ್ಗವನೆ ತೋರಿಸೆ ||2|| ಕೌಂಶಿಕ ವಾಣಿಯೆ ಕೌಂಶಿಕ ಬಿಂಬಸದನೆ | ಕೌಂಶಿಕವೇಣಿ ಕರುಣಿ | ಕೌಂಶಿಕ ವಿಜಯವಿಠ್ಠಲನಲ್ಲಿಕೌಂಶಿಕದವನ ಮಾಡು||3||

ಶಾರದಾಂಬಿಕೆ ನಿತ್ಯ ಶಾರದಾ ಕೊಡು ಎನಗೆ Read More »

ಶರಣು ಶ್ರೀ ವ್ಯಾಸಮುನಿ

ಶರಣು ಶ್ರೀ ವ್ಯಾಸಮುನಿ ಚರಣಾಬ್ಜ್ಬ ಭೃಂಗ ಜಯ ಶರಣು ಶ್ರೀ ಸುಜ್ಞಾನ ಭಕುತಿ ವೈರಾಗ್ಯಪರನೆ ಜಯ ಶರಣು ದಾಸೋತ್ತಮರ ಮಣಿಯ ನಿನಗ್ಯಾರೆಣಿಯೆ ಗುರು ಪುರಂದರದಾಸರೆ ನಿಮಗೆ ಪಾಕಶಾಸನಪುರದ ಚಿನಿವಾರ ವರದಪ್ಪ ನಾ ಕುಮಾರನಾಗಿ ಜನಿಸಿ ಸಂಸಾರದೊಳು ನೇಕ ಬಗೆಯಿಂದ ವಿಷಯಾನಂತೆ ಸಂಚರಿಸಿ ಲೌಕಿಕವನ್ನೆ ತೊರೆದು ಈ ಕಲಿಯುಗದಲ್ಲಿ ತುಂಗಾತೀರ ಪಂಪಾ ರಾಕಾಬ್ಜನಂತೆ ಪೊಳೆವ ನಿಧಿಗೆ ಬಂದು ನಿ ರಾಕರಿಸಿ ದುಸ್ಸಂಗ ವೈಷ್ಣವರಾಗಿ ಪತಿಕರಿಸಿ ಹರಿಭಕುತಿಯಾ ||1|| ಕಾಮಕ್ರೋಧ ಲೋಭ ಮದ ಮತ್ಸರ ಡಂಭ ಈ ಮರಿಯಾದಿಗಳ ಮರ್ಮವನೆ

ಶರಣು ಶ್ರೀ ವ್ಯಾಸಮುನಿ Read More »

ಶರಣು ಶೇಷಾಚಲ ನಿವಾಸಗೆ

ಶರಣು ಶೇಷಾಚಲ ನಿವಾಸಗೆ | ಶರಣು ವರಹ ತಿಮ್ಮಪ್ಪಗೆ | ಶರಣು ಅಲಮೇಲುಮಂಗ ರಮಣಗೆ ಶರಣು ತಿರುವೆಂಗಳೇಶಗೆ ಧರಣಿಧರ ಗೋವಿಂದ ಮಾಧವ | ನರಹರಿ ಮಧುಸೂದನಾ | ಮುರಹರ ಮುಕುಂದ ಅಚ್ಯುತ | ಗಿರಿಜನುತ ನಾರಾಯಣಾ ||1|| ಕ್ಷೀರ ವಾರಿಧಿಶಯನ ವಾಮನ | ಮಾರ ಜನಕ ಗೋಪಿ ಜನ | ಜಾರ ನವನೀತ | ಚೋರ ರಿಪು ಸಂಹಾರ ಹರಿ ದಾಮೋದರ ||2|| ಗರುಡಗಮನನೆ ಗರಳ ತಲ್ಪನೆ | ಕರುಣಾಳುಗಳ ಒಡೆಯನೆ | ಉರಗ ಗಿರಿ ಸಿರಿ

ಶರಣು ಶೇಷಾಚಲ ನಿವಾಸಗೆ Read More »

ಶರಣು ಶರಣು ಲಿಂಗಾ

ಶರಣು ಶರಣು ಲಿಂಗಾ | ಶರಣು ಶ್ರೀ ಭಸಿತಾಂಗಾ | ಶರಣು ಗಗನ ಗಂಗಾಧರ ಗೋರಾಜ ತುರಂಗ | ಗುರುಕುಲೋತ್ತುಂಗಾ ಅಂತರಿಕ್ಷ ಪುರಹರ | ಸಂತರ ಮನೋಹರ | ಅಂತಕನ ಗೆದ್ದೆ | ದಂತಿ ಚರ್ಮವ ಪೊದ್ದೆ | ಕಂತು ಮುನಿಯ ಗೆಲಿದೆ ಮಂತ್ರಿವಂದಿತ ಶೀಲ | ಸಂತತಿಗಳ ಪಾಲ | ಅಂತರಂಗದಲೆನ್ನ ಗ್ರಂಥಿಯ ಹರಿಸಿ ನಿರಂತರ ಸಂತರಿಸೋ||1|| ಮನ ವೈರಾಗ್ಯದಧಿಪತಿಯೇ | ಮುನಿದು ದುರ್ವಾಸ ಶುಕ ಯತಿಯೆ | ವನದೊಳು ರಾಯನ | ವನುತಿಯ ಮಾಡಿದ

ಶರಣು ಶರಣು ಲಿಂಗಾ Read More »

ಶರಣು ಶರಣು

ಶರಣು ಶರಣು ಶರಣು ಭಾರತಿದೇವಿಗೆ ಶರಣು ವಾಯುರಮಣಿಗೆ ಶರಣು ಶರಣರ ಪೊರೆವ ಕರುಣಿಗೆ ಶರಣು ಸುರವರ ದೇವಿಗೆ ಶ್ರಧ್ಧೆ ಭಾರತಿ ಭಾಗ್ಯ ಸಂಪನ್ನೆ ಪದ್ಮ ಮಂದಿರ ನಂದನೆ ಬುದ್ಧಿ ವರದಾಯಕಳೆ ಕರುಣಾಬ್ಧಿಯೆ ಭಕ್ತರ ಪ್ರಿಯಳೆ ||1|| ಖಗ ಪನ್ನಗ ಗಿರಿಶರಿಂದಲಿ ಮಿಗಿಲೆನಿಪೆ ಶತಗುಣದಲಿ ಮೃಗನ ನಾಭಿ ನೊಸಲಿಗೊಪ್ಪುವ ಮೃಗಕಲಾನನೆ ದೇವಿಯೆ||2|| ಇಂದ್ರಸೇನಳೆ ವಿಪ್ರಕನ್ನಿಕೆ ಚಂದ್ರಾಧಿಷ್ಠನ ವಾಸಳೆ ಇಂದ್ರನುತ ಸಿರಿ ವಿಜಯವಿಠ್ಠಲನ ವಂದಿಪ ದ್ರೌಪದಿ ದೇವಿಯೆ||3||

ಶರಣು ಶರಣು Read More »

ಶರಣು ವಾಯು ತನುಜ ಶರಣು ಭಾಸ್ಕರ ತೇಜ

ಶರಣು ವಾಯು ತನುಜ ಶರಣು ಭಾಸ್ಕರ ತೇಜ | ಶರಣು ರಾಜಾಧಿರಾಜ | ಶರಣು ಗೋಸಹಜ | ಶರಣಾರ ಸುರಭೋಜ ಸೂತ್ರನಾಮಕ ದೇವ | ಸ್ತೋತ್ರ ಮಾಳ್ಪರ ಕಾವ | ಚಿತ್ರ ಮಹಿಮರ ಕಾವ ವಿ | ಚಿತ್ರ ಶರೀರ ಸ | ತ್ಪಾತ್ರನೆ ಸುಮನಸದಲಿಗರಳ ಹೇಮ | ಪಾತ್ರಿಯೊಳಗೆ ಸವಿದು ಶ್ರೀಪತಿಯ ಶತ | ಪತ್ರ ಪಾದವ ಕಾ | ಲತ್ರಯ ನೆನೆಸುವನೆ ||1|| e್ಞÁನ ಭಕುತಿ ವೈರಾಗ್ಯ ನೀ ನೀಯೋ ಇದೆ ಭಾಗ್ಯ ನಾನಾವದೂ

ಶರಣು ವಾಯು ತನುಜ ಶರಣು ಭಾಸ್ಕರ ತೇಜ Read More »

ಶರಣು ಮಾರುತನ ರಾಣಿಗೆ

ಶರಣು ಮಾರುತನ ರಾಣಿಗೆ | ಶರಣು ನಿತ್ಯ ಕಲ್ಯಾಣಿಗೆ | ಶರಣು ಶರಣು ಲೋಕ ಜನನಿಗೆ | ಶರಣು ಮುಂದಣ ವಾಣಿಗೆ ಶ್ರದ್ಧೆ ಭಾರತಿ ಭಾಗ್ಯ ಸಂಪನ್ನೆ | ಪದ್ಮ ಮಂದಿರ ನಂದನೆ | ಭದ್ರ ಫಲದಾಯಕಳೆ ಕರುಣಾಬ್ಧಿಯೇ ಭಕ್ತರಪ್ರಿಯೇ ||1|| ಖಗಪನ್ನಗ ನಗಮಗಳ ಪತಿಯಿಂದ ಮಿಗಿಲೆನಿಪೆ ಶತಗುಣದಲಿ | ಮೃಗನಾಭಿ ನೊಸಲಲ್ಲಿ ಶೋಭಿಸೆ | ಮೃಗಕುರುಹ ಸಿರಿಮೊಗದವಳೆ||2|| ಇಂದ್ರಸೇನಳೆ ವಿಪ್ರ ಕನ್ನಿಕೆ | ಚಂದ್ರದಿ ಸ್ಥಾನವಾಸಳೆ | ಇಂದ್ರನುತ ಸಿರಿ ವಿಜಯವಿಠ್ಠಲನ |ವಂದಿಸುವ ದ್ರೌಪದಿದೇವಿ ||3||

ಶರಣು ಮಾರುತನ ರಾಣಿಗೆ Read More »

ಶರಣು ಗಿರಿಯ ತಿಮ್ಮಾ

ಶರಣು ಗಿರಿಯ ತಿಮ್ಮಾ | ಶರಣು ಪುರುಷೋತ್ತಮಾ | ಶರಣು ಮಹಾ ಮಹಿಮ | ಶರಣು ಪರಬೊಮ್ಮಾ | ಪರಿಹರಿಸುವದು ಹಮ್ಮಾ ಸ್ಮರ ಕೋಟಿ ಲಾವಣ್ಯ | ನಿರುತ ದೇವ ವರೇಣ್ಯ | ಕರಿರಾಜನ ಭಂಗ | ಹರಿಸಿದ ಶಿರಿ ರಂಗ | ಸುರವಿನುತ ವಿಹಂಗ | ತುರಗ ತುರಗ ವದನ | ಪರಮ ವಾರಿಜ ಸದನ | ಕರ ಮುಗಿವೆನೈಯಾ | ಕರದ ಮಾತಿಗೆ ಜೀಯಾ | ಭರದಿಂದ ಕೊಡು ಮತಿಯಾ ||1|| ಆದಿ ಮೂಲನೆ

ಶರಣು ಗಿರಿಯ ತಿಮ್ಮಾ Read More »