admin

ವಟವೃಕ್ಷದೊಳಡಗಿದ ಸಮರಸ ಬೀಜ

ವಟವೃಕ್ಷದೊಳಡಗಿದ ಸಮರಸ ಬೀಜ ಬಿsನ್ನಭಾವಕ್ಕೆ ಬಪ್ಪುದೆ ? ಕಂಗಳ ನೋಟ, ಕರುವಿಟ್ಟ ಮನದ ಸೊಗಸು ಅನಂಗನ ದಾಳಿಯ ಗೆಲಿದವು ಕಾಣಾ. ಈ ಮರೀಚಿಕಾಜಲದೊಳಡಗಿದ ಪ್ರಾಣಿ ವ್ಯಾಧನ ಬಲೆಗೆ ಸಿಲುಕುವುದೆ ? ನಿನ್ನ ಕೈವಶಕ್ಕೆ ಸಿಕ್ಕಿಹಳೆಂಬುದ ಮರೆಯಾ ಮರುಳೆ. ಚೆನ್ನಮಲ್ಲಿಕಾರ್ಜುನನಲ್ಲದೆ ಪರಪುರುಷ ನಮಗಾಗದ ಮೋರೆ ನೋಡಣ್ಣಾ.

ವಟವೃಕ್ಷದೊಳಡಗಿದ ಸಮರಸ ಬೀಜ Read More »

ಮಾಟಕೂಟದಲ್ಲಿ ಬಸವಣ್ಣನಿಲ್ಲ.

ಮಾಟಕೂಟದಲ್ಲಿ ಬಸವಣ್ಣನಿಲ್ಲ. ನೋಟಕೂಟದಲ್ಲಿ ಪ್ರಭುದೇವರಿಲ್ಲ. ಭಾವಕೂಟದಲ್ಲಿ ಅಜಗಣ್ಣನಿಲ್ಲ. ಸ್ನೇಹಕೂಟದಲ್ಲಿ ಬಾಚಿರಾಜನಿಲ್ಲ. ಇವರೆಲ್ಲರ ಕೂಟದಲ್ಲಿ ಚೆನ್ನಬಸವಣ್ಣನಿಲ್ಲ. ಎನಗಿನ್ನೇನಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ ?

ಮಾಟಕೂಟದಲ್ಲಿ ಬಸವಣ್ಣನಿಲ್ಲ. Read More »

ಮಾಟಕೂಟ ಬಸವಣ್ಣಂಗಾಯಿತ್ತು.

ಮಾಟಕೂಟ ಬಸವಣ್ಣಂಗಾಯಿತ್ತು. ನೋಟಕೂಟ ಪ್ರಭುದೇವರಿಗಾಯಿತ್ತು. ಭಾವಕೂಟ ಅಜಗಣ್ಣಂಗಾಯಿತ್ತು. ಸ್ನೇಹಕೂಟ ಬಾಚಿರಾಜಂಗಾಯಿತ್ತು. ಇವರೆಲ್ಲರ ಕೂಟ ಚೆನ್ನಬಸವಣ್ಣಂಗಾಯಿತ್ತು. ಎನಗಿನ್ನಾವ ಕೂಟವಿಲ್ಲವಯ್ಯಾ, ಚೆನ್ನಮಲ್ಲಿಕಾರ್ಜುನಯ್ಯಾ.

ಮಾಟಕೂಟ ಬಸವಣ್ಣಂಗಾಯಿತ್ತು. Read More »

ಮಾಟ ಮದುವೆಯ ಮನೆ.

ಮಾಟ ಮದುವೆಯ ಮನೆ. ದಾನಧರ್ಮ ಸಂತೆಯ ಪಸಾರ, ಸಾಜಸಾಜೇಶ್ವರಿ ಸೂಳೆಗೇರಿಯ ಸೊಬಗು. ವ್ರತನೇಮವೆಂಬುದು ವಂಚನೆಯ ಲುಬ್ಧವಾಣಿ. ಭಕ್ತಿಯೆಂಬುದು ಬಾಜಿಗಾರರಾಟ. ಬಸವಣ್ಣಗೆ ತರ ; ನಾನರಿಯದೆ ಹುಟ್ಟಿದೆ, ಹುಟ್ಟಿ ಹುಸಿಗೀಡಾದೆ. ಹುಸಿ ವಿಷಯದೊಳಡಗಿತ್ತು, ವಿಷಯ ಮಸಿಮಣ್ಣಾಯಿತ್ತು. ನಿನ್ನ ಗಸಣೆಯನೊಲ್ಲೆ ಹೋಗಾ, ಚೆನ್ನಮಲ್ಲಿಕಾರ್ಜುನಾ,

ಮಾಟ ಮದುವೆಯ ಮನೆ. Read More »

ಬಿಡು ಬಿಡು ಸಂಗವ, ಸುಡುಸುಡು ವಿಷಯವ,

ಬಿಡು ಬಿಡು ಸಂಗವ, ಸುಡುಸುಡು ವಿಷಯವ, ಎನ್ನೊಡೆಯರು ಬಾಗಿಲಿಗೆ ಬಂದರು, ತಡೆಯದಿರಾ ಮರುಳೆ. ಹಡಿಕೆಯ ಸಂಸಾರದ ಸುಖವ ಕಡೆಯಲ್ಲಿ ಹೇಸಿ, ಇದಕ್ಕೆ ಹಿಡಿಯದಿರು ಸೆರಗನು. ಚೆನ್ನಮಲ್ಲಿಕಾರ್ಜುನದೇವರು ಮನೆಗೆ ಬಂದಲ್ಲಿ ಇದಿರೇಳದಿರ್ದಡೆ ನಾಯಕ ನರಕ.

ಬಿಡು ಬಿಡು ಸಂಗವ, ಸುಡುಸುಡು ವಿಷಯವ, Read More »

ಬಿಟ್ಟೆನೆಂದಡೆ ಬಿಡದೀ ಮಾಯೆ,

ಬಿಟ್ಟೆನೆಂದಡೆ ಬಿಡದೀ ಮಾಯೆ, ಬಿಡದಿದ್ದಡೆ ಬೆಂಬತ್ತಿತ್ತು ಮಾಯೆ. ಯೋಗಿಗೆ ಯೋಗಿಣಿಯಾಯಿತ್ತು ಮಾಯೆ, ಸವಣಂಗೆ ಸವಣಿಯಾಯಿತ್ತು ಮಾಯೆ. ಯತಿಗೆ ಪರಾಕಿಯಾಯಿತ್ತು ಮಾಯೆ. ನಿನ್ನ ಮಾಯೆಗೆ ನಾನಂಜುವಳಲ್ಲ, ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮಾಣೆ.

ಬಿಟ್ಟೆನೆಂದಡೆ ಬಿಡದೀ ಮಾಯೆ, Read More »

ಬೋಳೆಯನೆಂದು ನಂಬಬೇಡ,

ಬೋಳೆಯನೆಂದು ನಂಬಬೇಡ, ಢಾಳಕನವನು ಜಗದ ಬಿನ್ನಾಣಿ. ಬಾಣ ಮಯೂರ ಕಾಳಿದಾಸ ಓಹಿಲ ಉದ್ಭಟ ಮಲುಹಣರವರಿಗಿತ್ತ ಪರಿ ಬೇರೆ. ಮುಕ್ತಿಯ ತೋರಿ, ಭಕ್ತಿಯ ಮರೆಸಿಕೊಂಬ ಚೆನ್ನಮಲ್ಲಿಕಾರ್ಜುನನು.

ಬೋಳೆಯನೆಂದು ನಂಬಬೇಡ, Read More »

ಬೆಟ್ಟದ ಮೇಲೊಂದು ಮನೆಯ ಮಾಡಿ,

ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ ? ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದಡೆಂತಯ್ಯಾ ? ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದಡೆಂತಯ್ಯಾ ? ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ, ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

ಬೆಟ್ಟದ ಮೇಲೊಂದು ಮನೆಯ ಮಾಡಿ, Read More »

ಬೆಟ್ಟಕ್ಕೆ ಸಾರವಿಲ್ಲೆಂಬರು

ಬೆಟ್ಟಕ್ಕೆ ಸಾರವಿಲ್ಲೆಂಬರು ತರುಗಳು ಹುಟ್ಟುವಪರಿ ಇನ್ನೆಂತಯ್ಯಾ ? ಇದ್ದಲಿಗೆ ರಸವಿಲ್ಲೆಂಬರು ; ಕಬ್ಬುನ ಕರಗುವಪರಿ ಇನ್ನೆಂತಯ್ಯಾ ? ಎನಗೆ ಕಾಯವಿಲ್ಲೆಂಬರು ; ಚೆನ್ನಮಲ್ಲಿಕಾರ್ಜುನನೊಲಿವಪರಿ ಇನ್ನೆಂತಯ್ಯಾ ?

ಬೆಟ್ಟಕ್ಕೆ ಸಾರವಿಲ್ಲೆಂಬರು Read More »

ಬೆರಸುವಡೆ ಬೇಗ ತೋರಾ,

ಬೆರಸುವಡೆ ಬೇಗ ತೋರಾ, ಹೊರ ಹಾಯ್ಕದಿರಯ್ಯಾ. ನಿಮ್ಮಲ್ಲಿಗೆ ಸಲೆ ಸಂದ ತೊತ್ತಾನು ; ಎನ್ನ ಹೊರ ಹಾಯ್ಕದಿರಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ನಂಬಿ ಬೆಂಬಳಿಬಂದೆನು ಇಂಬುಗೊಳ್ಳಯ್ಯಾ ಬೇಗದಲಿ.

ಬೆರಸುವಡೆ ಬೇಗ ತೋರಾ, Read More »

ಬಾರದ ಭವಂಗಳಲ್ಲಿ ಬಂದೆನಯ್ಯಾ.

ಬಾರದ ಭವಂಗಳಲ್ಲಿ ಬಂದೆನಯ್ಯಾ. ಕಡೆಯಿಲ್ಲದ ತಾಪಂಗಳಲ್ಲಿ ನೊಂದು ನಿಮ್ಮ ಕರುಣೆಗೆ ಬಳಿಸಂದೆನಯ್ಯಾ. ಇದು ಕಾರಣ ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗೆ ತನುವನುವಾಗಿ ಮನಮಾರುವೋಗೆ ಮತ್ತಿಲ್ಲದ ತವಕದ ಸ್ನೇಹಕ್ಕೆ ತೆರಹಿನ್ನೆಂತು ಹೇಳಾ ತಂದೆ ?||

ಬಾರದ ಭವಂಗಳಲ್ಲಿ ಬಂದೆನಯ್ಯಾ. Read More »

ಭಾವಿಸಿ ನೋಡಿದಡೆ ಅಂಗವಾಯಿತ್ತು,

ಭಾವಿಸಿ ನೋಡಿದಡೆ ಅಂಗವಾಯಿತ್ತು, ಅಂಗಸಂಗವಾಗಿ ಸಂಯೋಗವ ಮರೆದು, ಲಿಂಗಸೈವೆರಗಾದೆ. ಲಿಂಗೈಕ್ಯ, ನಿಮ್ಮನಗಲದೆ ಅಂಗರುಚಿಗಳ ಮರೆದು, ಲಿಂಗರುಚಿಗಳಲ್ಲಿ ಸೈವೆರಗಾದೆ. ಲಿಂಗ ಸೈವೆರಗಾದ ಬಳಿಕ ಚೆನ್ನಮಲ್ಲಿಕಾರ್ಜುನನ ಕೊಂದು ಸಾವ ಭಾಷೆ.

ಭಾವಿಸಿ ನೋಡಿದಡೆ ಅಂಗವಾಯಿತ್ತು, Read More »

ಭಾವ ಬೀಸರವಾಯಿತ್ತು, ಮನ ಮೃತ್ಯುವನಪ್ಪಿತ್ತು ;

ಭಾವ ಬೀಸರವಾಯಿತ್ತು, ಮನ ಮೃತ್ಯುವನಪ್ಪಿತ್ತು ; ಆನೇವೆನಯ್ಯಾ ? ಆಳಿತನದ ಮನ ತಲೆಕೆಳಗಾಯಿತ್ತು ; ಆನೇವೆನಯ್ಯಾ ? ಬಿಚ್ಚಿ ಬೇರಾಗದ ಭಾವವಾಗೆ, ಬೆರೆದೊಪ್ಪಚ್ಚಿ ನಿನ್ನ ನಿತ್ಯಸುಖದೊಳಗೆಂದಿಪ್ಪೆನಯ್ಯಾ, ಚೆನ್ನಮಲ್ಲಿಕಾರ್ಜುನಾ ?

ಭಾವ ಬೀಸರವಾಯಿತ್ತು, ಮನ ಮೃತ್ಯುವನಪ್ಪಿತ್ತು ; Read More »

ಭೃತ್ಯನಾದ ಬಳಿಕ ಕರ್ತೃವಿಂಗೆ ಉತ್ತಮ ವಸ್ತುವನೀಯಬೇಕು,

ಭೃತ್ಯನಾದ ಬಳಿಕ ಕರ್ತೃವಿಂಗೆ ಉತ್ತಮ ವಸ್ತುವನೀಯಬೇಕು, ಇದೇ ಕರ್ತೃಭೃತ್ಯರ ಭೇದ. ಲಿಂಗಭಕ್ತನಾದಡೆ ಜಂಗಮಪಾದತೀರ್ಥಪ್ರಸಾದವ ಲಿಂಗಕ್ಕೆ ಮಜ್ಜನ ಭೋಜನ ನೈವೇದ್ಯವ ಮಾಡಿ, ಪ್ರಸಾದವ ಕೊಳ್ಳಬೇಕು. ಇದೇ ವರ್ಮ, ಇದೇ ಧರ್ಮ ಕಾಣಾ ಚೆನ್ನಮಲ್ಲಿಕಾರ್ಜುನಾ.

ಭೃತ್ಯನಾದ ಬಳಿಕ ಕರ್ತೃವಿಂಗೆ ಉತ್ತಮ ವಸ್ತುವನೀಯಬೇಕು, Read More »

ಭವಿಸಂಗವಳಿದು ಭಕ್ತನಾದ ಬಳಿಕ,

ಭವಿಸಂಗವಳಿದು ಭಕ್ತನಾದ ಬಳಿಕ, ಭಕ್ತಂಗೆ ಭವಿಸಂಗವತಿಘೋರ ನರಕ. ಶರಣಸತಿ ಲಿಂಗಪತಿಯಾದ ಬಳಿಕ, ಶರಣಂಗೆ ಸತಿಸಂಗವು ಅಘೋರನರಕ. ಚೆನ್ನಮಲ್ಲಿಕಾರ್ಜುನಾ, ಪ್ರಾಣಗುಣವಳಿಯದವರ ಸಂಗವೇ ಭಂಗ.

ಭವಿಸಂಗವಳಿದು ಭಕ್ತನಾದ ಬಳಿಕ, Read More »

ಭವಿಯಾಚಾರವ ಬಿಡದೆ ಭಯಾಗರವ ಹೊಗದೆ,

ಭವಿಯಾಚಾರವ ಬಿಡದೆ ಭಯಾಗರವ ಹೊಗದೆ, ಶಿವಾಚಾರದಲ್ಲಿ ನಡೆವ ನಾಯಿಗಳು ಬರಿದೆ ನಾವು ಶಿವಾಚಾರಿಗಳೆಂದರೆ ನಮ್ಮ ಶಿವಾಚಾರಿ ಶರಣ ಬಸವಣ್ಣ ಮೆಚ್ಚ ನೋಡಯ್ಯ. ಶಿವಾಚಾರದ ಮಾರ್ಗವನು, ಶಿವಾಚಾರದ ಮರ್ಮವನು, ಶಿವಾಚಾರದ ವಿಸ್ತಾರವನು ನಮ್ಮ ಶರಣ ಬಸವಣ್ಣ ಬಲ್ಲನಲ್ಲದೆ ಉದರವ ಹೊರವ ವೇಷಧಾರಿಗಳೆತ್ತಬಲ್ಲರಯ್ಯ ? ಅಂತಪ್ಪ ಶಿವಾಚಾರದ ವಿಸ್ತಾರ ಸಕೀಲ ಹೇಳಿಹೆ ಕೇಳಿರಣ್ಣ. ಅದೆಂತೆಂದೊಡೆ ಲಿಂಗಾಚಾರವೆಂದು, ಸದಾಚಾರವೆಂದು, ಶಿವಾಚಾರವೆಂದು, ಭೃತ್ಯಾಚಾರವೆಂದು, ಗಣಾಚಾರವೆಂದು ಶಿವಾಚಾರವು ಐದುತೆರನಾಗಿಪ್ಪುದು ನೋಡಯ್ಯಾ. ಶ್ರೀ ಗುರು ಕರುಣಿಸಿಕೊಟ್ಟ ಲಿಂಗವನಲ್ಲದೆ ಅನ್ಯದೈವಂಗಳಿಗೆರಗದಿಹುದೇ ಲಿಂಗಾಚಾರ ನೋಡಯ್ಯ. ತಾ ಮಾಡುವ ಸತ್ಯ

ಭವಿಯಾಚಾರವ ಬಿಡದೆ ಭಯಾಗರವ ಹೊಗದೆ, Read More »

ಭವಭವದಲ್ಲಿ ತೊಳಲಿ ಬಳಲಿತ್ತೆನ್ನಮನ,

ಭವಭವದಲ್ಲಿ ತೊಳಲಿ ಬಳಲಿತ್ತೆನ್ನಮನ, ಆನೇವೆನಯ್ಯಾ ? ಹಸಿದುಂಡಡೆ ಉಂಡು ಹಸಿವಾಯಿತ್ತು. ಇಂದು ನೀನೊಲಿದೆಯಾಗಿ, ಎನಗೆ ಅಮೃತದ ಆಪ್ಯಾಯನವಾಯಿತ್ತು. ಇದು ಕಾರಣ, ನೀನಿಕ್ಕಿದ ಮಾಯೆಯನಿನ್ನು ಮುಟ್ಟಿದೆನಾದಡೆ ಆಣೆ, ನಿಮ್ಮಾಣೆ ಚೆನ್ನಮಲ್ಲಿಕಾರ್ಜುನಾ.

ಭವಭವದಲ್ಲಿ ತೊಳಲಿ ಬಳಲಿತ್ತೆನ್ನಮನ, Read More »

ಭವದ ಬಟ್ಟೆಯ ದೂರವನೇನ ಹೇಳುವೆನಯ್ಯಾ ?

ಭವದ ಬಟ್ಟೆಯ ದೂರವನೇನ ಹೇಳುವೆನಯ್ಯಾ ? ಎಂಬತ್ತುನಾಲ್ಕು ಲಕ್ಷ ಊರಲ್ಲಿ ಎಡೆಗೆಯ್ಯಬೇಕು. ಒಂದೂರಭಾಷೆಯೊಂದೂರಲಿಲ್ಲ. ಒಂದೂರಲ್ಲಿ ಕೊಂಡಂಥ ಆಹಾರ ಮತ್ತೊಂದೂರಲಿಲ್ಲ. ಇಂತೀ ಊರ ಹೊಕ್ಕ ತಪ್ಪಿಂಗೆ ಕಾಯವ ಭೂಮಿಗೆ ಸುಂಕವ ತೆತ್ತು ಜೀವವನುಳುಹಿಕೊಂಡು ಬರಬೇಕಾಯಿತ್ತು. ಇಂತೀ ಮಹಾಘನದ ಬೆಳಕಿನೊಳಗೆ ಕಳೆದುಳಿದು ಸುಳಿದಾಡಿ ನಿಮ್ಮ ಪಾದವ ಕಂಡು ಸುಯಿಧಾನಿಯಾದೆ ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ

ಭವದ ಬಟ್ಟೆಯ ದೂರವನೇನ ಹೇಳುವೆನಯ್ಯಾ ? Read More »

ಭಕ್ತೆಯಾನಪ್ಪೆನಯ್ಯಾ

ಭಕ್ತೆಯಾನಪ್ಪೆನಯ್ಯಾ ; ಕರ್ತೃಭೃತ್ಯವ ನಾನರಿಯೆ. ಮಾಹೇಶ್ವರಿಯಾನಪ್ಪೆನಯ್ಯಾ ; ವ್ರತ ನೇಮ ಲವ ನಾನರಿಯೆ. ಪ್ರಸಾದಿಯಾನಪ್ಪೆನಯ್ಯಾ ; ಅರ್ಪಿತನರ್ಪಿತವೆಂಬ ಭೇದವ ನಾನರಿಯೆ. ಪ್ರಾಣಲಿಂಗಿಯಾನಪ್ಪೆನಯ್ಯಾ ; ಅನುಭಾವದ ಗಮನವ ನಾನರಿಯೆ. ಶರಣೆಯಾನಪ್ಪೆನಯ್ಯಾ? ಶರಣಸತಿ ಲಿಂಗಪತಿ ಎಂಬ ಭಾವವ ನಾನರಿಯೆ. ಐಕ್ಯಳಾನಪ್ಪೆನಯ್ಯಾ? ಬೆರಸಿ ಭೇದವ ನಾನರಿಯೆ. ಚೆನ್ನಮಲ್ಲಿಕಾರ್ಜುನಯ್ಯಾ, ಷಟ್‍ಸ್ಥಲದಲ್ಲಿ ನಿಃಸ್ಥಲವಾಗಿಪ್ಪೆನು.

ಭಕ್ತೆಯಾನಪ್ಪೆನಯ್ಯಾ Read More »

ಭಕ್ತನೆ ಕುಲಜನೆಂದ ಮಾತಿನಂತೆ ಹೋಗದು.

ಭಕ್ತನೆ ಕುಲಜನೆಂದ ಮಾತಿನಂತೆ ಹೋಗದು. ಭಕ್ತನೆ ಕುಲಜನೆಂಬ ನುಡಿಯೆಲ್ಲಿಯು ಸಲ್ಲದು. ಭಕ್ತನೆ ಕುಲಜನೆಂಬುದು ಪಾತಕವಯ್ಯ. ಅವಯವವೆ ಮೂರ್ತಿಯಾಗಿ ಸರ್ವಾಂಗಲಿಂಗಕ್ಕೆ ಅನುಭಾವವಿಲ್ಲಾಗಿ ಎನ್ನ ದೇವ ಚೆನ್ನಮಲ್ಲಿಕಾರ್ಜುನನಲಿ ಯಥಾ ತಥಾ ಎಂಬಚನವನರಿಯಿರೆ.

ಭಕ್ತನೆ ಕುಲಜನೆಂದ ಮಾತಿನಂತೆ ಹೋಗದು. Read More »

ಬಸವನ ಭಕ್ತಿ ಕೊಟ್ಟಣದಮನೆ.

ಬಸವನ ಭಕ್ತಿ ಕೊಟ್ಟಣದಮನೆ. ಸಿರಿಯಾಳನ ಭಕ್ತಿ ಕಸಬುಗೇರಿ. ಸಿಂಧುಬಲ್ಲಾಳನ ಭಕ್ತಿ ಪರದಾರದ್ರೋಹ. ಉಳಿದಾದ ಅಟಮಟ ಉದಾಸೀನ ದಾಸೋಹವ ಮಾಡುವವರ ದೈನ್ಯವೆಂಬ ಭೂತ ಸೋಂಕಿತು. ಮಣ್ಣಿನ ಮನೆಯ ಕಟ್ಟಿ ಮಾಯಾ ಮೋಹಿನಿಯೆಂಬ ಮಹೇಂದ್ರಜಾಲದೊಳಗಾಗಿ ಮಾಡುವ ಮಾಟ. ಭಕ್ತನಲ್ಲಿ ಉಂಡು ಉದ್ದಂಡವೃತ್ತಿಯಲ್ಲಿ ನಡೆವವರು ಶಿವನಲ್ಲ. ಇವರು ದೇವಲೋಕ ಮತ್ರ್ಯಲೋಕಕ್ಕೆ ಹೊರಗು. ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ, ನನ್ನ ಭಕ್ತಿ ನಿನ್ನೊಳಗೈಕ್ಯವಾಯಿತ್ತಾಗಿ ನಿರ್ವಯಲಾದೆ ಕಾಣಾ

ಬಸವನ ಭಕ್ತಿ ಕೊಟ್ಟಣದಮನೆ. Read More »

ಬಸವಣ್ಣಾ, ನಿಮ್ಮಂಗದಾಚಾರವ ಕಂಡು

ಬಸವಣ್ಣಾ, ನಿಮ್ಮಂಗದಾಚಾರವ ಕಂಡು ಎನಗೆ ಲಿಂಗಸಂಗವಾಯಿತ್ತಯ್ಯಾ. ಬಸವಣ್ಣಾ, ನಿಮ್ಮ ಮನದ ಸುe್ಞನವ ಕಂಡು ಎನಗೆ ಜಂಗಮಸಂಬಂಧವಾಯಿತ್ತಯ್ಯಾ. ಬಸವಣ್ಣಾ, ನಿಮ್ಮ ಸದ್ಭಕ್ತಿಯ ತಿಳಿದು ಎನಗೆ ನಿಜವು ಸಾಧ್ಯವಾಯಿತ್ತಯ್ಯಾ. ಚೆನ್ನಮಲ್ಲಿಕಾರ್ಜುನಯ್ಯನ ಹೆಸರಿಟ್ಟ ಗುರು ನೀವಾದ ಕಾರಣ ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣಾ.

ಬಸವಣ್ಣಾ, ನಿಮ್ಮಂಗದಾಚಾರವ ಕಂಡು Read More »

ಬಸವಣ್ಣನೆ ಗುರು, ಪ್ರಭುದೇವರೆ ಲಿಂಗ,

ಬಸವಣ್ಣನೆ ಗುರು, ಪ್ರಭುದೇವರೆ ಲಿಂಗ, ಸಿದ್ಧರಾಮಯ್ಯನೆ ಜಂಗಮ, ಮಡಿವಾಳಯ್ಯನೆ ಜಂಗಮ, ಚೆನ್ನಬಸವಣ್ಣನೆನ್ನ ಪರಮಾರಾಧ್ಯರು. ಇನ್ನು ಸುಖಿಯಾದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ.

ಬಸವಣ್ಣನೆ ಗುರು, ಪ್ರಭುದೇವರೆ ಲಿಂಗ, Read More »

ಬಸವಣ್ಣನ ಮನೆಯ ಮಗಳಾದ ಕಾರಣ

ಬಸವಣ್ಣನ ಮನೆಯ ಮಗಳಾದ ಕಾರಣ ಭಕ್ತಿಪ್ರಸಾದವ ಕೊಟ್ಟನು. ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ ಒಕ್ಕಪ್ರಸಾದವ ಕೊಟ್ಟನು. ಪ್ರಭುದೇವರ ತೊತ್ತಿನ ತೊತ್ತಿನ ಮರಿದೊತ್ತಿನ ಮಗಳಾದ ಕಾರಣ e್ಞನಪ್ರಸಾದವ ಕೊಟ್ಟನು. ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ ಪ್ರಾಣಪ್ರಸಾದವ ಸಿದ್ಧಿಸಿಕೊಟ್ಟನು. ಮಡಿವಾಳಯ್ಯನ ಮನೆಯ ಮಗಳಾದ ಕಾರಣ ನಿರ್ಮಲಪ್ರಸಾದವ ನಿಶ್ಚೈಸಿಕೊಟ್ಟನು. ಇಂತೀ ಅಸಂಖ್ಯಾತ ಗಣಂಗಳೆಲ್ಲರು ತಮ್ಮ ಕರುಣದ ಕಂದನೆಂದು ತಲೆದಡಹಿದ ಕಾರಣ ಚೆನ್ನಮಲ್ಲಿಕಾರ್ಜುನಯ್ಯನ ಶ್ರೀಪಾದಕ್ಕೆ ಯೋಗ್ಯಳಾದೆನು.

ಬಸವಣ್ಣನ ಮನೆಯ ಮಗಳಾದ ಕಾರಣ Read More »

ಬಸವಣ್ಣನ ಪಾದವ ಕಂಡೆನಾಗಿ

ಬಸವಣ್ಣನ ಪಾದವ ಕಂಡೆನಾಗಿ ಎನ್ನಂಗ ನಾಸ್ತಿಯಾಯಿತ್ತು. ಚೆನ್ನಬಸವಣ್ಣನ ಪಾದವ ಕಂಡೆನಾಗಿ ಎನ್ನ ಪ್ರಾಣಬಯಲಾಯಿತ್ತು. ಪ್ರಭುವೆ, ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ ಎನ್ನ ಅರಿವು ಸ್ವಯವಾಯಿತ್ತು. ಚೆನ್ನಮಲ್ಲಿಕಾರ್ಜುನದೇವಯ್ಯಾ ನಿಮ್ಮ ಶರಣರ ಕರುಣವ ಪಡೆದೆನಾಗಿ ನಿನಗೆ ಮತ್ತಾವುದಿಲ್ಲವಯ್ಯ ಪ್ರಭುವೆ.

ಬಸವಣ್ಣನ ಪಾದವ ಕಂಡೆನಾಗಿ Read More »