ಹೇ ಆನಂದಮಯಿ ನೀ ಎನ್ನ
ನಿರಾನಂದ ಗೈಯದಿರು||
ನಿನ್ನ ಪಾದವನುಳಿದು ಅನ್ನದಾವುದನು
ಎನ್ನಯ ಮನವು ಕಾಣದು ತಾಯಿ|
ಮೃತ್ಯುವು ಬಂದಿಲ್ಲಿ ಸಿಡಿಗುಟ್ಟುತಿಹನು
ತಪ್ಪೆನ್ನದೇನೋ ಅರಿಯೆನು ನಾನು||
ಭವಾನಿಯೆನ್ನುತ ಭವವ ದಾಟುವೆ
ಎನ್ನುವ ಆಸೆಯು ಇದ್ದಿತು ಮನದಿ|
ತುಂಬಿದ ಕಡಲೊಳು ಮುಳುಗಪೆ ಎಂಬುದ
ಕಂಡವನಲ್ಲ ನಾ ಕನಸಿನಲೂ||
ಹಗಲಿರುಳು ಶ್ರೀದುರ್ಗಾನಾಮವ ನೆಚ್ಚಿ
ತೇಲುತಲಿದ್ದರೂ ತಪ್ಪದೀ ದುಃಖವು|
ಈ ಬಾರಿ ನಾನಿಲ್ಲಿ ಮುಳುಗಿದರಂತೂ
ಜಪಿಸರು ಇನ್ನಾರೂ ನಿನ್ನಯ ನಾಮವ||