ಹುಟ್ಟದ ಯೋನಿಯಲ್ಲಿ ಹುಟ್ಟಿಸಿ,
ಬಾರದ ಭವಂಗಳಲ್ಲಿ ಬರಿಸಿ,
ಉಣ್ಣದ ಊಟವನುಣಿಸಿ ವಿಧಿಗೊಳಗಾಗಿಸುವ ಕೇಳಿರಣ್ಣಾ.
ತನ್ನವರೆಂದಡೆ ಮನ್ನಿಸುವನೆ
ಹತ್ತರಿದ್ದ ಭೃಂಗಿಯ ಚರ್ಮವ ಕಿತ್ತೀಡಾಡಿಸಿದವನು
ಮತ್ತೆ ಕೆಲಂಬರ ಬಲ್ಲನೆ?
ಇದನರಿತು ಬಿಡದಿರು ಬಿಡದಿರು. ಚೆನ್ನಮಲ್ಲಿಕಾರ್ಜುನನಿಂತಹ ಸಿತಗನವ್ವಾ.