ಹನುಮನ ಮತವೇ

ಹನುಮನ ಮತವೇ ಹರಿಯ ಮತವೊ
ಹರಿಯ ಮತವೇ ಹನುಮನ ಮತವೊ||

ಹನುಮನು ಒಲಿದರೆ ಹರಿ ತಾನೊಲಿವನು|
ಹನುಮನು ಮುನಿದರೆ ಹರಿಯು ಮುನಿವನು||

ಹನುಮನು ಒಲಿಯೆ ಸುಗ್ರೀವನು ಗೆದ್ದ|
ಹನುಮನು ಮುನಿಯೆ ವಾಲಿಯು ಬಿದ್ದ||

ಹನುಮನು ಒಲಿಯೆ ವಿಭೀಷಣ ಗೆದ್ದ|
ಹನುಮನು ಮುನಿಯೆ ರಾವಣ ಬಿದ್ದ||

ಹನುಮನು ಪುರಂದರವಿಟ್ಠಲನ ದಾಸ|
ಪುರಂದರವಿಟ್ಠಲನು ಹನುಮನೊಳ್ ವಾಸ||

—-ಪುರಂದರದಾಸ

Leave a Comment

Your email address will not be published. Required fields are marked *