ಶುಭವೀವ ನಿರುತದಲಿ ಮಂದಹಾಸಾ
ಅಭಯಗಿರಿಯ ವಾಸಾ ಶ್ರೀ ಶ್ರೀನಿವಾಸ
ಧೇನಿಪರ ಮನ ಚಿಂತಾಮಣಿಯೋ | ದೇವ |
ನೀನೆ ಗತಿಯೆಂಬುವರ ಧಣಿಯೋ ||
e್ಞÁನಮಯ ಸುಖದ ಸಂದಣಿಯೋ | ಪುಣ್ಯ |
ಕಾನÀನವಾಸ ಸುರರ ಖಣಿಯೋ ||1||
ಶರಣರಿಗೆ ವಜ್ರ ಪಂಜರನೋ | ದೇವ |
ದುರುಳರಿಗೆ ವೀರ ಜರ್ಝರನೋ ||
ದುರಿತಕದಳಿಗೆ ಕುಂಜರನೋ |
ವರಕಲ್ಪ ಕಲ್ಪ ವಿಚಲನೋ ||2||
ಪರಮೇಷ್ಠಿ ಶಿವರೊಳಗೆ ಯಿಪ್ಪ | ದೇವ |
ಮರುತನ್ನ ಹೆಗಲೇರಿ ಬಪ್ಪಾ ||
ಶರಣರಿಗೆ ವರವೀಯುತಿಪ್ಪಾ |
ಸಿರಿ ವಿಜಯವಿಠ್ಠಲ ತಿಮ್ಮಪ್ಪಾ ||3||