ಶಿವಶಿವಾ, ಕರ್ಮಕ್ಷಯವಾದಲ್ಲಿ
ಕರ್ಮದ ಮಾತ ಕೇಳಿಸಿದೆಯಯ್ಯಾ ?
ಪಾಪಲೇಪವಳಿದಲ್ಲಿ
ಪಾಪದ ಮಾತ ಕೇಳಿಸಿದೆಯಲ್ಲಯ್ಯಾ ?
ಶಿವಶಿವಾ, ಭವದ ಬಟ್ಟೆಯನಗಲಿದಲ್ಲಿ ?
ಬಂಧನದ ನುಡಿಯನಾಡಿಸಿದೆಯಲ್ಲಯ್ಯಾ ?
ಚೆನ್ನಮಲ್ಲಿಕಾರ್ಜುನಯ್ಯಾ,
ನೀನೆ ಗಂಡನೆಂದಿದ್ದಲ್ಲಿ, ಪರಪುರುಷರ ಮಾತನಾಡಿಸಿದೆಯಲ್ಲಯ್ಯಾ ?
ಶಿವಶಿವಾ, ಕರ್ಮಕ್ಷಯವಾದಲ್ಲಿ
ಕರ್ಮದ ಮಾತ ಕೇಳಿಸಿದೆಯಯ್ಯಾ ?
ಪಾಪಲೇಪವಳಿದಲ್ಲಿ
ಪಾಪದ ಮಾತ ಕೇಳಿಸಿದೆಯಲ್ಲಯ್ಯಾ ?
ಶಿವಶಿವಾ, ಭವದ ಬಟ್ಟೆಯನಗಲಿದಲ್ಲಿ ?
ಬಂಧನದ ನುಡಿಯನಾಡಿಸಿದೆಯಲ್ಲಯ್ಯಾ ?
ಚೆನ್ನಮಲ್ಲಿಕಾರ್ಜುನಯ್ಯಾ,
ನೀನೆ ಗಂಡನೆಂದಿದ್ದಲ್ಲಿ, ಪರಪುರುಷರ ಮಾತನಾಡಿಸಿದೆಯಲ್ಲಯ್ಯಾ ?