ಶಿವಭಕ್ತರ ರೋಮನೊಂದಡೆ, ಶಿವನು ನೋವ ನೋಡಾ.
ಶಿವಭಕ್ತರು ಪರಿಣಾಮಿಸಿದಡೆ, ಶಿವನು ಪರಿಣಾಮಿಸುವ ನೋಡಾ.
ಭಕ್ತದೇಹಿಕದೇವನೆಂದು ಶ್ರುತಿ ಹೊಗಳುವ ಕಾರಣ,
ಶಿವಭಕ್ತರ ಲೇಸು ಹೊಲ್ಲೆಹ ಶಿವನ ಮುಟ್ಟುವುದು ನೋಡಾ.
ತಾಯಿನೊಂದಡೆ ಒಡಲಶಿಶು ನೋವತೆರನಂತೆ, ಭಕ್ತರು ನೊಂದಡೆ
ತಾ ನೋವ ನೋಡಾ ಚೆನ್ನಮಲ್ಲಿಕಾರ್ಜುನ.