ಶಿವನ ನೋಡಿರೊ ಇಂದು ಸ್ತವನ ಮಾಡಿರೊ |
ತವಕದಿಂದ ತಿಳಿದು ಅವಗುಣಂಗಳ ತೊರೆದು ನಿತ್ಯ
ಅಂತಕಾಪುರ ವೈರಿ | ದಿನಾಂತ ವೃಷಭನೇರಿ |
ಶಾಂತಿ ಸಹಿತ ಜನರಂಗಣದಿ | ನಿಂತು ಮಾತು |
ಲಾಲಿಪ ಮಹಿಮ ||1||
ಸುರಜನತೆ ಪ್ರೀತ ಸರ್ವದ | ಅಸುರ ವೈರಿಯು ನೇಮದಿಂದ |
ವಸುಧೆಯಾಳಗೆ ಬಲಿದಾನೇಕಾ |
ದಶರುದ್ರರೊಳು ಬಲು ಗುಣವಂತ ||2||
ದಕ್ಷ ಪ್ರಜೇಶ್ವರನಧ್ವರ | ರಕ್ಷಣೆ ಮಾಡಿದ ದಕ್ಷಮೂರ್ತಿ |
ಮೋಕ್ಷಕೆ ಮನಸು ಕೊಡುವ | ನಿಟಲೇಕ್ಷವಂತ ಶಾಂತ ||3||
ಕರಿಚರ್ಮಾಂಬರಧಾರಿ ವಾರಿ | ಧರ ತ್ರಿಶೂಲ
ಡಮರುಗ ಪಾಣಿ |
ಶರಗದ್ದುಗೆ ಸುಮೇರುವೇದಾ | ತುರಗವಾಗಿರಲಂದು ಅಂದದಿ||4||
ನಮಿಸಿ ಬರಲಿ ಬೇಡಿ ಭವದಿ | ಮಮತೆ
ಓಡಿಸಿ ಭಕುತಿಯಿಂದಲಿ |
ರಮೆಯರಸ ವಿಜಯವಿಠ್ಠಲನ್ನ |
ಶಮೆ ದಮೆಯಿಂದ ಪೂಜಿಪ ಧೀರ ||5||