ಶಾರದಾಂಬಿಕೆ ನಿತ್ಯ ಶಾರದಾ ಕೊಡು ಎನಗೆ |
ಸಾರುವೆ ನಾ ನಿನ್ನ
ಪುಂಡರೀಕ ನಯನೆ ಪುಂಡರೀಕನ ರಾಣಿ
ಪುಂಡರೀಕಗಮನೆ | ಪುಂಡರೀಕ ಚರ್ಮಾಂಬರ |
ಪುಂಡರೀಕನಾಥನುತೆ ಪುಂಡರೀಕವೆ ನಮಗೆ ||1||
ಶುಚಿ ಶರೀರಳೆ ಎನ್ನ ಶುಚಿಯ ಮಾಡುವ ಈ |
ಶುಚಿಯೊಳಗೆ ನಿನ್ನ ಕೀರ್ತಿ ಶುಚಿಯಾಗಿ ಮನದಲ್ಲಿ |
ಶುಚಿ ಜನ ಪೇಳುತಿದೆ | ಶುಚಿ ಮಾರ್ಗವನೆ ತೋರಿಸೆ ||2||
ಕೌಂಶಿಕ ವಾಣಿಯೆ ಕೌಂಶಿಕ ಬಿಂಬಸದನೆ |
ಕೌಂಶಿಕವೇಣಿ ಕರುಣಿ | ಕೌಂಶಿಕ ವಿಜಯವಿಠ್ಠಲನಲ್ಲಿಕೌಂಶಿಕದವನ ಮಾಡು||3||