ಶರಣು ಮಾರುತನ ರಾಣಿಗೆ

ಶರಣು ಮಾರುತನ ರಾಣಿಗೆ | ಶರಣು ನಿತ್ಯ ಕಲ್ಯಾಣಿಗೆ |
ಶರಣು ಶರಣು ಲೋಕ ಜನನಿಗೆ | ಶರಣು ಮುಂದಣ ವಾಣಿಗೆ

ಶ್ರದ್ಧೆ ಭಾರತಿ ಭಾಗ್ಯ ಸಂಪನ್ನೆ |
ಪದ್ಮ ಮಂದಿರ ನಂದನೆ |
ಭದ್ರ ಫಲದಾಯಕಳೆ ಕರುಣಾಬ್ಧಿಯೇ ಭಕ್ತರಪ್ರಿಯೇ ||1||

ಖಗಪನ್ನಗ ನಗಮಗಳ ಪತಿಯಿಂದ ಮಿಗಿಲೆನಿಪೆ ಶತಗುಣದಲಿ |
ಮೃಗನಾಭಿ ನೊಸಲಲ್ಲಿ ಶೋಭಿಸೆ |
ಮೃಗಕುರುಹ ಸಿರಿಮೊಗದವಳೆ||2||

ಇಂದ್ರಸೇನಳೆ ವಿಪ್ರ ಕನ್ನಿಕೆ | ಚಂದ್ರದಿ ಸ್ಥಾನವಾಸಳೆ |
ಇಂದ್ರನುತ ಸಿರಿ ವಿಜಯವಿಠ್ಠಲನ |ವಂದಿಸುವ ದ್ರೌಪದಿದೇವಿ ||3||

Leave a Comment

Your email address will not be published. Required fields are marked *