ಮೊರೆಹೊಕ್ಕೆ ಹರಿ ನಿಮ್ಮ ಚರಣಕಮಲವ

ಮೊರೆಹೊಕ್ಕೆ ಹರಿ ನಿಮ್ಮ ಚರಣಕಮಲವ ನಾನುಮರೆಯದೆ ಸಲಹೆನ್ನ ವರದಾ ಪಕರಿ ಧ್ರುವ ಪ್ರಹ್ಲಾದ ವಿಭೀಷಣರ ರಕ್ಷಿಸಿದೆಪರಂದೇವಿ ವಲ್ಲಭನೆ ವರದಾ

ಎಂಬತ್ತು ನಾಲ್ಕು ಲಕ್ಷ ಜೀವರಾಶಿ ಯೋನಿಯೊಳುಹಂಬಲಿಸಿ ನಾ ಬಂದೆ ವರದಾಅಂಬುಜೋದ್ಭವನ ಬರೆಹವ ಮೀರಲಾರದೆ ನರಬೊಂಬೆ ಗರ್ಭದೊಳಿದ್ದೆ ವರದಾ ||1||

ತುಂಬಿದ್ದ ಕೀವು ಮಲಮೂತ್ರ ರಕ್ತದಿಂ ಹೊರಳುವಸಂಭ್ರಮದೊಳಿದ್ದೆ ನಾ ವರದಾಒಂಬತ್ತು ಮಾಸವು ಕಳೆದು ಗುಂಡಿಯೊಳಿಳಿದು ಈಕುಂಭಿನಿಗೆ ನಾ ಬಂದೆ ವರದಾ ||2||

ನಸುನುಡಿಯನು ಕಲಿತು ನಸುನಗೆಗಳ ನಕ್ಕು ಈ ಕುಶಲದಾಟವ ಕಲಿತೆ ವರದಾಎಸೆವ ಯೌವನ ಬಂದು ಶಶಿಮುಖಿಯರೊಳು ಕಾಮತೃಷೆಗೆ ನಾನೊಳಗಾದೆ ವರದಾ ||3||

ನುಸುಳಿಸುವ ಚಾಂಡಾಲ ಗುಣವನೆಣಿಸದೆ ಕಾಮವಶನಾಗಿ ನಾನಿದ್ದೆ ವರದಾಉಸುರಲೆನ್ನಳವಲ್ಲ ಬೆಸನಿತ್ತು ಸಲಹೆನ್ನಬಿಸರುಹಾಕ್ಷನೆ ಕಂಚಿ ವರದಾ ||4||

ಗುರು ಹಿರಿಯರ ಕಂಡು ಸರಿಸಮಾನದಿ ನಾನುಬೆರೆದುಕೊಂಡಿದ್ದೆನೋ ವರದಾನರರ ಕೊಂಡಾಡಿ ನಾಲಗೆಯೊಣಗಿ ಅತಿಯಾಗಿನರನರಳಿ ಬೆಂಡಾದೆ ವರದಾ ||5||

ಕಾಸಿಗಾಸೆಯ ಪಟ್ಟು ಸಹಸ್ರ ಲಕ್ಷದ ಪುಸಿಯಬೇಸರಿಸದೆ ಬೊಗಳಿದೆ ವರದಾವಿಶೇಷ ನಿಮ್ಮಂಘ್ರಿಯ ನಂಬಲಾರದೆ ಕೆಟ್ಟದೋಷಕನು ನಾನಾದೆ ವರದಾ ||6||

ಪಂಚೇಂದ್ರಿಯಗಳೊಳಗೆ ಸಂಚರಿಸುವೀ ಮನವುಕೊಂಚ ಗುಣಕೆಳೆಯುತಿದೆ ವರದಾಪಂಚತ್ರಿಂಶತ್ಕೋಟಿ ಭೂಮಂಡಲದೊಳೆನ್ನಂಥಪಂಚಪಾತಕನುಂಟೆ ವರದಾ ||7||

ಮುಂಚೆ ಶ್ರೀ ಹರಿಯೆ ನಿಮ್ಮ ವರಧ್ಯಾನ ಮಾಡುವರಪಂಚೆಯಲ್ಲಿರಿಸೆನ್ನ ವರದಾಪಂಚಬಾಣನ ಪಡೆದ ನೆಲೆಯಾದಿ ಕೇಶವ ಈ ಪ್ರಪಂಚವನು ಬಿಡಿಸೆನ್ನ ವರದಾ ||8||

Leave a Comment

Your email address will not be published. Required fields are marked *