ಮನವೆ ಮಾಧವನೊಳು ಮಮತೆಯಿರಲಿ
ತನು ಮನ ಧನಗಳು
ತನವಾ ನೀಡಿದ ಮ್ಯಾಲೆ
ಮಾನಸಿಜ ಜನಕನು ಅನುದಿನ ಪೊರೆವ
ಕಾಮ ಜನಕನು ಪ್ರೇಮದಿ ನೆನದರೆ
ಮಾಮನೋಹರ ತನ್ನ ಧಾಮವ ಕೊಡುವ||1||
ಸಂತತ ನಿನ್ನನು ಚಿಂತಿಸುವಂ-
ತೆನ್ನಂತ ಮಂಗಳ ಮತಿಯು ನೀಡು ನೀ ಮನವೆ ||2||
ಅಜಭವನುತ ವಿಜಯ ಸಖನ ಯಜಿಸುವ ಜನರಿಗೆ
ನಿಜಪದವನೆ ಕೊಡುವಾ ವಿಜಯವಿಠ್ಠಲನಾ ||3||