ಮಧ್ವರಾಯರ ಕರುಣ ಪಡೆಯದವ

ಮಧ್ವರಾಯರ ಕರುಣ ಪಡೆಯದವ
ಧರೆಯೊಳಗೆ ಇದ್ದರೇನು ಇಲ್ಲದಿದ್ದರೇನು

ಮಧ್ವಮತವೇ ಮತವು ಸಕಲ ಶ್ರುತಿ ಸಮ್ಮತವು |
ಮಧ್ವರಾಯರ ಧ್ಯಾನ ಅಮೃತಪಾನ ||
ಮಧ್ವರಾಯರ ಲೀಲೆ ನವರತುನದಾ ಮಾಲೆ |
ಮಧ್ವೇಶನಾ ಸ್ಮರಣೆ ಕುಲಕೋಟಿ ಉದ್ಧರಣೆ ||1||

ಮಧ್ವರಾಯರ ಕಥೆಯ ಕೇಳಲದು ದುರಿತ ಹತ |
ಮಧ್ವರಾಯರ ಭಕುತಿ ಮಾಡೆ ಮುಕುತಿ ||
ಮಧ್ವರಾಯರ ಸ್ತೋತ್ರ ಮಾಡಿದವ ಸತ್ಪಾತ್ರ |
ಮಧ್ವರಾಯರ ಭಜನೆ ದುಷ್ಕರ್ಮ ತ್ಯಜನೆ ||2||

ಮಧ್ವರಾಯರ ದಾಸನಾದವನೆ ನಿರ್ದೋಷ |
ಮಧ್ವರಾಯರ ಬಂಟ ಜಗಕೆ ನೆಂಟ ||
ಮಧ್ವರಮಣಾ ನಮ್ಮ ವಿಜಯವಿಠ್ಠಲನಾದ
ಮಧ್ವೇಶನಾ ಕರುಣೆ ಪಡೆದವನೆ ಶರಣ ||3||

Leave a Comment

Your email address will not be published. Required fields are marked *