ಭೀಮ ಪರಿಪೂರ್ಣ ಕಾಮ ಸೋಮಕುಲಾಬ್ಧಿ

ಭೀಮ ಪರಿಪೂರ್ಣ ಕಾಮ ಸೋಮಕುಲಾಬ್ಧಿ
ಸೋಮ ರಣರಂಗ ಭೀಮಾ ಆ ಮಹಾದುರಿತ
ರಾಮರಾಸಿಗೆ ದೇವಾ ಮೊಗನೆನಿಸುವ ಭೂಮಿ ಭಾರ ಹರ

ಧರ್ಮನಂದನನೊಡನೆ ಜನಿಸಿ ಬಂದು
ದುರ್ಮತಿಗಳಾ ಕೂಡ ನಿರ್ಮತ್ಸರಾದಲ್ಲಿರದೆ ನಿರುತ ಛಾತ್ರಾ
ಕರ್ಮದಲ್ಲಿ ಮರೆದೆ ಧರ್ಮಕ ಹಿತರೊಂದು ನಿರ್ಮಿತದರಗಿನ
ಅರ್ಮನೆ ಮಾಡಿರೆ ಮರ್ಮ ತಿಳಿದು ದಾಟಿ
ಮಾರ್ಮಲೆತ ಅಸುರನ ನಿರ್ನಾಮಗೈಸಿದ
ನಿರ್ಮಳಾ ಮನೋಹರಾ ಪೇರ್ಮಿವುಳ್ಳವನೆ||1||

ಬಕನ ಸರ್ರನೆ ಸೀಳಿ ಬಿಸಾಟಿ ಪಾಂಚಾಲಕನ ಸಭಾದ ಮೌಳಿ
ಅಕಟ ತೊಲಗಿಸಿ ಗೆಲಿದು ನೆರೆದ ಕಾ
ಮುಕರ ಬಿಂಕವ ಹಳಿದು
ಬಕ ವಿರೋಧಿಯ ಭಕುತಿಯಿಂದಲಿ ಬಲು ಸುಖ ಬಡಿಸುತ ಕು
ಹಕ ಮಾಗಧÀನ ರಣಮುಖಕಾಹುತಿಯಿತ್ತು
ವಿಕಳತನದ ಕೀಚರ ಕಿಮ್ಮೀರ ಲಿಕಿಲಿಕಿ ಮಾಡಿದ||2||

ಗುರುವಿನ ರಥವೆ ತೆಗೆದು ಗಗನಕ್ಕೆ ಭರದಿಂದಲಿ ಬಗೆದು
ಹರಿದಾಡಿ ಕುಣಿಕುಣಿದು ನೆರದ ಸುತ್ತುವದ ರಥಿಕರ ಹಣಿದು
ಅರಿಗಳ ಶಿರಗಳ ತರಿ ತರಿದವನಿಗೆ
ಹರಪಿದೆ ಗುರುಸುತ ಧುರ ಧರದೊಳು
ಹರಿಶರ ಬಿಡಲಂಜದೆ ಎರಗದಲಿಪ್ಪ ಭ
ಳಿರೆ ಪರಾಕ್ರಮ ವರ ವೃಕೋದರ||3||

ಕೊಬ್ಬಿದ ದುಃಶಾಸನ್ನ ಉರವಣಿಸಿ ಮಬ್ಬಾದ ಕರಿ ತೀಕ್ಷಣ
ಕಬ್ಬು ತುಡಕಿದಂದದಿ ಪಿಡಿದವನ
ಇಬ್ಬಗದು ಉದರದ ಕೊಬ್ಬು ಹರಿಸಿ ಕರು
ಳಬ್ಬರದಲಿ ಸತಿಗೆ ಉಬ್ಬಿಗೆ ತೀರಿಸಿ
ಇಬ್ಬಲದವರನ ಯೆಬ್ಬಟಲು ಸುರರಭ್ಬೆಭ್ಬೆನುತಿರೆ
ಬೊಬ್ಬಾಟಕೆ ಜಗ ಸುಬ್ಬನ ಸೂರೆ ||4||

ಕುರುಪ ಜಲದೊಳಗೆ ಅಡಗಿರಲು
ಬಿರಖು ನುಡಿಯ ಕೆಳಗೆ ಪೊರಡಿಸಿ ಗದೆಯಿಂದಲಿ
ವೈರಿಯ ತೊಡೆ ಮುರಿದು ನಿರ್ಭಯದಿಂದಲಿ
ತುರಗಧ್ವರದಲಿ ಮೆರೆದೆ ದೋಷರಾಶಿ
ವಿರಹಿತ ಕಾಮನೆ ಸುರಮಣಿ ಜಗದಂ
ತರಿಯಾಮಿ ಪರಮಗುರುವೆ ವಿಜಯ
ವಿಠ್ಠಲರಿವ ಭಾರತ ಮಲ್ಲ ಮರುತಾವತಾರ ||5||

Leave a Comment

Your email address will not be published. Required fields are marked *