ಭವ ಭಯ ವಿನಾಶ ಭೋ ಭಕ್ತವಿಲಾಸ

ಭವ ಭಯ ವಿನಾಶ ಭೋ ಭಕ್ತವಿಲಾಸ ಭೋ ಪಾ-ಪವಿನಾಶ ಭೋ ಬಾಡದ ರಂಗೇಶ ಭೋ

ಹರಿಯ ಸುತನಿಗೆ ಅಭಯವನಿತ್ತೆ ಹರಿಯ ಮಗನಾ ಕೊಂದೆಹರಿಯೆನಲು ಹರಿರೂಪ ತಾಳಿದೆಹರಿಯೊಳಡಗಿದೆ ಮತ್ತೆಹರಿಯನಗ್ರಜ ಕೋಟಿ ತೇಜನಹರಿಯ ವದನನೆಂಬ||1||

ಶಿವನ ಮಗಳೊಡಗೂಡಿ ಮತ್ತೆಶಿವಮಗಳನು ಮಾವನಿಗಿತ್ತೆಶಿವನ ಉಪಟಳಕಳುಕಿ ಗೋಕುಲಶಿವನ ಕರದಲಿ ಪೊತ್ತೆಶಿವನ ಧನುವನು ಖಂಡಿಸಿ ಮತ್ತೆಶಿವನ ತಲೆಯೇರಿ ನಿಂದೆಶಿವನ ಭೋಜನವಾಹನ ಸುತನಿಗೆಶಿವನ ಪ್ರತಿಪಾಲನೆಂಬ ||2||

ಕಮಲವನು ಈರಡಿಯ ಮಾಡಿದೆಕಮಲ ಮೊರೆಯಿಡಲಂದುಕಮಲದಲಿ ಬ್ರಹ್ಮಾಂಡ ತೋರಿದೆಕಮಲಧರ ನೀನೆಂದು ಕಮಲವನು ಕದ್ದೊಯ್ದ ಕಳ್ಳನ ಸದೆದುಕಮಲವ ತಂದೆಕಮಲಮುಖಿಯಳ ಕಾಯ್ದ ಕಾಗಿನೆಲೆವಿಮಲ ಆದಿಕೇಶವನೆಂಬ ||3||

Leave a Comment

Your email address will not be published. Required fields are marked *