ಭಜಿಸಿರೊ ಬಿಡದೆ ವಿರಾಜಮಾನರಾಗಿ

ಭಜಿಸಿರೊ ಬಿಡದೆ ವಿರಾಜಮಾನರಾಗಿ ನಿತ್ಯ
ಕುಜನರೊಳಾಡದಲೆ ನಿಜ ಭಕುತಿಯಿಂದ
ಭುಜಬಲವುಳ್ಳ ಪರಜರಟ್ಟುವ ದಿ
ಗ್ವಿಜಯ ಸತ್ಯಪೂರ್ಣರ ಸುಜನರೊಂದಾಗಿಪ

ಭರದಿಂದ ಬಂದು ನಿಂದು ನಿರೀಕ್ಷಿಸಿ ನಿರ್ಮಳ
ಕರಯುಗಳ ಮುಗಿದು ಶಿರವಾನಿಲ್ಲದೆ
ಧರಣಿಯಾ ಮ್ಯಾಲೊಂದು ತೀವರ ಸಾಷ್ಟಾಂಗ ನಮ
ಸ್ಕರಿಸಿ ಕೊಂಡಾಡಿ ನಿಂದಿರಲಾನರರಿಗೆಲ್ಲ
ಪರಿಹರವೊ ಬಂದರಘಳಿಗೆಯಲಿ
ಪರಿಪರಿ ಜನ್ಮದ ತರತÀರದಘಗಳು
ಸರಿಯೆನ್ನಬಹುದಿವರ ದರ್ಶನ ಲಾಭ
ದುರುಳರಿಗಾಯ್ತು ಮರಿಯದೆ ಚೆನ್ನಾಗಿ||1||

ನೆರೆನಂಬಿ ನಿಮ್ಮಯ ಗೋತುರ ಸಹಿತಕ್ಕೆ ನಾಂ
ಕುರವಾಗುವುದು ಇದು ಉರುಕಾಲ ಸಿದ್ಧವೆನ್ನಿ
ತರತಮ್ಯ ತತ್ವ ತಾತ್ಪರಿಯ ವಿಧ ತಿಳಿದು
ತಿರಗುವರನುದಿನ ಸುರರು ಮೆಚ್ಚುತಲಿರೆ
ಮುರರಿಪು ಚತುರ್ದಶ ಧರಣಿಗೆ ಪರನೆಂದು
ಬಿರಿದನು ಎತ್ತಿ ಡಂಗುರವ ಹೊಯಿಸಿ ಡಿಂಗರರಿಗೆ ಸಚ್ಛಾಸ್ತ್ರ
ಅರುಹಿ ಸುಖಾರ್ಥವ ಕರೆದು
ಕೊಡುವ ಯತಿಶಿರೋಮಣಿ ಕರ್ನಾ ||2||

ಅವನಿಯೊಳು ಸತ್ಯಾಭಿನವತೀರ್ಥರ
ಪಾದಾಂಬುಜಾತ ಕೃಷ್ಣಾ ತನು
ಭವಸರಿತ ನಿವಾಸಾ ದಿವಿಜೇಶನಾಯುಧ
ಕವಚದಿಂದಲಿ ತನ್ನವರನ ಪೊರೆದೆತ್ತಿ
ನವವಿಧ ಬಗೆ ತೋರಿ ತವಕದಿ ಕೋಲುಪುರ
ಪವಿತುರ ಸ್ಥಳದಲ್ಲಿ ರವಿಯಂತೆ ಪೊಳವರು
ಭವದೋಷ ಕಳೆವುತಾ ಕವಿಗಳ ಮನೋಹರ ವಿಜಯವಿಠ್ಠಲನ
ಶ್ರವಣ ಮನನ ಧ್ಯಾನವನು ಬಲ್ಲವರಾ||3||

Leave a Comment

Your email address will not be published. Required fields are marked *