ಭಕ್ತರನ ನಂಬದಿರು ಭವದೂರನೆ

ಭಕ್ತರನ ನಂಬದಿರು ಭವದೂರನೆ
ಮುಕ್ತಿಯನು ಬೇಡದಲೆ ನಿನ್ನೆ ಪೂಜಿಸುವರು ||ಪ||

ಪ್ರಸ್ತ ಮಾಡುವ ಸಾಧನಕ್ಕೆ ಪೋಗಿ ನಿಂದು ಬಲು
ಹಸ್ತು ಬಂದವನು ತುತ್ತನ್ನ ಕೇಳೆ
ಸ್ವಸ್ತವಾಗಿ ಕುಳಿತು ಭೋಜನ ಮಾಳ್ಪ ಆ
ಗ್ರಹಸ್ತ ಪೊಟ್ಟಿ ತುಂಬದೆ ಬರಿದೆ ಏಳುವನೆ||1||

ಹಾದಿಕಾರನು ಬಂದು ವಸ್ತಿ ಮಾಡುವದಕ್ಕೆ
ಆದರದಲಿ ಸ್ವಲ್ಪ ಸ್ಥಳವ ಕೇಳಿ
ಪಾದ ಇಡುವನಿತರೊಳು ಕುಳಿತು ಆಮೇಲೆ ಸಂ
ಪಾದಿಸುವ ತನ್ನ ತಕ್ಕಷ್ಟು ಧರಣಿಯನ್ನು||2||

ಆವದೊಲ್ಲೆವೆಂದು ಆಡುವರು ನಿತ್ಯದಲಿ
ಕಾವ ಕರುಣಿ ನೀನೆಂದು ತಿಳಿದು
ಶ್ರೀ ವನಿತೆಯರಸ ಸಿರಿ ವಿಜಯವಿಠ್ಠಲ ನಿನ್ನ
ಪಾವನನಾಗಿದ್ದ ನಾಮ ಬದಲಿ ಇಂದು ||3||

Leave a Comment

Your email address will not be published. Required fields are marked *