ಬೊಂಬೆಯಾಟವನಾಡಿಸಿದೆ ಮಹಾಭಾರತದ

ಬೊಂಬೆಯಾಟವನಾಡಿಸಿದೆ ಮಹಾಭಾರತದ
ಅಂಬುಜಭವಾದಿ ಅಮರರು ನೋಡುತಿರಲು

ಕುರುಭೂಮಿಯೆಂಬ ಪುರವೀಧಿಯನು ರಚಿಸಿಮರೆಯ ಮಾಯದ ಐದು ತೆರೆಯ ಹಾಕಿಧರಣೀಶರೆಂಬ ನರಪ್ರತಿಮೆಗಳನಳವಡಿಸಿನರನ ರಥವಾಜಿಯ ಸೂತ್ರವನು ಪಿಡಿದು ||1||

ಓದುವನು ನಾರದನು ವಾದ್ಯಕಾರನೆ ಶಂಭುಬಾದರಾಯಣದೇವ ಕಥಾಪ್ರಸಂಗಿಮೇದಿನಿಯ ಹೊರೆಗಳೆವ ಮೃತ್ಯುವಿನ ಹಾಸ್ಯರಸವೇದನಿಕರಗಳು ಕೈವಾರಿಸುತಿರಲು ||2||

ಹದಿನೆಂಟು ಅಕ್ಷೋಹಿಣಿ ಮಾರ್ಬಲವ ನೆರೆಸಿಹದಿನೆಂಟು ದಿನ ಕದನಕೇಳಿಕೆ ನಡೆಸಿಅದರೊಳೈವರನುಳುಹಿ ಅವನಿಭಾರವನಿಳುಹಿಮುದದಿ ಬ್ರಹ್ಮಕಪಾಲವನು ತೃಪ್ತಿಗೊಳಿಸಿ ||3||

ಲೋಕದೊಳಗೈದನೆಯ ವೇದವಿದೆಂದೆನಿಸಿಪಾಕಶಾಸನ ಸಭೆಯನು ಮೆಚ್ಚಿಸಿಈ ಕಥೆಯ ಕೇಳಿದ ಜನಮೇಜಯನ ಪತಿಕರಿಸಿತಾ ಕಪಟನಾಟಕದ ಸೂತ್ರಧರನೆನಿಸಿ ||4||

ಇಂತೆಸೆವ ಲೀಲಾವಿನೋದ ರಚನೆಗಳಿಂದ ಲೋ-ಕಾಂತರಂಗಳ ಸಂಚರಿಸುತಸಂತಸದಿ ಭರತ ಸಂಸಾರವನು ಪೊರೆವ ವೇ-ದಾಂತನುತ ಕಾಗಿನೆಲೆಯಾದಿಕೇಶವರಾಯ ||5||

Leave a Comment

Your email address will not be published. Required fields are marked *