ಬಿಡು ಬಿಡು ಮಾಯವನು ಕೆಡದಿರು ಕಪಟದಲಿ |
ನಡಿ ನಡಿ ಸುಪಥವ ಜಗದೊಡಿಯೆನ ನೆನೆ ಮನವೆ
ನಾನು ನನ್ನದು ಎಂಬೊ ಹೀನ ವಚನ ಸಲ್ಲ
ಗೇಣುದರವಲ್ಲದೆ ಪೊರೆವದು ಮತ್ತೇನಾದರು ಉಂಟೆ ||1||
ಮಡದಿ ಮಕ್ಕಳ ನೋಡಿ ಕಡು ಹಿಗ್ಗಿ ಕೆಡಬೇಡ |
ಕಡು ಮುನಿದೆಮನಾಳುಗಳು ಪಿಡಿದೆಳೆದೊಯ್ವಾಗ ||2||
ಇರುಳು-ಹಗಲು ನೀನು ಹರಿಸ್ಮರಣೆ ಚಿತ್ತದಲಿ |
ಸ್ಥಿರವಾಗಿ ಇರಿಸೋದು ಅನಂತ
ಜನ್ಮಾಂತರ ಪಾಪ ಪೋಗುವುದು ||3||
e್ಞÁನ ಮಾರ್ಗವಿಡಿದು ಆನಂದ ಮೂರುತಿಯ ಧ್ಯಾನದಿಂದಲಿ
ಕಾಣ್ಯ ದೈನ್ಯವೃತ್ತಿಯ ಬಿಟ್ಟು ಹಾನಿ ವೃದ್ಧಿಯ ಜರಿದು||4||
ಅತಿ ಕಾಮಾತುರನಾಗಿ ರತಿಯಲ್ಲಿ ಸಿಗದಿರು |
ಸತತ ಮಾಡಿದ ಕರ್ಮ ವ್ಯಾಳೆವ್ಯಾಳೆಗೆ ಶ್ರೀಪತಿಗರ್ಪಿತವೆನ್ನು||5||
ಸಂತೋಷಗಳು ಬರಲಿ ಸಂತಾಪಗಳು ಇರಲಿ |
ಇಂತು ಇವರಿಗೆಲ್ಲ ಪ್ರೇರಕ ಹರಿ ಜಗದಂತರ್ಯಾಮಿ ||6||
ಧನ-ಕನಕ ವಸ್ತು ಮಾನಿನಿ ನಂದನರು ಆರು ? |
ತನುವೆ ನಿನ್ನದಲ್ಲ ತಿಳಿದುಕೊ ಗತಿ ಸಾಧನಕೆ ವಿಜಯವಿಠ್ಠಲ||7||