ಬಸವನ ಭಕ್ತಿ ಕೊಟ್ಟಣದಮನೆ.

ಬಸವನ ಭಕ್ತಿ ಕೊಟ್ಟಣದಮನೆ.
ಸಿರಿಯಾಳನ ಭಕ್ತಿ ಕಸಬುಗೇರಿ.
ಸಿಂಧುಬಲ್ಲಾಳನ ಭಕ್ತಿ ಪರದಾರದ್ರೋಹ.
ಉಳಿದಾದ ಅಟಮಟ ಉದಾಸೀನ ದಾಸೋಹವ ಮಾಡುವವರ
ದೈನ್ಯವೆಂಬ ಭೂತ ಸೋಂಕಿತು.
ಮಣ್ಣಿನ ಮನೆಯ ಕಟ್ಟಿ
ಮಾಯಾ ಮೋಹಿನಿಯೆಂಬ ಮಹೇಂದ್ರಜಾಲದೊಳಗಾಗಿ
ಮಾಡುವ ಮಾಟ.
ಭಕ್ತನಲ್ಲಿ ಉಂಡು ಉದ್ದಂಡವೃತ್ತಿಯಲ್ಲಿ ನಡೆವವರು ಶಿವನಲ್ಲ.
ಇವರು ದೇವಲೋಕ ಮತ್ರ್ಯಲೋಕಕ್ಕೆ ಹೊರಗು.
ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ, ನನ್ನ ಭಕ್ತಿ ನಿನ್ನೊಳಗೈಕ್ಯವಾಯಿತ್ತಾಗಿ ನಿರ್ವಯಲಾದೆ ಕಾಣಾ

Leave a Comment

Your email address will not be published. Required fields are marked *