ಬಲು ಮಧುರವೊ ನಿನ್ನ ಹೆಸರು
ಕಿವಿಗೆ ಸುಧೆಯ ಕರೆವುದು|
ದೀನಶರಣ ಪ್ರಾಣರಮಣ
ಅಮೃತ ಭವನ ಧನವಿದು||
ನಿನ್ನ ಹೆಸರು ಕೀರ್ತಿಸಿದರೆ
ನಾವು ಅಮರರಪ್ಪೆವೋ|
ಚಿಂತೆಗಡಲು ನಿಮಿಷದಲ್ಲಿ
ಬತ್ತುತ ಬಯಲಪ್ಪುದೋ||
ಹೃದಯದಲ್ಲಿ ನಿನ್ನ ಮಧುರ
ಗಾಯನವನೆ ಗೈವೆವು|
ಹೃದಯನಾಥ ಚಿದಾನಂದ
ನಿರುತ ನಿನ್ನ ನೆನೆವೆವು||
—-ವಚನವೇದ