ಬಂದು ಕಂಡೆನೊ ಇಂದು

ಬಂದು ಕಂಡೆನೊ ಇಂದು |
ಇಂದುಧರನ ಪಾದದ್ವಂದ್ವಗಳನು ದಿನವು |
ಎಂದೆಂದಿಗೆ ಬಿಡದೆ | ಪೊಂದಿದ್ದ ಪಾಪಗಳು |
ನಿಂದಿರದಲೆ ಓಡಿ ಬೆಂದು ಪೋದವು ನೋಡಾ

ಸತಿಗೆ ಅಧರ್Àಕಾಯ ಹಿತದಿಂದಲಿ ಇತ್ತು |
ಚತುರತನದಲಿಳೆಯೊಳು ಪತಿತ ಮಾನವರಿಗೆ |
ಮತಿಬಾಹದೊ ಮಾನಸ ಸತತ ದೃಢವನೀವ |
ಪ್ರತಿದಿನದಲಿ ಕಾಯ್ವಾ ||1||

ವಿಷವ ಧರಿಸಿ ಸುಮನಸರ ನಡುವೆ ಮೆರೆದೆ |
ಪಶುವಾಹನ ಪರಮೇಶ ಅಸುರಾರಿಗಲ್ಲದ |
ಅಸುರರ ಕೊಲ್ಲುವ ರಂಜಿಸುವಾ |
ಶಶಿ ಜಟಾ ಕಮನೀಯ ಮಣಿಮಕುಟಾ ||2||

ಕಡಲ ತಡಿಯವಾಸ | ವೊಡಿಯ ರಾಮನ ದಾಸ |
ಮೃಡರುಂಡ ಮಾಲಾಭೂಷಾ ||
ಬಿಡದೆ ಸೇತುಬಂದ ವಿಜಯವಿಠ್ಠಲನ |
ಅಡಿಗಡಿಗೆ ನೆನೆಸುವ ಶಿವರಾಮಲಿಂಗಾ ||3||

Leave a Comment

Your email address will not be published. Required fields are marked *