ಬಂದಿದೆ ದೂರು ಬರಿದೆ ಪಾಂಡವರಿಗೆ
ಕೊಂದವರಿವರು ಕೌರವರನೆಂಬಪಕೀರ್ತಿ
ಮುನ್ನಿನ ವೈರದಿ ಕಡು ಸ್ನೇಹವ ಮಾಡಿಉನ್ನತ ಲೆತ್ತ ಪಗಡೆಯಾಡಿಸಿತನ್ನ ಕುಹಕದಿಂದ ಕುರುಬಲವ ಕೊಂದವನುಘನ್ನಘಾತಕ ಶಕುನಿಯೊ ಪಾಂಡವರೊ ||1||
ಮರಣ ತನ್ನಿಚ್ಛೆಯೊಳುಳ್ಳ ಗಾಂಗೇಯನುಧುರದೊಳು ಷಂಡನ ನೆಪದಿಂದಲಿಸರಳ ಮಂಚದ ಮೇಲೆ ಮಲಗಿ ಮೊಮ್ಮಗನಕೊರಳ ಕೊಯ್ದವನು ಭೀಷ್ಮನೊ ಪಾಂಡವರೊ ||2||
ಮಗನ ನೆಪದಿ ಕಾಳಗವ ಬಿಸುಟು ಸುರನಗರಿಗೈದಲು ವೈರಾಗ್ಯದಲಿಜಗವರಿಯಲು ಕುರುವಂಶಕ್ಕೆ ಕೇಡನುಬಗೆದು ಕೊಂದವನು ದ್ರೋಣನೊ ಪಾಂಡವರೊ||3||
ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆಕೊಟ್ಟ ಭಾಷೆಗೆ ಐವರ ಕೊಲ್ಲದೆನೆಟ್ಟನೆ ರಣಮುಖದಲಿ ತನ್ನ ಪ್ರಾಣವಬಿಟ್ಟು ಕೊಂದವನು ಕರ್ಣನೊ ಪಾಂಡವರೊ ||4||
ಮಥನಿಸಿ ಸೂತತನವ ಮಾಡಿ ರಣದೊಳುಅತಿಹೀನಗಳೆಯುತ ರವಿಸುತನರಥದಿಂದಿಳಿದು ಪೋಗಿ ಕೌರವಬಲವನುಹತ ಮಾಡಿದವನು ಶಲ್ಯನೊ ಪಾಂಡವರೊ ||5||
ಜಲದೊಳು ಮುಳುಗಿ ತಪವ ಮಾಡಿ ಬಲವನುಛಲದಿಂದೆಬ್ಬಿಸಿ ಕಾದುವೆನೆನುತಕಲಿ ಭೀಮಸೇನನ ನುಡಿಗೇಳಿ ಹೊರವಂಟುಕುಲವ ಕೊಂದವನು ಕೌರವನೊ ಪಾಂಡವರೊ||6||
ಕವುರವ ಪಾಂಡವರಿಗೆ ಭೇದ ಪುಟ್ಟಿಸಿಪವುಜೊಡ್ಡಿ ಕುರುಕ್ಷೇತ್ರದಿ ಕಾದಿಸಿಸವುಶಯವಿಲ್ಲದೆ ಕುರುಬಲವ ಕೊಂದವನುಹಿವುಸಕನಾದಿಕೇಶವನೊ ಪಾಂಡವರೊ ||7||