ನೋಡ ಬಂದೆನೋ ನಿತ್ಯ ಪಾಡಿದವರ ಪ್ರಾಣ
ಮಾಡು ಕಾರುಣ್ಯವ ಮಾತಾಡು ಮನ್ನಿಸಿ
ರೂಢಿಯೊಳಗೆ ನಿನಗೀಡುಗಾಣೆನೊ ಕರ
ಪಿಡಿವ ತಾರಾಕ್ಷರೂಢ ವೆಂಕಟರಾಯ
ನಾನಾ ಪೂರ್ವ ಉತ್ತರ ಯೋನಿ ಮೊಗದಿಂದ ವೃದ್ಧ
ಹಾನಿ ದೇಹವ ತೆತ್ತು. ನಾನು ನಿನ್ನದು ಎಂದು
ಹೀನ ಮತಿಯಿಂದಪಮಾನಕೊಳಗಾಗಿ
ಏನು ಕಾಣದೆ ಪಾಪ ಕಾನನದೊಳು ಬಿದ್ದು
ಙÁ್ಞನರಹಿತನಾದೆ ಕಾಣೆ ಲಾಭಕೆ ಮದ್ದು-
ನೀಯಳ ಕಳಕೊಂಡ ಮಾನವನಂತೆ ನಿತ್ರಾಣಗೆಟ್ಟೆನೊ ಈ
ಕ್ಷೋಣಿಯೊಳಗೆ ಪುಟ್ಟಿದಾಗ ವಿನೋದಿಯೆ ನೀನೆ ಗತಿ ಎಂದು ||1||
ನಿಚ್ಚಳ ಮನ ದೊರಿಯೆ ನಿತ್ಯ ನಿನ್ನ ನಂಬಿದೆ
ಬೆಚ್ಚಿಸಲಾರೆ ಬಲು ಅರ್ಚನೆ ಬಗೆಯಿಂದ
ಮುಚ್ಚಿದಾವರ್ಕ ದೇಹ ಬಿಚ್ಚಿಯಿಟ್ಟು ದೇವಾ
ಅಚ್ಚನಾಗ್ರಹದಿಂದ ಅಚ್ಯುತಾ ಶರಣೆಂದು
ಬೆಚ್ಚಿದವರ ಪ್ರಾಣ ಹೆಚ್ಚಿನ ದೈವವೆ ಎಚ್ಚರವುಳ್ಳಾಗ
ಅಚ್ಯುತಾ ಅಚ್ಯುತಾ ಚಚ್ಚರಾ ನಾಮಗಳುಚ್ಚರಿಸುವ ಧ್ಯಾನ
ಬಿಚ್ಚದೆ ಒದಗಲಿ ಇಚ್ಛಾಕ ಮೂರುತಿ ||2||
ಧನ್ಯ ಸ್ವಾಮಿ ಕಾಸಾರಾಪುಣ್ಯ ಕಾನನವಾಸಾರಣ್ಯಗಳೆಲ್ಲಾದಿ ಅಲ್ಲ
ನಿನ್ನ ಭಕ್ತರ ಕುಲಕೆ ಮಾನ್ಯರಹಿತನೆ ತಾ-
ರುಣ್ಯಗಾತುರ ಸತ್ಕಾರುಣ್ಯ ನಿಧಿ ಮದನ ಲಾ-
ವಣ್ಯ ಕ್ಷೀರವಾರಿಧಿ ಕನ್ಯ ಭೂ ಸತಿಪತಿ
ಅನ್ಯಥಾ ಸತ್ಪಂಥ ಶೂನ್ಯ ನೀನೆಲೊ ದುರಿತಾ-
ಗಣ್ಯರ ಹೋತ್ರನೆ ಪುಣ್ಯ ಶ್ಲೋಕ ಸಿರಿ ವಿಜಯವಿಠ್ಠಲ ಹಿ-
ರಣ್ಯೋದರ ಪಿತ ಸನ್ಯಾಯದಿಂದಲಿ ||3||