ನೋಡೆನೆಂಬವರ ನೋಡಿಸುವೆ,
ನುಡಿಯೆನೆಂಬವರ ನುಡಿಯಿಸುವೆ,
ಒಲ್ಲೆನೆಂಬವರನೊಲಿಸುವೆ,
ಒಲಿದೆನೆಂಬವರ ತೊಲಗಿಸುವೆ ನೋಡಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ,
ನೀನಲ್ಲದನ್ಯರ ಮುಖದ ನೋಡೆನೆಂದಡೆ ನೋಡುವಂತೆ ಮಾಡಿದೆಯಲ್ಲಾ ಲಿಂಗವೆ ?
ನೋಡೆನೆಂಬವರ ನೋಡಿಸುವೆ,
ನುಡಿಯೆನೆಂಬವರ ನುಡಿಯಿಸುವೆ,
ಒಲ್ಲೆನೆಂಬವರನೊಲಿಸುವೆ,
ಒಲಿದೆನೆಂಬವರ ತೊಲಗಿಸುವೆ ನೋಡಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ,
ನೀನಲ್ಲದನ್ಯರ ಮುಖದ ನೋಡೆನೆಂದಡೆ ನೋಡುವಂತೆ ಮಾಡಿದೆಯಲ್ಲಾ ಲಿಂಗವೆ ?