ನೋಡಯ್ಯ ನಿನ್ನ ದಾಸರ ಮೇಲೆ ಕೃಪೆಗಳನುಮಾಡಯ್ಯ ಮನ್ಮನಕೆ ಸಂತಸವನುತೀಡಯ್ಯ ಭವಭಯದ ಪಾತಕಂಗಳ ದಾನವಾಡ ಗುಡ್ಡದ ತಿರುಮಲೇಶ ಸರ್ವೇಶ
ಆದಿಯಲಿ ವೇದಗಳ ಕದ್ದುಕೊಂಡೊಯ್ದವನಸಾಧನಂಗೆಯ್ವೆನೆಂದಾಕ್ಷಣದೊಳುಪೋದನೆಲ್ಲೆನುತ ಶರನಿಧಿಯೊಳಗೆ ಪೊಕ್ಕ ಮ-ತ್ತಾ ದಿತ್ಯನಂ ಕೊಂದು ತಿಕ್ಕಿಮುಕ್ಕೆನೀ ದಯಾ ಪಾತ್ರನೆಂಬುದ ಕೇಳಿ ನಾನರಿತೆಭೂ ಧರೆಯ ಸುರರ ನೀ ಸಲುಹಲಾಗಪೋದ ನಿಗಮಂಗಳನು ತಂದು ಸಲೆ ರಕ್ಷಿಸಿದೆಆದಿ ಮತ್ಸ್ಯವತಾರ ಶರಣೆಂಬೆನು ||1||
ಅಮರ ದೈತ್ಯರು ಕೂಡಿ ಅಂಬುಧಿಯ ಕಡೆಯಲಿಕೆಕ್ರಮದಿ ಮಂದರಕೆ ಕಟ್ಟಿದ ಶೇಷನತಮತಮಗೆ ಪಿಡಿದೆಳೆಯೆ ತಲ್ಲಣಿಸಿ ಫಣಿರಾಜಸಮ ವಿಷದ ಕರ್ಬೊಗೆಯನುಗುಳುತಿರಲುಮಮಕಾರ ತತ್ತ್ವದಲಿ ಮತ್ತೊಂದು ರೂಪಾಗಿಅಮಿತಗುಣ ಮೂರ್ತಿ ನೀನಂದು ಬೇರೆಸುಮತವನು ಬೆನ್ನಲ್ಲಿ ಸಲೆ ಆತು ರಕ್ಷಿಸಿದೆಕಮಠಮೂರುತಿ ನಿನಗೆ ಶರಣೆಂಬೆನು ||2||
ಚಿನ್ನಗಣ್ಣವನೆಂಬನೊರ್ವ ಖಳ ಭೂದೇವಿಕನ್ನಿಕೆಯನೊಯ್ಯುತಿರೆ ಕನಲಿ ಮನದಿಇನ್ನು ಅವನನು ಸೆಣಸಿ ಜಯಿಸುವವರನು ಕಾಣೆನೆನ್ನುತಲಿ ರೋಮಗಳನುಬ್ಬೆತ್ತುತತನ್ನ ಮುಂಗೋರೆಗಳ ಮಸೆದೊಡನೆ ರಕ್ಕಸನಬೆನ್ನಟ್ಟಿ ಬರಸೆಳೆದು ಸದೆದೊರಗಿಸಿಚೆನ್ನಾಗಿ ಧರಣಿಯನು ತಂದು ಸಲೆ ರಕ್ಷಿಸಿದೆಹನ್ನೆರಡು ಪೆಸರವನೆ ಶರಣೆಂಬೆನು||3||
ಹೇಮಕಶ್ಯಪನೆಂಬ ನಾಮಜನ ಸುತನೊರ್ವನಾ ಮಹಾಘನವೆಂದು ನೆನೆಯುತಿರಲುತಾಮಸದ ಖಳ ತನ್ನ ತನುಜನನು ಮಥಿಸುತಿರೆರಾಮನನು ತೋರೆಂದು ಬಾಧಿಸುತಿರೆಧೂಮಜ್ವಾಲೆಗಳೊಡನೆ ಭುಗುಭುಗಿಲು ಛಿಟಿಲೆನುತಆ ಮಹಾ ರಕ್ಕಸನ ಪೊಡೆಯ ಸೀಳಿಪ್ರೇಮದಲಿ ಪ್ರಹ್ಲಾದಗೊಲಿದು ಪಟ್ಟವನಿತ್ತೆಸಾಮಜಾರಿಯ ವದನ ಶರಣೆಂಬೆನು ||4||
ಬಲಿಯಧ್ವರದ ಸಾಲೆಗೊಂದು ವೇಷವನಾಂತುಸಲೆ ಬಂದು ಧರೆಯ ಮೂರಡಿಯ ಬೇಡೆಒಲಿದು ಇತ್ತಪೆನೆನಲು ಧಾರೆಯನೆರೆಯಲಸುರಕುಲಗುರುವು ಜುಳಿಗೆಯೊಳು ತಡೆದು ನಿಲಲುಸಲಿಲ ವರ್ಜಿತ ನಯನನನು ಮಾಡಿ ಆಕಾಶನೆಲವೆರಡು ಪಾದವನ್ನಳೆದ ಬಳಿಕತಲೆ ಮೇಲೆ ಇರಿಸೆನಲು ತಳಕಿಳಿಸಿ ಅವನ ಬಾ-ಗಿಲ ಕಾಯ್ದ ವಾಮನನೆ ಶರಣೆಂಬೆನು ||5||
ರೇಣುಕೆಯ ಬಸುರಿನಲಿ ಜನಿಸಿ ಪಿತನಾಜ್ಞೆಯನುಮಾಣಬಾರದು ಎಂಬ ಮತವ ಪಿಡಿದುಕ್ಷೂಣವಿಲ್ಲದೆ ತಾಯ ಶಿರವರಿದು ತಂದೆಯನುಪ್ರಾಣಹತ್ಯವ ಮಾಡಿದರ ಕುಲವನುಕ್ಷೋಣಿಗೆರಗಿಸಿ ಕಾರ್ತವೀರ್ಯಾರ್ಜುನನ ಮಡುಹಿಜಾಣತನದಲ್ಲಿ ಭೂದಾನಗಳ ಭೂಸುರರಕಾಣುತಲೆ ಕರೆಕರೆದು ಕೊಟ್ಟೆಯೈ ನೀನು ಪೂಬಾಣಜನಕನೆ ರಾಮ ಶರಣೆಂಬೆನು ||6||
ಸೀತೆಯನು ಕದ್ದು ಒಯ್ದವನ ಕೊಲ್ಲುವ ಭರದಿಭೂತಳದ ಕಪಿಗಳನು ಕೂಡಿಕೊಂಡುಸೇತುವೆಯ ಕಟ್ಟಿ ಶರನಿಧಿ ದಾಟಿ ಬರಲಾಗಭೂತಗಣ ಸಂತತಿಯು ನಡುನಡುಗುತಿರಲುಚೇತನದ ರಾವಣೇಶ್ವರ ಕುಂಭಕರ್ಣ ಸ-ತ್ತ್ವಾತಿಶಯ ರಕ್ಕಸರ ಇರಿದೊರಗಿಸಿಮಾತು ಲಾಲಿಸಿ ವಿಭೀಷಣಗೆ ಪಟ್ಟವನಿತ್ತದಾತ ರಘುನಾಥನೇ ಶರಣೆಂಬೆನು ||7||
ಶಕಟ ಕುಕ್ಕುಟ ಧೇನುಕಾಸುರರ ಪೂತನಿಯಬಕ ವತ್ಸಹಕ ವೃಷಾಸುರ ಮುಖ್ಯರಪ್ರಕಟದಿಂದರಿದು ಕರಿಯನು ಸೀಳಿ ತನಗೆ ಸಂ-ಮುಖರಾದ ಮಲ್ಲರನು ಇರಿದೊರಗಿಸಿಮುಕುರ ದಂತ್ಯದ ಹಮ್ರ್ಯದೊಳಗಿಂದ ಕಂಸನಪುಕಪುಕನೆ ತಿವಿದವನನಿರಿದೊರಗಿಸಿಸಕಲವೆಸೆದಿರ್ದ ಮಧುರಾಪುರವ ಉಗ್ರಸೇನಕಗಿತ್ತ ಕೃಷ್ಣನೇ ಶರಣೆಂಬೆನು ||8||
ಮೂರು ಪುರದಬಲೆಯರ ವ್ರತಗಳನೆ ಕೆಡಿಸಲಿಕೆಬೇರೊಂದು ಅಶ್ವತ್ಥ ವೃಕ್ಷವಾಗಿನಾರಿಯರ ವ್ರತಭಂಗಗೆಯ್ಯಲಾ ದೆಸೆಯಿಂದಊರುತ್ರಯವದು ತಿರುಗುವುದು ನಿಲ್ಲಲಾಗನೀರ ಮಸ್ತಕದಲ್ಲಿ ಧರಿಸಿದನ ಕರವಿಲ್ಲನಾರಿಯೊಳು ನಾರಾಯಣಾಸ್ತ್ರವಾಗಿಘೋರತನವೆತ್ತ ತ್ರಿಪುರದ ಕೀಲ ಪರಿದ ಮದನಾರಿ ಸಖ ಬುದ್ಧನೇ ಶರಣೆಂಬೆನು ||9||
ಮದವೆತ್ತ ರಕ್ಕಸರು ಮಹಿಯೊಳಗೆ ಹೆಚ್ಚಲುತ್ರಿದಶಾಂತ ನಡನಡನೆ ನಡುಗುತಿರಲುಬೆದರಬೇಡೆನುತ ಅಭಯವನಿತ್ತು ಮುದದಿಂದಸುಧೆಯೊಳಗೆ ಬಂದು ಜನಿಸಿಕುದುರೆವಾಹನನಾಗಿ ಕುಂಭಿನಿಯ ಮೇಲೆ ತನಗಿದಿರಾದ ರಾವುತರನಿರಿದೊರಗಿಸಿಮೊದಲ ಭಾಷೆಯನು ದಿವಜರಿಗಿತ್ತೆ ಬೇಗದಲಿಚದುರ ಕಲ್ಕ್ಯವತಾರ ಶರಣೆಂಬೆನು||10||
ಇಂತು ದಶ ಅವತಾರಗಳನೆತ್ತಿ ರಕ್ಕಸರಸಂತತಿಯನೊರಸಿ ಭೂಭಾರವಿಳುಹಿಕಂತುಪಿತ ತಿರುವೆಂಗಳೇಶ ತಿರುಮಲೆಯೊಳಗೆಚಿಂತಿಸುವ ಭಕ್ತರನು ಪಾಲಿಸುತಲಿದಂತಿರಾಜನ ಪೊರೆದು ದಾನವಾಡಿಗೆ ಬಂದುನಿಂತಾದಿಕೇಶವನೆ ಶರಣೆಂಬೆನು ||11||