ನುತಿಸಿ ಬೇಡುವೆ ವರವ

ನುತಿಸಿ ಬೇಡುವೆ ವರವ ಕರವ ಮುಗಿದು
ಸತತ ಲಕುಮಿಪತಿಯ ಭಕುತಿ ಒಂದೇ ಇರಲಿ

ಮದನಶರ ತಿಮಿರಾರ್ಕ ಸುಜನವಾರ್ಧಿಗೆ ಪೂರ್ಣ
ಬದರಮಂಗಳಗಾತ್ರ ಬಲು ಸುಲಭ
ಬುದ್ಧನಾಗಿ ಶಿಷ್ಯರ್ಗೆ ಸುಧಿಯ ಪೇಳುವ ಮೌನಿ
ಎದಿರಿಲ್ಲ ನಿಮಗೆಲ್ಲಿ ಗುರುವೆ ಸುರತರುವೆ ||1||

ಅಂದವಾದ ಕಾವ್ಯ ಸಾಮಥ್ರ್ಯಧೀರುವೆ
ಮಂದಹಾಸದಿ ನೋಳ್ಪ ಭಕುತ ಜನರ
ಒಂದೊಂದು ಪದಾರ್ಥ ಪಿಡಿವ ಗಂಟಲೆ ರಾಹು
ನಂದತೀರ್ಥರ ಮತಕೆ ಕೇತುಸ್ಥಾನಿಯ ನಿತ್ಯ ||2||

ವಾದಿಗಳೆದೆಯ ಶೂಲ ಸತ್ಯಪ್ರಿಯ ಕರಜಾತ
ಸಾಧು ಸಜ್ಜನಗೇಯ ಸತ್ಯಬೋಧ
ಮೋದಿ ಹಯವದನ ರಾಮ ವಿಜಯವಿಠ್ಠಲ
ನಾದಿದೈವವೆಂದು ಎಣಿಸುವ ಜಪಶೀಲ ||3||

Leave a Comment

Your email address will not be published. Required fields are marked *