ನೀನೋಲಿದುದ್ದಕ್ಕೀ ಇಹ ಸೌಖ್ಯವೇಯಿನ್ನು
ನಾನೊಲ್ಲೆ ನಾನೊಲ್ಲೆ ಸರ್ವೇಶಾ
ನಿನ್ನನುರಾಗದಿ ಗತಿಯೆಂದು ನಂಬಿದ
ಮಾನವನೊಡನೆ ನೀನಾಡುವದೆಲ್ಲಾ
ಷಡುರಸ ನಾನಾ ಸುಭೋಜನವ ಬಿಡಿಸಯ್ಯ ದಾನವ ಭಂಜನ
ಒಡಲಿಗೋಸುಗ ನಿನ್ನನು ಸೇವಿಸುವೆ
ಒಡೆಯ ದಾಂಟಿಸೊ ಭವಕಡಲವೇಗ ಜ್ಞಾನ
ತೋರಿಸದಿರೆ | ದಿವ್ಯಾಂಬರಗಳ
ಉಡಿಸಿ ಸ್ವರ್ಣಾಭರಣಗಳ ತೊಡಿಸಿ | ಬರಿ ಮಾತಿನಲಿ ಮೊರೆ
ಯಿಡುವೆನೊ ವಾಕ್ಕಾಯದಿಂದಲೀ ||1||
ಜನರು ಜನಪರಿಂದ ಮನ್ನಣೆ ಸ್ವಲ್ಪ |
ಎನಗೆ ಹತ್ತದು ಕಾಣೊ ನಿನ್ನಾಣೆ ||
ಮನುಜನ ಸೈಸಿದವನ ಬಾಯೆನೆ ಬರೆವಾ |
ಹನತೇರು ಮೊದಲಾದ | ಘನ ವಿಭವ ದೊರೆಯದೆ |
ಜನುಮದಲಿ ಬಂದದಕೆ ಮಹಾ ಸಾಧನವಿಧಾರಿ ತೋರಿಸಿ |
ನಿನ್ನ ದಾಸನೆನಿಸದೆ | ನಿಸ್ಸಾರವೆಣಿಸಿ ತೋರ್ಪ ದೇವ ಸೈಸೈ ||2||
ಕಂಡಕಂಡಲಿಯೆನ್ನ ತಿರಿಗಿಸಿ ಬಹು
ಥಂಡ ಥsÀಂಡದಲೆನ್ನ ಮರುಗಿಸಿ |
ಮಂಡಲದೊಳು ಪ್ರಚಂಡನೆನಿಸದಿರು |
ಉಂಡ ಪರಾನ್ನಕೆ ದಂಡನೆ ಬಹಳಲ್ಲಿ |
ತೊಂಡ ನಾನಯ್ಯ ಕರುಣಸಾಗರ |
ಖಂಡ ಮತಿಯನು ಕೊಡದೆ ಮುಕ್ತರ |
ಹಿಂಡಿನೊಳು ಕೂಡಿಸುವದೆಮ್ಮನು |
ಅಂಡ ಜಾಂಸಗ ವಿಜಯವಿಠ್ಠಲಾ ||3||