ನೀನೇನ ಮಾಡಲಾಪಿಯೋ

ನೀನೇನ ಮಾಡಲಾಪಿಯೋ ಲಕುಮೀಶಾ |
ನಾನೀಗ ಪಡೆದದ್ದು ಉಣದಲೆ ಪೋಗುವದೆ |

ಲೋಕದೊಳಗೆ ನಿನ್ನ ಕೊಂಡಾಡಿ ಪ್ರತಿದಿನ
ಏಕ ಭಕುತಿಲಿ ಸರ್ವೋತ್ತಮನೆಂದು
ಏಕಾಂತ ಭಜಿಪÀ ಮನುಜಗಾದರು ಬರೆದ
ವಾಕು ತಪ್ಪುವದೇನೋ ಅಜನು ನಿರ್ನೈಸಿದ||1||

ಮುಂದೆ ಕೊಡುವ ಫಲಕೆ ಕರ್ತ ನೀನಲ್ಲದೆ
ಹಿಂದಣಿಂದಲಿ ಬರುವ ಕಾಲಾಖ್ಯಕೆ ಒಂದು
ಬಿಂದು ಮಾತ್ರ ತೊಲಗಿಪ ನಡತಿ ಕಾಣೆ
ಅಂದಲ್ಲಿ ಏನು ಫಲ ಎನ್ನ ಕರ್ಮವಷ್ಟೇ ||2||

ಇದ್ದದೊಂದು ಮರಿ ಅಡಗಾಣಿಸಿ ಬಂದು
ಹದ್ದು ತಾ ವೈಯಲು ಆ ಕುರುಬ ಯೆಲ್ಲಿ
ಇದ್ದರೇನು ಭಯ ವಿಜಯವಿಠ್ಠಲ ನಿನ್ನ
ಪೊದ್ದಿದವಗಾದರು ಅನುಭವಿಸದೆ ಬಿಡದು||3||

Leave a Comment

Your email address will not be published. Required fields are marked *