ನೀನು ಹೋಗೆಂದಡೆ ಹೋದೆನಯ್ಯಾ.

ನೀನು ಹೋಗೆಂದಡೆ ಹೋದೆನಯ್ಯಾ.
ನೀನು ಹುಟ್ಟೆಂದಡೆ ಹುಟ್ಟಿದೆನಯ್ಯಾ.
ನೀನು ಬೆಳೆಯೆಂದ ಠಾವಿನಲ್ಲಿ ಬೆಳೆದೆನಯ್ಯಾ.
ನೀನು ಹಿಡಿಯೆಂದವರ ಮನೆಯ ಹೊಕ್ಕೆನಯ್ಯಾ.
ನೀನು ಮಾಡೆಂದ ಕೆಲಸವ ಮಾಡಿಕೊಂಡು
ನಿಮ್ಮ ಬೆಸಲಾದ ಮಗಳಾಗಿರ್ದೆ ಕಾಣಾ ಚೆನ್ನಮಲ್ಲಿಕಾರ್ಜುನಾ.

Leave a Comment

Your email address will not be published. Required fields are marked *