ನನ್ನಿಂದ ನಾನೇ ಜನಿಸಿ ಬಂದೆನೆ

ನನ್ನಿಂದ ನಾನೇ ಜನಿಸಿ ಬಂದೆನೆ ದೇವಎನ್ನ ಸ್ವತಂತ್ರವು ಲೇಶವಿದ್ದರು ತೋರು
ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆನಿನ್ನದು ತಪ್ಪೋ ನನ್ನದು ತಪ್ಪೋ ಪರಮಾತ್ಮ

ಜನನಿಯ ಜಠರದಲಿ ನವಮಾಸ ಪರಿಯಂತಘನದಿ ನೀ ಪೋಷಿಸುತಿರೆ, ನಾನುಜನಿಸಲಾರೆನು ಎನೆ ಜನಿಸೆಂದಿಕ್ಕಳದಿಂದವನಜಾಕ್ಷ ನೂಕಿದವನು ನೀನಲ್ಲವೆ ||1||

ಎಲವುಗಳ ಜಂತೆ ಮಾಡಿ ನರಗಳ ಹುರಿಯಿಂಹೊಲಿದು ಚರ್ಮವ ಹೊದಿಸಿ ದೇಹದೊಳುಮಲಮೂತ್ರಕೆ ಹೊರದಾರಿ ನಿರ್ಮಿಸಿ ಹೃದಯದಲಿನೆಲಸಿ ಚೇತನವನಿತ್ತವ ನೀನಲ್ಲವೆ ||2||

ಜನಿಸಿದಾರಭ್ಯದಿಂದ ಇಂದಿನ ಪರಿಯಂತಘನಘನ ಪಾಪ ಸುಕರ್ಮಂಗಳನುಮನಕೆ ಬೋಧಿಸಿ ಮಾಡಿಸಿ ಮುಂದೆ ಇದನೆಲ್ಲಅನುಭವಿಸುವುದು ಜೀವನೊ ನೀನೊ ದೇವ ||3||

ಅಂಧಕನ ಕೈಲಿ ಕೋಲಿತ್ತು ಕರೆದೊಯ್ಯುವಾಮುಂದಾಳು ತಪ್ಪಿ ಗುಂಡಿಗೆ ಕೆಡಹಲುಅಂಧಕನ ತಪ್ಪೊ ಅದು ಮುಂದಾಳಿನ ತಪ್ಪೊಹಿಂದಾಡಬೇಡ ಎನ್ನೊಳು ತಪ್ಪಿಲ್ಲವೊ ||4||

ಕಂದನ ತಾಯಿ ಆಡಿಸುವಾಗ ಅದು ಪೋಗಿಅಂದಿ ಬಾವಿಯ ನೋಡುವುದನು ಕಂಡುಬಂದು ಬೇಗನೆ ಬಾಚಿ ಎತ್ತಿಕೊಳ್ಳದಿದ್ದರದುಕಂದನ ತಪ್ಪೊ ಮಾತೆಯ ತಪ್ಪೊ ಪರಮಾತ್ಮ ||5||

ಭಾರ ನಿನ್ನದೊ ದೂರು ನಿನ್ನದೊ ಕೃಷ್ಣನಾರಿ ಮಕ್ಕಳು ತನುಮನ ನಿನ್ನದಯ್ಯಕ್ಷೀರದೊಳಗದ್ದು ನೀರೊಳಗದ್ದು ಗೋವಿಂದಹೇರನೊಪ್ಪಿಸಿದ ಮೇಲೆ ಸುಂಕವೆ ದೇವ ||6||

ನ್ಯಾಯವಾದರೆ ದುಡುಕು ನಿನ್ನದೊ, ರಂಗ, ಮತ್ತ-ನ್ಯಾಯವಾದರೆ ಪೇಳುವರಾರುಮಾಯಾರಹಿತ ಕಾಗಿನೆಲೆಯಾದಿಕೇಶವಕಾಯಯ್ಯ ತಪ್ಪನೆಣಿಸದೆ ದೇವ ||7||

Leave a Comment

Your email address will not be published. Required fields are marked *