ನಂಬಬೇಡಿ ಸಿರಿಯ ತನ್ನದೆ

ನಂಬಬೇಡಿ ಸಿರಿಯ ತನ್ನದೆ ?
ನಂಬಬೇಡಿ ಸಿರಿಯು ತನ್ನದೆಂಬ ನಿಮಿಷದೊಳಗೇನಹುದೊಡಂಬತನವಿದೇಕೆ ಹರಿಯ ಪಾ-ದಾಂಬುಜವನು ಭಜಿಸಿ ನರರು

ಜಲಧಿಯನ್ನು ಪೀರ್ದ ಮುನಿಯಜನನಿ ಪೆಸರ್ಗೆ ಕಿವಿಯನಾಂತಖಳನ ಬಲವ ನಂಬಲಾತುತಲೆಯ ತವಿಸಿದವನ ಸಿರಿಯುಗಳಿಗೆಯೊಳಗೆ ಕೀಲು ಸಡಿಲದೆ – ಎಣಿಕೆ ಇಲ್ಲದದಳವು ಯಮನನಗರಿಗೈದದೆ – ದೈವಕೃಪೆಯುತೊಲಗಲೊಡನೆ ದಾಳಿವರಿಯದೆ – ಕೇಳಿ ಜನರೆ ||1||

ಅಂಧರಾಯನಾತ್ಮಜರು ಮ-ದಾಂಧರಾಗಿ ಮಲೆತು ಗೋತ್ರಬಂಧುಗಳನು ಲೆಕ್ಕಿಸದೆ ಇಭ ಪುರಿಯನಾಳಿದ ನೃಪತಿ ಕೌರವೇಂದ್ರನರಸುತನವು ತೊಡೆಯದೆ – ಸಕಲ ಸೈನ್ಯಬಂಧು ಬಳಗ ರಣದಿ ಮಡಿಯದೆ – ಶೌರಿ ಮುನಿಯಲಂದು ಅವನ ಪದವು ಮುರಿಯದೆ – ಕೇಳಿ ಜನರೆ||2||

ಧರಣಿಯ ಮುನ್ನಾಳ್ದ ನಹುಷಸಗರರೆನಿಪ ಭೂಪತಿಗಳುಸಿರಿಯ ಜಯಿಸಲಿಲ್ಲ – ಮಿಕ್ಕನರರ ಪಾಡಿದೇನು ನೀವುಬರಿದೆ ಭ್ರಾಂತರಾಗಬೇಡಿರೊ – ಎಂದಿಗಾದರುಸ್ಥಿರವಿದಲ್ಲವೆಂದು ತಿಳಿಯಿರೊ – ಶ್ರೀ ಕಾಗಿನೆಲೆಯವರದ ಕೇಶವನನು ಭಜಿಸಿರೊ – ಕೇಳಿ ಜನರೆ ||3||

Leave a Comment

Your email address will not be published. Required fields are marked *