ಧೀರ ಮಾರುತಿ

ಧೀರ ಮಾರುತಿ ಗಂಭೀರ ಮಾರುತಿ
ವೀರ ಮಾರುತಿ ಸಮರಶೂರ ಮಾರುತಿ ||
ಶಕ್ತ ಮಾರುತಿ ರಾಮಭಕ್ತ ಮಾರುತಿ
ಗೀತ ಮಾರುತಿ ಸಂಗೀತ ಮಾರುತಿ ||
ಯೋಗಿ ಮಾರುತಿ ಪರಮ ತ್ಯಾಗಿ ಮಾರುತಿ
ತ್ಯಾಗಿ ಮಾರುತಿ ವಿರಾಗಿ ಮಾರುತಿ ||
ಪವನ ಮಾರುತಿ ಲಂಕಾದಹನ ಮಾರುತಿ
ಮೌನಿ ಮಾರುತಿ ಮಹಾಜ್ಞಾನಿ ಮಾರುತಿ ||
ದಕ್ಷ ಮಾರುತಿ ಲಕ್ಷ್ಮಣರಕ್ಷ ಮಾರುತಿ ಸದಯ
ಮಾರುತಿ ರಾಮಹೃದಯ ಮಾರುತಿ ||

Leave a Comment

Your email address will not be published. Required fields are marked *