ಧರ್ಮವೆಂದೆನಿಪ ಮಾರ್ಗವನು ಬಿಟ್ಟುಕರ್ಮವೆಂದೆನಿಪ ಕಾನನವ ಪೊಕ್ಕುದುರ್ಮಾರ್ಗದಲಿ ನಡೆದವಗೆ ಘೋರವ್ಯಾಧಿಕರ್ಮಪಾಕದಲಿ ಸಾರುತಿದೆ ಜಗದಿ
ಹರಿಹರ ವಿಭೇದಗೈದವಂಗೆ ದಂತಚ್ಯುತವುಗುರುದೈವಗಳ ನಿಂದೆಗೈದವಗೆ ಉನ್ಮದವುಪರಸತಿಯ ಕಾಮಿಸಿದವಗೆ ಪಾಂಡು ರೋಗವುಕೆರೆಗಳನು ಒಡೆಸಿದಾತಗೆ ಶೀತಜ್ವರವುಹಿರಿಯರನು ಜರಿದವಗೆ ಪೀನಾಶಿ ರೋಗವುಧರೆಯನಳಿಸಿದವಗೆ ಸರ್ವಾಂಗ ಪರಿಶ್ವೇತವುಪುರ ಅಗ್ರಹಾರ ಕೆಡಿಸಿದವಗೆ ರಾಜರೋಗವೆಂದುಅರಿವುದು ಸಕಲ ಜನರು ||1||
ಕಥೆ ಪುರಾಣಗಳ ಹಳಿದವಗೆ ಕಾಸಶ್ವಾಸಮತಭೇದವನು ಮಾಡಿದವಗೆ ಮೂಲವ್ಯಾಧಿಪಿತಮಾತೆಯರ ಸಲಹದವಗೆ ಗಂಡಾಮಾಲೆಯತಿಗಳನು ನಿಂದಿಸಿದವಗೆ ಸನ್ನಿಪಾತ – ಪರಸತಿಯರಿಗೆ ಅಳುಪಿದಾತಗೆ ಮೂತ್ರ ಕೃಚ್ರಪತಿವ್ರತೆಯರ ಪೀಡಿಸಿದವಗೆ ಅತಿಸಾರಮತಿಗೇಡಿ ಮೂರ್ಖನಿಗೆ ಕ್ಷಯರೋಗ – ಇದುಕ್ಷಿತಿಯೊಳಗೆ ಸಿದ್ಧಾಂತ ||2||
ಶಿಶು ಹತ್ಯೆ ಗೈದವಗೆ ಕುಕ್ಷಿಶೂಲೆಪಶುಗಳನು ಮರ್ದಿಸಿದವಗೆ ಪ್ರಮೇಹವುಉಸಿರಲೇಕಿನ್ನು ಸ್ವಾಮಿದ್ರೋಹಿಗೆ ಬಹುಮೂತ್ರಪುಸಿಯನಾಡುವ ಪುರುಷಗೆ ರಕ್ತ ಕಾಳಿಹಸಿದವರಿಗನ್ನವಿಕ್ಕದವಗೆ ಆಮ್ಲಪಿತ್ತವೃಷಭವನು ಒದ್ದವಗೆ ಬಿಗರುವಾತಮುಸುಕುವುದು ವಿಶ್ವಾಸಘಾತಕಗೆ ನರರೋಗಪುಸಿಯಲ್ಲವಿದು ಕೇಳಿ ಜನರು ||3||
ಕೊಟ್ಟು ಭಾಷೆಯ ತಪ್ಪಿದವಗೆ ಉಪಜಿಹ್ವೆಕೊಟ್ಟು ತುಪ್ಪಿದವಗೆ ಕರಕಂಪನಕೊಟ್ಟರೂ ಕೊಡಲಿಲ್ಲವೆಂಬವಗೆ ಉದರರೋಗಕೊಟ್ಟವರಿಗೆರಡು ಬಗೆವಗೆ ಮೇಹರೋಗಅಷ್ಟಮದದಿಂದ ಮೆರೆವವಗೆ ಬೆರಗಿನ ರೋಗಬಟ್ಟೆಯೊಳು ಮುಳ್ಳು ಹರಡಿದವಗೆ ನೇತ್ರವ್ಯಾಧಿಹುಟ್ಟುವುದು ಕಂಕಣ ಕಂಟಕಗೆ ಕುಷ್ಠರೋಗಕಟ್ಟಿಟ್ಟ ಬುತ್ತಿ ಇದು||4||
ಹಿಂದೆ ಮಾಡಿದ ಧರ್ಮ ಕರ್ಮ ಬಲ್ಲವರಾರುಎಂದು ಮಂದಮತಿಗಳಾಗಿ ಕೆಟ್ಟಳಿಯದಿರೆಹಿಂದಣದೆಲ್ಲವೂ ಬಹದೆಂಬುದಕೆ ಸಾಕ್ಷಿಇಂದು ಕಣ್ಣೆದುರೆ ಜಗದೊಳಗೆ ತೋರುತಿಹುದಿಗೊಚಂದದಲಿ ತಾಯಿ ಮಗುವಿಗೆ ಮೊಲೆಯ ಹಾಲುಣಿಸುವಂದದಲಿ ಉಣಿಸಿದಲ್ಲದೆ ಬಿಡದು ಮರೆಯದಿರಿಕಂದರ್ಪಪಿತ ಸೊಂಡೆಕೊಪ್ಪದಾದಿಕೇಶವನಮುಂದರಿತು ಭಜಿಸಿ ಮುಕ್ತಿಯ ಪಡೆಯಿರಣ್ಣ||5||