ಜಯರಾಯರ ನೋಡಿರೋ ಸಜ್ಜನರೆಲ್ಲ

ಜಯರಾಯರ ನೋಡಿರೋ ಸಜ್ಜನರೆಲ್ಲ
ಜಯರಾಯರ ನೋಡಿರೋ
ಜಯರಾಯರ ನೋಡಿ ಜಪಿಸಿ ಮನದಿ ಪಾಡಿ
ಜಯವಾಗುವುದು ನಿಮಗೆ
ಭಯನಾಶ ಸಂತತ

ದುರುಳಮತವೆಂಬೊ ಕರಿಗೆ ಅಂಕುಶವಿತ್ತು
ಸುರಸಾದ ಗ್ರಂಥ ಆನಂದಮುನಿ
ವಿರಚಿಸಿ ಇರಲಾಗಿ ಪರಮಭಕ್ತಿಯಿಂದ ವಿ
ಸ್ತರ ಮಾಡಿದಾ ಕರದ ಕನ್ನಡಿಯಂತೆ ||1||

ವಾದಿಗಳನ್ನೆಲ್ಲಾ ಜೈಸಿ ಡಂಗುರ ಹೊಯ್ಸಿ
ಭೇದಾರ್ಥe್ಞÁನ ಸತ್ಯವೆನಿಸಿ
ಈ ಧರಿಯೊಳಗೆ ಹರಿಪರ ದೈವವೆಂದು
ಸಾಧಿಸಿ ಉದ್ದಂಡವಾದ ಗುರುತಿಲಕ ||2||

ಅಕ್ಷೋಭ್ಯತೀರ್ಥರ ಕರದಿಂದ ಜನಿಸಿ
ಮೋಕ್ಷಕೆ ಜಯ ಪತ್ರಿಕೆ ಕೊಡಿಸಿ
ಪಕ್ಷಿವಾಹನ ಸಿರಿ ವಿಜಯವಿಠ್ಠಲನನ್ನ
ನೀಕ್ಷಿಸುವದಕೆ ಉಪದೇಶ ಕೊಡುವ ಋಷಿ
ಶ್ರೀ ಮಧ್ವೇಶಾರ್ಪಿತವು||3||

Leave a Comment

Your email address will not be published. Required fields are marked *