ಗೋತ್ರ ಪ್ರವರ ಉಚ್ಚಾರಣೆ ವಂದೇ ಕಾಣೊ
ಧಾತ್ರಿಯೊಳಗೆ ತಂದೆ ಮಕ್ಕಳು ಮಾಡುವ ಕಾ |
ಲತ್ರಯದ ಸಂಧ್ಯಾವೆಲ್ಲ ಎಂದಿಗೂ ಭೇದವಿಲ್ಲಾ
ಪುತ್ರನಿಗೆ ಪಿತನು ಆನಾರಂಭದಿ ನಾಮ
ಮಾತ್ರ ನುಡಿಸುವ ಬುದ್ಧಿ ಪೇಳಿ |
ಚಿತ್ರವ ಗೋಡೆಯ ಮೇಲೆ ರಚಿಸಿರಲು ನೋಡಿ
ಸ್ತೋತ್ರ ಮಾಡಿದರೆ ಯೇನಾಹದೋ||1||
ಚಿತ್ರಿಕ ಬಲು ವಿವೇಕ ಉಳ್ಳವನೆಂದು
ಪಾತ್ರರ ಮುಂದೆ ಕೊಂಡಾಡಿದಂತೆ |
ಧಾತ್ರಿಯೊಳಗೆ ನಮ್ಮ ಪುರಂದರದಾಸರ
ಸ್ತೋತ್ರ ಮಾಡಿರಯ್ಯ ಸಚಲರಾಗೀ ||2||
ಗಾತ್ರ ನಿರ್ಮಲವಕ್ಕು ಯೆಂದೆಂದಿಗೆ ದಿವ್ಯ |
ನೇತ್ರದಿಂದಲಿ ಹರಿಯ ಸರಿದರುಶನಾ |
ರಾತ್ರಿಂಚರೆಯೆಂದು ಪೆಸರುಳ್ಳವು ಕುಮುದ
ಮಿತ್ರಗೆ ಸರಿಯೇನು ಉಳದಾದವು ||3||
ಸ್ತೋತ್ರಾಭರಣವಾದ ದಾಸರ ಶವನಕ್ಕೆ ಅ
ನ್ಯತ್ರ ನುಡಿವದು ಧಿಕ್ಕರಿಪದು |
ನಿತ್ರಾಣವಾದ ಮನುಜ ಹಿರಿಯರ
ವಿತ್ತದಿಂದ ಯಾತ್ರಿ ಮಾಡಿ ಪುಣ್ಯ ಘಳಿಸಿದಂತೆ ||4||
ಸ್ತೋತ್ರ ಮಿಟಮ್ಯಾಲೆ ಪಂಗ್ತಿ ಹಾಕಿ ಕೊಡಲು
ಮಾತ್ರೆಗಳ ನೋಡಿ ಬರದಂತೆ ವೋ |
ಶತ್ರು ಸಂಹಾರ ನಮ್ಮ ವಿಜಯವಿಠ್ಠಲನಂಘ್ರಿ ಶತ
ಪತ್ರ ಬಲ್ಲವರಿಗೆ ಯಿದೆ ವಿಸ್ತಾರ ನಿರ್ಮಾಣ ||5||