ಒಲಿದವಳ ಬಿಡುವುದು ಧರ್ಮವಲ್ಲ

ಒಲಿದವಳ ಬಿಡುವುದು ಧರ್ಮವಲ್ಲ |
ಚಲುವ ನಿನಗಾಗಿ ನಾ ಯೇಸು ಕಾಲಕೆ ತಪವಿದ್ದೆ

ತಂದೆತಾಯಿಗಳಲ್ಲಿ ಪುಟ್ಟಿದಾಕ್ಷಣದಲ್ಲಿ |
ಅಂದೆ ನೇಮಿಸಿದರು ಪೆಸರನಿಟ್ಟು |
ಸಂದೇಹಗೊಳದಿರು ಮೈಲಿಗೆಯವಳೆಂದು |
ಬಂದ ಪ್ರಾಣವÀ ನೋಡು ಬರಿದೆ ಪೇಳುವಳಲ್ಲ ||1||

ಕನ್ಯಾವಸ್ಥಿಯಲಿಂದ ನಿನ ನಿನ್ನ ಧ್ಯಾನವಲ್ಲವೇ |
ಅನ್ಯಪುರುಷರಾಪೇಕ್ಷೆ ಮಾಡಲಿಲ್ಲ |
ಅನ್ಯಾಯವೇನು ಆಗಲಿ ಪೋಗುವರೇನೊ |
ಅನ್ಯಥಾ ಈ ನುಡಿಗೆ ನಿಜಕೆ ನಿಲ್ಲುವೆ ನಾನು ||2||

ಮಲದಲ್ಲಿ ಮೂರುದಿನ ಪೋಗಾಗಿ ಹೋಗಿದ್ದೆ |
ಬಲು ಶುಚಿಯಾದೆನೊ ಶುದ್ಧ ಜಲದಿ |
ಘಳಿಗೆ ಕಡೆದರೆ ಎನ್ನ ಪ್ರಾಣನಿಲ್ಲವೊ |
ಎನ್ನನಗಲಿ ಮೈ ತಪ್ಪಿಸಿ | ದೂರ ಕರೆದೊಯ್ಯೊ ಕರುಣದಲಿ ||3||

ನಗೆಗೇಡಿ ಮಾಡದಿರು ಜಗದೊಳಗೆ ಇಪ್ಪವಳ |
ಸೊಗಸಿಗನೆ ಸರಸವಾಡುವನೆ ಬಾರೊ |
ಮಗುಳೆ ಮತ್ತೊಬ್ಬರು ಮೆಚ್ಚಿದರೆ ಇದೆ ಪಾಟು |
ಮಗುಳೇನು ಹೊಸ ಪರಿಯು ತೋರುವುದು ನೋಡಿದರೆ ||4||

ಕಂಡ ಕಾಣದ ಹಾಗೆ ಮಾತನಾಡಿದಿರೆನ್ನ |
ಅಂಡೊಲಿವ ಖ್ಯಾತಿ ಎಂದಿಗೆ ತೀರದೂ |
ಕುಂಡಲಿಗಿರಿವಾಸ ವಿಜಯವಿಠ್ಠಲ ವೆಂಕಟ |
ಹಿಂಡು ಬಂಧುಗಳಿದ್ದರೇನು ಮಾನವನು ತೊರೆದೆ ||5||

Leave a Comment

Your email address will not be published. Required fields are marked *