ಏನು ಇಲ್ಲದ ಎರಡು ದಿನದ ಸಂಸಾರ

ಏನು ಇಲ್ಲದ ಎರಡು ದಿನದ ಸಂಸಾರಜ್ಞಾನದಲ್ಲಿ ದಾನಧರ್ಮವ ಮಾಡಿರಯ್ಯ

ಹಸಿದು ಬಂದವರಿಗೆ ಅಶನವೀಯಲು ಬೇಕುಶಿಶುವಿಗೆ ಪಾಲ್ಬೆಣ್ಣೆಯನುಣಿಸಬೇಕುಹಸನಾದ ಭೂಮಿಯನು ಧಾರೆಯೆರೆಯಲು ಬೇಕುಪುಸಿಯಾಡದಲೆ ಭಾಷೆ ನಡೆಸಲೇ ಬೇಕು1

ಕಳ್ಳತನಗಳ ಮಾಡಿ ಒಡಲ ಹೊರೆಯಲು ಬೇಡಕುಳ್ಳಿರ್ದ ಸಭೆಯೊಳಗೆ ಕುತ್ಸಿತವು ಬೇಡಒಳ್ಳೆಯವ ನಾನೆಂದು ಬಲು ಹೆಮ್ಮೆಪಡಬೇಡಬಾಳ್ವೆ ಸ್ಥಿರವೆಂದು ನೀ ನಂಬಿ ಕೆಡಬೇಡ 2

ದೊರೆತನವು ಬಂದಾಗ ಕೆಟ್ಟುದ ನುಡಿಯಬೇಡಸಿರಿ ಬಂದ ಕಾಲಕ್ಕೆ ಬಲು ಮೆರೆಯಬೇಡಸಿರಿವಂತ ಶ್ರೀ ಕಾಗಿನೆಲೆಯಾದಿಕೇಶವನಚರಣ ಕಮಲವ ಸೇರಿ ಸುಖಿಯಾಗು ಮನುಜ 3

* ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.

Leave a Comment

Your email address will not be published. Required fields are marked *