ಎಷ್ಟು ಪ್ರೀತಿಯೊ ಮನಕೆ

ಎಷ್ಟು ಪ್ರೀತಿಯೊ ಮನಕೆ ಎಷ್ಟು ಪ್ರೀತಿಯೊ
ಇಷ್ಟವೆಂದು ತಿಳಿದು ಈ ಕಷ್ಟ ಸಂಸಾರ ಹೊರುವುದು

ಹಸಿವು ತೃಷೆಯು ಶೋಕ ಮೋಹ ಅಸುವಗೊಂಬ ಜನನ ಮರಣವಿಷ ಸಮಾನವಾದ ಬಹಳ ವ್ಯಸನ ಮೆರವಣಿಮುಸುಕಿ ಕವಿವ ವ್ಯಾಘ್ರದಂತೆ ಅಡಗಿ ಮುಪ್ಪುಗೊಂಬ ರೋಗವಿಷಯದೊಳಗೆ ಕ್ಲೇಶಪಟ್ಟು ವಿಷಯದಿಚ್ಛೆ ಬಿಡದ ಮನಕೆ ||1||

ನೀರಗುಳ್ಳೆ ಎನಿಪ ಕಣ್ಣ ನೀರಜಾಕ್ಷಿ ಎಂದು ಮತ್ತೆಸೋರುವ ಜಘನ ಕರಿಯ ಕುಂಭ ಸುರಿವ ಶ್ಲೇಷ್ಮದಮೋರೆ ಚಂದ್ರಬಿಂಬ, ಮಾಂಸವಿಕಾರವಾದ ಕುಚವ ಕನಕಕಲಶಸಾರವೆಂದು ನರಕರೂಪಿನ ನಾರಿಯರಿಗೆ ಭ್ರಮಿಸಿ ಬಾಳ್ವುದು||2||

ಅಸ್ಥಿ ಚರ್ಮ ರಕ್ತ ಮಾಂಸ ವಿಸ್ತರವಾದ ಹೇಯ ಮಧ್ಯಮೆವಸ್ತು ಏರುತಿಳಿಯುತುದಯ ಅಸ್ತಮಾನದಿರಕ್ತ ಕುಸುಮಗಂಧಮಾಲೆ ಕಸ್ತೂರಿಯನು ಪೂಸಿಕೊಂಡುವಸ್ತ್ರ ಒಡವೆ ಇಟ್ಟು ಬಹಳ ಶಿಸ್ತು ನರಕಿಯೆನಿಸಿ ಮೆರೆವುದು||3||

ಬೇಯದಿರುವ ಹಸಿಯ ಬಿಂದಿಗೆ ತೋಯ ಹಿಂಗುವಂತೆ ಸಾಕ್ಷಿ ಆಯುಷ್ಯವನರಿಯದಿರುವ ಕಾಯ ಸೌಖ್ಯದಿಆಯಾಸಪಟ್ಟು ಗಳಿಸಿದರ್ಥ ಹೇಯವೆನದೆ ಭೋಗಿಸುತ್ತಬಾಯ ಸವಿಯನುಂಡು ಕಡೆಗೆ ನಾಯ ಸಾವು ಸಾಯೋ ಬಾಳಿಗೆ ||4||

ಮನ್ನಿಸಿ ಗುರುಹಿರಿಯರುಕ್ತಿಯನ್ನು ಕೇಳದೆ ಕಿವುಡುಗೆಟ್ಟುಜೊನ್ನೆಯ ತುಪ್ಪ ಅನ್ನ ಒಲ್ಲದೆ ಎಲುವು ಮಾಂಸವನ್ನು ತಿಂಬಕುನ್ನಿಯಾದೆನಯ್ಯ ಕೃಷ್ಣ ನಿನ್ನ ಮಾಯದೊಳು ಸಿಲ್ಕಿದಎನ್ನನುದ್ಧರಿಸೊ ಸುಪ್ರಸನ್ನ ಆದಿಕೇಶವ||5||

Leave a Comment

Your email address will not be published. Required fields are marked *