ಎಲ್ಲೊ ಎಲ್ಲೊ ಎನ್ನ ಸಾಲವೆತ್ತದೊ |
ನಿಲ್ಲೊ ನಿಲ್ಲೊ ನಿನ್ನ ಕಂಡ ಮ್ಯಾಲಕೆ ಬಿಡೆ
ಮೀನ ನಡೆದ ಹೆಜ್ಜೆಗಳು ಕಾಣದಂತೆ ಪೋಗಿ ನಡಗಿದೆ |
ಬೆಟ್ಟದಡಿಯ ಅಂದು ಒಡನೆ ಮಣ್ಣುಕಚ್ಚಿ ಬಾಯಿದೆರದು ಆ |
ರ್ಭಟಿಸಿದರೆ ನಿನ್ನ ಪೋಗಗೊಡುವೆವೇನೊ ||1||
ಬಲು ಉದ್ದ ಬೆಳೆದರೆ ನ್ಯಾಯದಿ ಸೋಲಿಸಿ |
ಹೆಗ್ಗಲಿದಾ ಗಿಡದ ಬೇರು ಕಡಿಸುವೆನೊ |
ಕಲಕಾಲಾ ಉಪವಾಸ ಮಾಡಲು ನಮಗೇನು |
ಕಳವು ಹಾದರದಲ್ಲಿ ನಿಸ್ಸೀಮ ಪುರುಷನೇ ||2||
ಮಾಣಿಯ ತೋರಿಸಿದರೆ ನಿನಗಾರುರಂಜೋರೋ |
ಪಾಣಿಯೊಳಗೆ ಖಡ್ಗ ಇದ್ದರಂಜೆ |
ಕಾಣಿ ಪಾದಿದ್ದರೆ ಹಿಂದೆ ಸುಮ್ಮನಿದ್ದೆ |
ಜಾಣತನವೇನೊ ವಿಜಯವಿಠಲ ಇಂದು ||3||