ಎಲ್ಲಿ ಅರಸುವೆ ನೀನು ಓ ನನ್ನ ಕಿಂಕರನೆ
ನಿನ್ನ ಬಳಿಯೇ ನಾನು ವಾಸಿಸಿರುವೆ|
ನಾನು ನಿನ್ನೊಂದಿಗೇ ಇದ್ದರೂ ನನಗಾಗಿ
ಎಲ್ಲೊ ದೂರದಿ ಹುಡುಕಿ ಬಳಲುತಿರುವೆ||
ನಾನು ಚರ್ಮದೊಳಿಲ್ಲ ರೋಮದೊಳಗೂ ಇಲ್ಲ
ಅಸ್ಥಿಯಲೊ ಮಾಂಸದಲೊ ಹುದುಗಿಕೊಂಡಿಲ್ಲ|
ಗುಡಿಮಸೀದಿಯೊಳಿಲ್ಲ ಕಾಶಿಕೈಲಾಸದಲೊ
ದ್ವಾರಕೆ ಅಯೋಧ್ಯೆಯೊಳೊ ದೊರೆವನಲ್ಲ||
ಸಂನ್ಯಾಸದೊಳಗಿಲ್ಲ ವೈರಾಗ್ಯದೊಳಗಿಲ್ಲ
ಯೋಗಾದಿ ಸಿದ್ಧಿಗೂ ದೂರ ನಾನು|
ಶ್ರದ್ಧೆ ಎಲ್ಲಿರುವುದೊ ಅಲ್ಲಿ ದೊರೆಯುವೆ ನಾನು
ನನಗಾಗಿ ಹುಡುಕಿದರೆ ದೊರೆವೆ ನಾನು||
—ವಚನವೇದ
ಇದು ಯಾವ ರಾಗದ ಭಜನೆ ಸರ
ಮಾಲಕೌಂಸ್
ಇದರ ಗಾಯನದ/ ಬೋಧನೆಯ ಎರಡು ಮಾದರಿಗಳು ಇಲ್ಲಿದೆ:
https://youtu.be/fyuBNmDK9d4?si=pW37CdnOdF3VH92X
https://youtu.be/rScKV5rH5ko?si=EVViquuR1o4BIjhL
ದಯಮಾಡಿ ನೋಡಿ; ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.