ಎಲ್ಲಿದ್ದರೇನು ಶ್ರೀ ಹರಿಗಲ್ಲದವನು

ಎಲ್ಲಿದ್ದರೇನು ಶ್ರೀ ಹರಿಗಲ್ಲದವನು
ನಿಲ್ಲದೆ ಜಪಿಸಿದರೆ ಸಲ್ಲುವನೆ ಸದ್ಗತಿಗೆ

ಕಪ್ಪೆ ಕಮಲದ ಬಳಿಯೆ ತಪ್ಪದೆ ಅನುಗಾಲ |
ಇಪ್ಪುದೈ ಒಂದು ಅರೆ ಘಳಿಗೆ ಬಿಡದೆ ||
ಬಪ್ಪದಿಂದಲಿ ಅದರ ಪರಿಮಳದ ಸೊಬಗ ನೀ- |
ಕಪ್ಪೆ ವಾಸನೆಗೊಂಡು ಹರುಷಪಡಬಲ್ಲುದೆ ||1||

ಹಾಲುಕೆಚ್ಚಲು ಬಳಿಯೆ ತೊಣಸಿ ಹತ್ತಿಕೊಂಡು |
ಕಾಲವನು ಕಳೆವ ಬಗೆ ಬಲ್ಲಿರೆಲ್ಲ ||
ವೇಳೆವೇಳೆಗೆ ಹಸುವ ಕರೆದುಂಬ ನರನಂತೆ |
ಕೀಳು ತೊಣಸಿಯು ಉಂಡು ಹರುಷಪಡಬಲ್ಲ್ಲುದೆ||2||

ತುಳಸಿ ಸಾನ್ನಿಧ್ಯದಲಿ ನೀರುಳ್ಳಿಯನು ಹಾಕಿ |
ಹೊಲಸು ಹೋಗ್ವುದೆ ಹಲವು ಕಾಲಿದ್ದರೆ ||
ತಿಳಿವಳಿಕೆ ಇಲ್ಲದವ ಸಿರಿ ವಿಜಯವಿಠ್ಠಲನ
ಬಳಿಯಲಿದ್ದರೇನು ದೂರಿದ್ದರೇನು ||3||

Leave a Comment

Your email address will not be published. Required fields are marked *