ಎಂದಿಗಾಹುದೋ ನಿನ್ನ ದರುಶನ

ಎಂದಿಗಾಹುದೋ ನಿನ್ನ ದರುಶನ |
ಇಂದಿರೇಶ ಮುಕುಂದ ಕೇಶವ

ಗಾನಲೋಲನೆ ದೀನವತ್ಸಲ |
ಮಾನದಿಂದಲಿ ನೀನೆ ಪಾಲಿಸೋ ||1||

ಯಾರಿಗೆ ಮೊರೆ ಇಡುವೆ ಶ್ರೀ ಹರಿ |
ಸಾರಿ ಬಂದು ನೀ ಈಗಲೆ ಪೊರಿ ||2||

ಗಜವ ಪಾಲಿಸೊ ಗರುವದಿಂದಲಿ |
ಭುಜಗಶಯನ ಶ್ರೀ ವಿಜಯವಿಠಲಾ ||3||

Leave a Comment

Your email address will not be published. Required fields are marked *