ಇಕೋ ಈತ ವೆಂಕಟೇಶನೊ | ಭವದ |
ಸಿಕ್ಕು ಬಿಡಿಸಿ ನೆನದವರಿಗೆ ಸಿಕ್ಕಿ ಮನದಿಂದಗಲದಿಪ್ಪಾ
ಕರುಣ ಅರುಣ ಕಿರಣ ಪೋಲುವ |
ಚರಣ ಧರಣಿ ತರುಣಿ ಸ್ಮರಿಸಿ |
ಕರುಣಗಡಲಾ |
ಧರಣಿಯಿಂದ ಉದ್ಧರಣೆ ಮಾಡಿದೆ ಪರಣನೀತ ||1||
ಮಂಡಿಯ ಮಂಡನ |
ಕುಂಡಲ ಕಾಂತಿ |
ಗಂಡ ಸ್ಥಳದಲಿ ಮಿರುಗೆ ತುಲಸಿ |
ದಂಡೆ ಕೌಸ್ತುಭ ಭೂಷಣ ಕಾಲ | ಪೆಂಡೆಯಿಟ್ಟು ನಂದನೀತ ||2||
ತಂ (ತು) ವಾಹನ ಆ ಖಂಡಲ ಇಕ್ಷುಕೋ |
ದಂಡ ಪರಮೇಷ್ಠಿ |
ತೊಂಡರ ನಲಿದು ಕೊಂಡಾಡೆ ಚಂದಿರ ಮಂಡಲದೊಳು ಉ|
ದ್ದಂಡನಾಗಿಯಿಪ್ಪಾ | ಪುಂಡ ದೈವನೀತ ||3||
ಪಂಜಿನಸಾಲು ಪರಂಜಳಿ ವಾದ್ಯ ವಿ |
ರಂಜಿಸಲು e್ಞÁನ |
ಪುಂಜ ನಾರದ ಜಯ ಜಯ ಪೇಳಲು |
ಕಂಜಲೋಚನ ನಿರಂಜನ ದಾನವ ಭಂಜನ ಈಶಾ ||4||
ಕರದ ಜನಕೆ ಸುರಧೇನು ಇದು |
ನಿರುತದಲ್ಲಿ ಪೊರೆವ ಭಕ್ತರ |
ಕರಿಯ ಕಾಯ್ದ ವಿಜಯವಿಠ್ಠಲ |
ಪರಮ ಪುರುಷ ತಿರುಮಲನೀತ ||5||