ಇಂದು ನೋಡಿದೆ ಇಂದಿರೇಶ

ಇಂದು ನೋಡಿದೆ ಇಂದಿರೇಶ
ಮುಕುಂದನ ಮುದ್ದು ರೂಪವ ಕಳೆದೆ ಸಂತಾಪವ

ಪಂಚ ವರ್ಣದ ಪಕ್ಕಿ ಪೆಗಲಲ್ಲಿ
ಮಿಂಚಿನಂದದಿ ತೋರುತಾ ವರಗಳ
ಬೀರುತಾ ವೊಡನಿಪ್ಪ ಮಾರುತಾ ||1||

ಝಗಝಗಿಪ ಪದಯುಗಳ ಬಿಗಿದಪ್ಪಿ
ತೆಗೆಯದಲೆ ಮನಪಾಡಿದೆ ಕುಣಿ ಕುಣಿ
ದಾಡಿದೆ ಸಂತರ ಸಂಗ ಬೇಡಿದೆ ||2||

ಧನ್ಯನಾದೆನೊ ದಾನವಾರಿಯ ಘನ್ನ ವೈಭೋಗ ಕಂಡೆ ನಾ
ಪುಣ್ಯವನು ಕೈಕೊಂಡೆ ನಾ ನಾಮಾಮೃತ ಉಂಡೆ ನಾ ||3||

ಏನು ಪೇಳಲಿ ಗುರುಗಳ ಕೃಪೆ
ಸ್ವಾನೆ ನಿರುತ ಕರಗರವದು ಅಹಂಮತಿ
ಮರೆವದು ಸುರಗಣ ಪೊರೆವುದು ||4||

ಕÀಮಲಹರ ಶಿರ ವಿಜಯವಿಠ್ಠಲ
ಕಮಲಲೋಚನಾಭಾಸನ ಪನ್ನಗನಗ
ವಾಸನಾಗುಣ ಮಂದಹಾಸನಾ||5||

Leave a Comment

Your email address will not be published. Required fields are marked *